ವಿಡಿಯೋ: ಮೆಟ್ರೋದಲ್ಲಿ ಟವೆಲ್ ಕಟ್ಟಿಕೊಂಡು ಓಡಾಡಿದ ಯುವಕ
ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಹಾಸ್ಯಾಸ್ಪದ ವಿಡಿಯೋಗಳು ಬಹುಬೇಗ ವೈರಲ್ ಆಗಿ ಬಿಡುತ್ತವೆ. ಕೆಲವರು ತಿಳಿದು ತಿಳಿಯದೋ ಮಾಡುವ ವಿಡಿಯೋಗಳು ನೋಡುಗರಿಗೆ ನಗು ತರಿಸದೇ ಇರದು. ಸದ್ಯ ಅಂತಹ ಒಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕನೊಬ್ಬ ದೆಹಲಿ ಮೆಟ್ರೋದಲ್ಲಿರುವ ಪ್ರಯಾಣಿಕರನ್ನು ನಗಿಸಿದ್ದಾನೆ. ಅದು ಹೇಗೆ ಅನ್ನೋ ವಿಚಾರ ಕೇಳಿದರೆ ನಿಮಗೂ ನಗು ಬಾರದೇ ಇರದು.
ನಮ್ಮ ಜೀವನಶೈಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಅದರಲ್ಲೂ ಫ್ಯಾಷನ್ ವಿಚಾರದಲ್ಲಿ ಎಲ್ಲವೂ ಬದಲಾಗಿ ಹೋಗಿದೆ. ಇದು ಯಾವಾಗ ಹೇಗೆ ಬದಲಾಗುತ್ತೋ ಹೇಳಲಾಗದು. ಫ್ಯಾಷನ್ ಮಾಡುವ ಹುಡುಗನ ಒಂದು ಉಲ್ಲಾಸದ ಕುಚೇಷ್ಟೆಯ ವಿಡಿಯೋ ವೈರಲ್ ಆಗಿದೆ. ಈ ತಮಾಷೆಯ ವಿಡಿಯೋದಲ್ಲಿ ಯುವಕನೊಬ್ಬ ದೆಹಲಿ ಮೆಟ್ರೋದಲ್ಲಿ ಟವೆಲ್ ಹಾಕಿಕೊಂಡಿರುವುದು ಕಂಡು ಬಂದಿದೆ. ಪ್ಯಾಂಟ್ ಬದಲಿಗೆ ಟವೆಲ್ ಹಾಕಿಕೊಂಡ ಹುಡುಗನನ್ನು ಕಂಡು ಮೆಟ್ರೋದಲ್ಲಿದ್ದವರು ಮುಸು ಮುಸು ನಕ್ಕಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.

ಹಳದಿ ಟವೆಲ್ ಧರಿಸಿ ದೆಹಲಿ ಮೆಟ್ರೋ ರೈಲಿಗೆ ಹತ್ತಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಅಲೆದಾಡಿದ್ದಾರೆ. ಸೊಂಟಕ್ಕೆ ಸುತ್ತಿದ ಟವೆಲ್ ಮೇಲೆ ಬಿಳಿಯ ಶರ್ಟ್ ಧರಿಸಿದ್ದಾನೆ. ತಕ್ಷಣ ವೈರಲ್ ಆದ ಈ ವಿಡಿಯೋವನ್ನು ಮೋಹಿತ್ ಗೌಹರ್ ಶೇರ್ ಮಾಡಿದ್ದಾರೆ. 'ಟ್ಯಾಂಕ್‌ನಲ್ಲಿನ ನೀರು ಖಾಲಿಯಾಗಿದೆ. ನಾನು ಇಂದು ಕಚೇರಿಯಲ್ಲಿ ಸ್ನಾನ ಮಾಡುತ್ತೇನೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.
ನಗು ತಡೆಯಲಾಗದೆ ಕೆಲವು ಪ್ರಯಾಣಿಕರ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ.












Click it and Unblock the Notifications