Fire Hen: ಕರ್ನಾಟಕದಲ್ಲಿ ಪತ್ತೆ ಆಯ್ತು ಬಾಯಲ್ಲಿ ಬೆಂಕಿ ಬಿಡೋ ಕೋಳಿ, ವಿಡಿಯೋ ಫುಲ್ ವೈರಲ್
ರಾಜ್ಯದಲ್ಲಿ ಫಾರಂ ಕೋಳಿ, ಗಿರಿರಾಜ ಕೋಳಿ, ನಾಟಿ ಕೋಳಿ ಹಾಗೂ ಖಡಕ್‌ನಾಥ್ ಕೋಳಿಗಳು ಮನೆಮಾತಾಗಿವೆ. ಚಿಕನ್ ಪ್ರಿಯರು ಹೆಚ್ಚಾಗಿರುವ ಕಾರಣ ಕೋಳಿಗಳ ಉದ್ಯಮವೂ ದೊಡ್ಡಮಟ್ಟದಲ್ಲೇ ಬೆಳೆದಿದೆ. ಆದರೆ, ರಾಜ್ಯದಲ್ಲಿ ಇದೀಗ ಹೊಸ ತಳಿಯ ಕೋಳಿಯೊಂದು ಸಖತ್ ಸದ್ದು ಮಾಡಿದೆ. ಇದನ್ನ ಜನ ಬೆಂಕಿ ಕೋಳಿ ಎಂದು ಕರೆಯುತ್ತಿದ್ದಾರೆ. ಈ ಹೆಸರು ಬರಲು ಕಾರಣ ಈ ಕೋಳಿ ಬಾಯಲ್ಲಿ ಬರುವ ಬೆಂಕಿ..!
ಹೌದು, ಕೋಳಿಗಳ ಬಾಯಲ್ಲಿ ಸಾಮಾನ್ಯವಾಗಿ ನಾವೆಲ್ಲ ಕೊಕ್ಕೊಕೋಕೋ....ಎನ್ನುವ ಅಲಾರಂ ಸದ್ದನ್ನಷ್ಟೇ ಕೇಳಿದ್ದೆವು. ಆದರೆ ಕರ್ನಾಟಕದಲ್ಲೇ ಬಾಯಲ್ಲಿ ಬೆಂಕಿ ಬಿಡುವ ಕೋಳಿಯೊಂದು ಎಲ್ಲರನ್ನು ಅಚ್ಚರಿಗೊಳಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಕೋಳಿಯ ಬಾಯನ್ನು ಸ್ಪರ್ಶಿಸಿದಾಗ ಅಲ್ಲಿಂದ ಸುಡುವ ಬೆಂಕಿ ಹಾಗೂ ಹೊಗೆ ಹೊರಬರುತ್ತಿದೆ.

ವೈರಲ್ ಆಗಿರುವ ಈ ವಿಡಿಯೋ ಕರ್ನಾಟಕದ ಸಕಲೇಶಪುರದ ಬಳಿಯ ಹದಿಗೆ ಗ್ರಾಮದ್ದು ಎಂದು ಮಾಧ್ಯಮಗಳಲ್ಲಿ ಎಂದು ವರದಿಯಾಗಿದೆ. ಸತ್ತ ಕೋಳಿಯ ಬಾಯಲ್ಲಿ ನಿಗೂಢವಾಗಿ ಬೆಂಕಿಯನ್ನು ಹೊರಸೂಸುತ್ತಿದೆ ಎಂದು ಹಲವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿ ಊರಿನ ಕಾರ್ಮಿಕರು ಸಾಕಿದ್ದ ಬರೋಬ್ಬರಿ ಹದಿನೈದಕ್ಕೂ ಹೆಚ್ಚು ಕೋಳಿಗಳು ದಿಢೀರ್ ಸಾವನ್ನಪ್ಪಿವೆ.
ಯಾರೋ ಹೊಟ್ಟೆಕಿಚ್ಚಿನಿಂದ ಈ ಕೋಳಿಗಳಿಗೆ ವಿಷವುಣಿಸಿದ್ದಾರೆ ಎನ್ನುವ ಆರೋಪವೂ ಇದೆ. ಆದರೆ, ಈ ಸತ್ತ ಕೋಳಿಯ ಬಾಯಲ್ಲಿ ಬೆಂಕಿ ಹೊರಬರುತ್ತಿರುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದನ್ನು ಕಂಡು ಹದಿಗೆ ಗ್ರಾಮಸ್ಥರೆಲ್ಲ ಗಾಬರಿಯಾಗಿದ್ದಾರೆ. ಸತ್ತ ಕೋಳಿಯೊಂದರನ್ನು ಬಾಯನ್ನು ಸ್ಪರ್ಶಿಸಿದಾಗ ಅದರ ಬಾಯಿಂದ ಬೆಂಕಿ ಉಂಡೆಗಳು ಹೊರಬರುತ್ತಿರುವುದು ವಿಡಿಯೋದಲ್ಲಿದೆ. ಸತ್ತ ಕೋಳಿ ಬಾಯಿಂದ ಬೆಂಕಿ ಈ ರೀತಿ ಹೊರಬರಲು ಹೇಗೆ ಸಾಧ್ಯ? ಎಂದು ಇದು ವಿಜ್ಞಾನ ಲೋಕಕ್ಕೂ ಸವಾಲೊಡ್ಡಿದೆ.

ಕೋಳಿಗಳ ಸಾವಿನ ಬಗ್ಗೆ ಗ್ರಾಮಸ್ಥರು ಹಲವು ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಬೇಕು ಎಂದೂ ಆಗ್ರಹಿಸಿದ್ದಾರೆ. ಇನ್ನು ಈ ಕೋಳಿಗಳ ಮಾಲೀಕ ರವಿ ಎಂದು ತಿಳಿದುಬಂದಿದೆ. ಸತ್ತ ಕೋಳಿಯನ್ನು ಕುತ್ತಿಗೆ ಹಾಗೂ ಹೊಟ್ಟೆಯನ್ನು ಅಮುಕಿದಾಗ ಉಸಿರಾಡುವ ಗಾಳಿಯಂತೆ ಕೋಳಿಯ ಒಳಭಾಗದಿಂದ ಬೆಂಕಿ ಹೊರಸೂಸಿದೆ. ಇದನ್ನು ಕಂಡು ಶಾಕ್ ಆದ ರವಿ ಅವರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಶೇರ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಕೋಳಿಗಳ ನಿಗೂಢ ಸಾವಿನ ಬಗ್ಗೆ ಹಲವು ಪ್ರಶ್ನೆಗಳನ್ನು ಜನ ಮುಂದಿಟ್ಟಿದ್ದಾರೆ. ಕೋಳಿ ಸತ್ತ ಮೇಲೂ ಬಾಯಲ್ಲಿ ಬೆಂಕಿ ಬರಲು ಯಾವುದೇ ಅಪಾಯಕಾರಿ ಕೆಮಿಕಲ್ ತಿಂದಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಕೋಳಿ ಬಹುಶಃ ಡ್ರ್ಯಾಗನ್ ವಂಶಕ್ಕೆ ಸೇರಿದ್ದಿರಬೇಕು ಎಂದೂ ಹಾಸ್ಯ ಮಾಡಿದ್ದಾರೆ. ಆದರೆ, ಕೋಳಿ ಬಾಯಲ್ಲಿ ಬೆಂಕಿ ಬರುವುದಕ್ಕೆ ನಿಖರ ಕಾರಣ ತಿಳಿಯದೆ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆ ಈವರೆಗೂ ತಿಳಿದುಬಂದಿಲ್ಲ.












Click it and Unblock the Notifications