ಬೆಕ್ಕಿನ ಮರಿಗಳಿಗೆ ಬೆಚ್ಚನೆ ಆಶ್ರಯ ಕೊಟ್ಟ ಕೋಳಿ

"ಪ್ರಾಣಿಗಳೇ ಗುಣದಲಿ ಮೇಲೂ ಮಾನವನದಕ್ಕಿಂತ ಕೀಳು.." ಎನ್ನುವ ಕನ್ನಡ ಹಾಡೊಂದಿನ ಸಾಲಿಗೆ ಅನ್ವರ್ಥ ಎನ್ನುವಂತೆ ಇಲ್ಲೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಬೆಕ್ಕಿನ ಮರಿಗಳಿಗೆ ಕೋಳಿಯೊಂದು ಬೆಚ್ಚಗಿನ ಆಶ್ರಯ ನೀಡಿದ್ದು, ನೆಟ್ಟಿಗರು ಈ ಚಿತ್ರಕ್ಕೆ ಮನಸೋತಿದ್ದಾರೆ.

ಚಂಡಮಾರುತದ ಸಮಯದಲ್ಲಿ ಪುಟ್ಟ ಬೆಕ್ಕಿನ ಮರಿಗಳನ್ನು ಕೋಳಿ ತನ್ನ ರೆಕ್ಕೆಗಳ ಅಡಿಯಲ್ಲಿ ಅಡಗಿಸಿಕೊಂಡು ಆಶ್ರಯ ನೀಡುತ್ತಿರುವ ಫೋಟೋ ಈಗ ವೈರಲ್ ಆಗಿದೆ.

ಭಾನುವಾರ ಬ್ಯುಟೆಂಗೆಬೈಡೆನ್ (Buitengebieden) ಎನ್ನುವ ಟ್ವಿಟರ್‌ ಅಕೌಂಟ್‌ನಲ್ಲಿ ಹಂಚಿಕೊಂಡ ವೈರಲ್ ಚಿತ್ರಕ್ಕೆ, "ಚಂಡಮಾರುತದ ಸಮಯದಲ್ಲಿ ಹೆದರಿದ ಬೆಕ್ಕುಗಳ ಆರೈಕೆ ಮಾಡುವ ಕೋಳಿ" ಎಂದು ಶೀರ್ಷಿಕೆ ನೀಡಲಾಗಿದೆ. ಆದರೆ ಈ ಫೋಟೊ ಎಲ್ಲಿ ತೆಗೆದದ್ದು ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

ನೆಟ್ಟಿಗರ ಮನಗೆದ್ದು ವೈರಲ್ ಆಗಿರುವ ಈ ಟ್ವೀಟ್‌ 97 ಸಾವಿರಕ್ಕೂ ಹೆಚ್ಚು ಲೈಕ್ ಗಿಟ್ಟಿಸಿಕೊಂಡಿದೆ. 10 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. ಕೋಳಿ-ಬೆಕ್ಕಿನ ಫೋಟೊ ಇಟ್ಟುಕೊಂಡು ಹಲವಾರು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಾಣಿಗಳನ್ನು ನೋಡಿ ನಾವು ಕಲಿಯಬೇಕಾದ್ದು ಬಹಳ ಇದೆ ಎನ್ನುವಂತ ಸಂದೇಶಗಳು ಕೂಡ ಹರಿದಾಡ್ತಿವೆ.

ತಾಯಿ ಎಂದಿಗೂ ತಾಯಿಯೇ

ತಾಯಿ ಎಂದಿಗೂ ತಾಯಿಯೇ

ಟ್ವೀಟ್‌ ಹಂಚಿಕೊಂಡಿರುವ ಬಳಕೆದಾರರು, ಕೋಳಿಯದ್ದು ಅಮ್ಮನ ಹೃದಯ, ತಾಯಿ ಎಲ್ಲಿದ್ದರೂ ತಾಯಿಯೇ ಆಗಿರುತ್ತಾರೆ. ಮಕ್ಕಳಲ್ಲಿ ಅವರು ಬೇದಭಾವ ಮಾಡಲ್ಲ ಎಂದು ಬೆಕ್ಕಿನ ಕಾಳಜಿ ಮಾಡಿರುವ ಕೋಳಿಯನ್ನು ಕೊಂಡಾಡಿದ್ದಾರೆ.

ಲೂರಾ ಎನ್ನುವವರು ಟ್ವೀಟ್ ಹಂಚಿಕೊಂಡಿದ್ದು, "ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗಿಂದ ಹೆಚ್ಚಾಗಿ ಪ್ರಾಣಿಗಳಲ್ಲೇ ಮಾನವೀಯತೆ ಗುಣ ಕಂಡುಬರುತ್ತಿದೆ. ಇದನ್ನು ನೋಡಿ ನಾವು ತಲೆ ತಗ್ಗಿಸಬೇಕು, ನಮ್ಮದು ನಾಚಿಕೆಯಿಲ್ಲದ ಜನ್ಮ" ಎಂದಿದ್ದಾರೆ.

ಮನುಷ್ಯ ಪ್ರಾಣಿಗಳನ್ನು ನೋಡಿ ಕಲಿಯಲಿ

ಮನುಷ್ಯ ಪ್ರಾಣಿಗಳನ್ನು ನೋಡಿ ಕಲಿಯಲಿ

"ಪ್ರಾಣಿಗಳನ್ನು ನೋಡಿ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಡೆನಿಸ್ ಕ್ರುಷೆ ಎನ್ನುವ ಹೆಸರಿನ ಮತ್ತೊಬ್ಬ ಟ್ವಿಟರ್ ಬಳಕೆದಾರರು ಮರುಟ್ವೀಟ್ ಮಾಡಿದ್ದು ಉತ್ತಮ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. "ವಿವಿಧ ಜಾತಿಯ ಪ್ರಾಣಿಗಳಲ್ಲಿ ಅದ್ಭುತವಾದ ಸಹಾನಭೂತಿಯೊಂದಿಗೆ ಬಲಶಾಲಿಗಳಾದವರು ದುರ್ಬಲರನ್ನು ರಕ್ಷಣೆ ಮಾಡುತ್ತಾರೆ. ಸುಂದರವಾದ ಪ್ರಾಣಿಗಳಿಂದ ಮನುಷ್ಯರು ತುಂಬಾ ಕಲಿಯಬಹುದು" ಎಂದು ಟ್ವೀಟ್ ಮಾಡಿದ್ದಾರೆ.

ಹೇಗೆ ಬದುಕಬೇಕು ಎನ್ನುವ ಸಂದೇಶ

ಟ್ವಿಟರ್‌ನಲ್ಲಿ ಬೇರೆಲ್ಲಾ ಬೇಡದ ಸಂದೇಶಗಳನ್ನು ನೋಡುವುದಕ್ಕೂ ಮೊದಲು, ಒಂದು ಕ್ಷಣ ಬಿಡುವು ಮಾಡಿಕೊಂಡು ಈ ಫೋಟೋ ನೋಡಿ, ಮನಸ್ಸಿಗೆ ಮುದ ನೀಡುವ ಘಳಿಗೆ ಇದು. ನಾವು ಅವುಗಳನ್ನು ಪ್ರಾಣಿಗಳೆಂದು ಕರೆಯುತ್ತೇವೆ.. ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಡೇವ್ ಮೆರಿಟ್ ಎನ್ನುವವರು ಟ್ವೀಟ್ ಮಾಡಿ, "ನಿಮ್ಮ ಜೀವನವನ್ನು ಹೇಗೆ ಬದುಕಬೇಕು, ರಾಜಕೀಯ ನಾಯಕರಲ್ಲಿ ಯಾವ ಗುಣವನ್ನು ನೋಡಬೇಕು ಎನ್ನುವುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು ಈ ಫೋಟೋದಲ್ಲಿದೆ" ಎಂದು ಹೇಳಿದ್ದಾರೆ.

ಮನಗೆಲ್ಲುವ ಮುದ್ದಾದ ಪ್ರಾಣಿಗಳ ಫೋಟೋಗಳು

ಬುಟೆಂಗ್‌ಬೈಡೆನ್ (Buitengebieden) ಟ್ವಿಟರ್ ಖಾತೆಯಲ್ಲಿ ಇದೇ ರೀತಿಯ ಹಲವು ಫೋಟೊ, ವೀಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ಖಾತೆಯಲ್ಲಿ ಹಂಚಿಕೊಳ್ಳುವ ಹಲವು ಫೋಟೊ, ವೀಡಿಯೋಗಳು ವೈರಲ್ ಆಗಿದ್ದು, ಲಕ್ಷಾಂತರ ಜನರ ಮನ ಗೆದ್ದಿವೆ.

ತುಂಟಾಟ ಆಡುವ ಪುಟ್ಟ ನಾಯಿ, ಬೆಕ್ಕುಗಳು, ಮುದ್ದಾದ ಪಕ್ಷಿಗಳು, ಸಾಕು ಪ್ರಾಣಿಗಳ ಜೊತೆ ಆಟವಾಡುವ ಮಕ್ಕಳ ವೀಡಿಯೋಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+