Viral Video: ಆರ್ಡರ್ ಮಾಡಿದ್ದು ಪನೀರ್ ಬಿರಿಯಾನಿ, ಬಂದಿದ್ದೇ ಬೇರೆ: ಗ್ರಾಹಕನಿಗೆ ಝೋಮಾಟೋ ಪ್ರತಿಕ್ರಿಯೆ

ಬೆಂಗಳೂರು, ಮೇ 13: ಇಂದಿನ ಆನ್‌ಲೈನ್ ಯುಗದಲ್ಲಿ ಆಹಾರವನ್ನು ಆನ್‌ಲೈನ್ ನಲ್ಲಿ ಆರ್ಡರ್ ಮಾಡಬಹುದೆಂಬ ಸಂಗತಿ ಎಲ್ಲರಿಗೂ ಗೊತ್ತಿರುವಂತದ್ದು. ಆದರೆ ಎಷ್ಟೋ ಭಾರಿ ಆಹಾರ ಪೂರೈಕೆಯಲ್ಲಿ, ಇಲ್ಲವೇ ಆಹಾರದಲ್ಲಿ ಲೋಪದೋಷಗಳು ಉಂಟಾಗುತ್ತಿವೆ. ಅಂಥವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಾರೆ.

ನಾವು ಹೇಳ ಹೊರಟಿರುವ ಸುದ್ದಿ ಸಹ ಇದಕ್ಕೆ ಸಂಬಂಧಿಸಿದ್ದಾಗಿದೆ. ಪುಣೆಯಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಆನ್‌ಲೈನ್ ಫುಡ್ ಡೆಲಿವರಿ ಆಪ್ ಮೂಲಕ ನಗರದ ಪ್ರಮುಖ ರೆಸ್ಟೋರೆಂಟ್ ನಿಂದ ಆಹಾರ ಆರ್ಡರ್‌ ಮಾಡಿದ್ದರು. ಆದರೆ ಬಂದ ಆರ್ಡರ್ ನೋಡಿ ಆ ವ್ಯಕ್ತಿ ಅಚ್ಚರಿಗೆ ಒಳಗಾಗಿದ್ದಾರೆ.

Viral Video Chicken Found in Paneer Biryani A Man Order in Zomato App

ಆರ್ಡರ್ ಮಾಡಿದ್ದೇ ಬೇರೆ, ಪಡೆದದ್ದೆ ಬೇರೆ..!

ಈ ವ್ಯಕ್ತಿ ಆನ್‌ಲೈನ್‌ನಲ್ಲಿ ಪನ್ನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಇನ್ನೇನು ಡೆಲಿವರಿ ಆಯ್ತು ಹಸಿದ ಹೊಟ್ಟೆಗೆ ಬಿಸಿ ಊಟ ಸಿಕ್ಕಿದೆ ಎಂದು ತೆರೆದು ನೋಡಿದರೆ, ಒಳಗೆ ಚಿಕನ್ ಪೀಸ್ ಇರುವುದು ಗೊತ್ತಾಗಿದೆ. ಆರ್ಡರ್ ಮಾಡಿದ್ದು ಒಂದಾದರೆ, ಡೆಲಿವರಿ ಆಗಿದ್ದೆ ಬೇರೆ.

ಕೂಡಲೇ ಗ್ರಾಹಕರು ಆದ ಪ್ರಮಾದವನ್ನು ತಿಳಿಸಿಲು ಗ್ರಾಹಕ ಯಶ್ ಗಡೆ ಅವರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಟ್ವಿಟ್ಟರ್ (ಎಕ್ಸ್) ನಲ್ಲಿ ಅವರು ಈ ಕುರಿತು ಪೋಸ್ಟ್ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ. ಫೋಟೋ ಮತ್ತು ವಿಡಿಯೋ ಸಹಿತ ಹಂಚಿಕೊಂಡಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದ ಗ್ರಾಹಕ

ಪುಣೆಯ ಕರವೇ ನಗರದಲ್ಲಿರುವ ಪಿ.ಕೆ ಬಿರಿಯಾನಿ ಹೌಸ್‌ನಿಂದ ಫುಡ್ ಡೆಲಿವರಿ ಆಪ್ ಜೊಮಾಟೊ ನಲ್ಲಿ ಪನೀರ್ ಬಿರಿಯಾನಿಯನ್ನು ಅವರು ಆರ್ಡರ್ ಮಾಡಿದ್ದೆ. ನಾನು ಸಸ್ಯಾಹಾರಿಯಾಗಿದ್ದು, ವೆಜ್ ಆರ್ಡರ್ ಮಾಡಿದ್ದೆ. ಆದರೆ ಅದರಲ್ಲಿ ಚಿಕನ್ ಪೀಸ್ ಸಿಕ್ಕಿದೆ. ಸದ್ಯ ಹಣ ಮರುಪಾವತಿ ಆಗಿದೆ. ಆದರೆ ಸಸ್ಯಹಾರಿಯಾಗಿರುವ ನನಗೆ ಈ ರೀತಿ ಆಗಿದ್ದರಿಂದ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಝೊಮಾಟೊ ಹೇಳಿದ್ದೇನು?

ಯಶ್ ಗೇಡ್ ಅವರ ಪೋಸ್ಟ್‌ಗೆ ನೋಡಿ ಝೊಮಾಟೊ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಈ ಘಟನೆಯಿಂದ ನಿಮಗೆ ನೋವುಂಟಾಗಿದೆ ಎಂದು ನಮಗೆ ಅರ್ಥವಾಗಿದೆ. ನಿಮ್ಮಿಷ್ಟದ ಆಹಾರ ಸೇವಿಸಲು, ನಿಮ್ಮ ಆಯ್ಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ವಿಚಾರದಲ್ಲಿ ನಿಮ್ಮನ್ನು ಅಗೌರಿಸುವ ಉದ್ದೇಶ ನಮ್ಮದಲ್ಲ. ನಾವು ಅಂತಹ ಉದ್ದೇಶ ಹೊಂದಿಲ್ಲ.

ದಯಮಾಡಿ ನೀವು ಮಾಡಿದ ಆರ್ಡರ್‌ನ ಐಡಿಯನ್ನು ಡಿಎಂ ಮೂಲಕ ಹಂಚಿಕೊಳ್ಳಿ. ಇದರಿಂದ ಆದ ಸಮಸ್ಯೆಯನ್ನು ಪರಿಹರಿಸಬಹುದು. ಅಲ್ಲದೇ ರೆಸ್ಟೋರೆಂಟ್ ಪಾಲುದಾರರಿಗೂ ಅಗತ್ಯ ಸಲಹೆ, ನಿರ್ದೇಶನಗಳನ್ನು ನೀಡಬಹುದು ಎಂದು ಝೊಮಾಟೊ ಪ್ರತಿಕ್ರಿಯಿಸಿದೆ.

ಕಾಫಿಯಲ್ಲಿ ಚಿಕನ್ ಪೀಸ್

ಇದೇ ರೀತಿ ವಾರಣಾಸಿಯಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಕುಟುಂಬ ಸದಸ್ಯರಿಗೆಂದು ಬೆಹ್ರೂಜ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಪನೀರ್ ಬಿರಿಯಾನಿ ಬದಲಾಗಿ ಅಲ್ಲಿಯೂ ಚಿಕನ್ ಬಿರಿಯಾನಿ ಡೆಲಿವರಿ ಆಗಿತ್ತು. ಇದಷ್ಟೇ ಅಲ್ಲದೇ ಮತ್ತೊಬ್ಬರು ವ್ಯಕ್ತಿಯು ತಾನು ಕುಡಿಯುವ ಕಾಫಿಯಲ್ಲಿ ಚಿಕನ್ ಪೀಸ್ ಸಿಕ್ಕಿರುವುದಾಗಿ ಹೇಳಿಕೊಂಡಿದ್ದ, ಅದನ್ನು ತಾನು ಝೊಮಾಟೊದಲ್ಲಿ ಆರ್ಡರ್ ಮಾಡಿದ್ದಾಗಿ ಹೇಳಿಕೊಂಡಿದ್ದನ್ನು ಈ ವೇಳೆ ಗಮನಿಸಬಹುದು.

ಹೀಗೆ ಆನ್‌ಲೈನ್ ನಲ್ಲಿ ಊಟ ಆರ್ಡರ್ ಮಾಡಿದವರ ಪೈಕಿ ಕೆಲವರ ಕಹಿ ಅನುಭವ ಎದರಿಸಿದ್ದಾರೆ. ಇನ್ನೂ ಕೆಲವೊಮ್ಮೆ ಊಟದಲ್ಲಿ ವಿಷಯಕಾರಿ ಹಲ್ಲಿ, ಇಲಿ ಯಂತ, ಕೀಟ, ಪ್ರಾಣಿಗಳು ಆಗಿರುವ ಉದಾಹರಣೆಗಳಿವೆ. ಆದ್ದರಿಂದ ಗ್ರಾಹಕರು ಊಟ ತರಿಸಿದ ಮೇಲೆ ಪರಿಶೀಲಿಸಿಕೊಳ್ಳುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+