Viral Video: 'ಭಾರತೀಯ ಹುಡುಗನ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನಿ ಯುವತಿ'- ವಿಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ವಿಡಿಯೋ ಬಂದ ಮೇಲೆ ಏನೆ ಮಾಡಿದರೂ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವರು ವೈರಲ್ ಆಗಲೆಂದೆ ವಿಶಿಷ್ಟ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಾರೆ. ಇದೀಗ ಪಾಕಿಸ್ತಾನಿ ಯುವತಿ ಭಾರತೀಯ ಯುವಕನನ್ನು ಪ್ರೀತಿಸಿ ಆತಂಕಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಯುವತಿ ಸಂಕಟಕ್ಕೆ ಅನೇಕರು ಕಾಮೆಂಟ್ ಮೂಲಕ ಸ್ಪಂದಿಸಿದ್ದಾರೆ.
ವೈರಲ್ ಆಗಿರುವ ಈ ವೀಡಿಯೊದಲ್ಲಿ, ಪಾಕಿಸ್ತಾನ ದೇಶದ ವಿಡಿಯೋ ಕಂಟೆಂಟ್ ಕ್ರಿಯೇಟರ್ ಐಮೆನ್ ಸಾಜಿದ್ ಎಂಬ ಯುವತಿ ಭಾರತದ ಹುಡುಗನ ಪ್ರೀತಿ ಕುರಿತು ವಿಡಿಯೋ ಮಾಡಿದ್ದಾಳೆ. ಅದು ಸಖತ್ ವೈರಲ್ ಆಗುತ್ತಿದೆ. ಭಾರತದ ಹುಡುಗನನ್ನು ಪ್ರೀತಿಸಿದರೆ ಏನೆಲ್ಲ ತೊಂದರೆಗಳು ಉಂಟಾಗುತ್ತವೆ. ಎದುರಿಸಬೇಕಾದ ಪರಿಣಾಮಗಳನ್ನು ಬಿಂಬಿಸುವ ವಿಡಿಯೋ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಈ ವಿಡಿಯೋ ಮನರಂಜನೆಯ ದೃಷ್ಟಿಯಿಂದ ಮಾಡಿದ್ದಾಗಿಯೂ ತಿಳಿದು ಬಂದಿದೆ. ಕೆಲವರು ಯುವತಿ ಐಮೆನ್ ಅವರ ವೀಡಿಯೊ ನಿಜವಾಗಿದ್ದೇ ಆದಲ್ಲಿ ಅಥವಾ ನಿಶ್ಚಿತಾರ್ಥದ ಉದ್ದೇಶಕ್ಕಾಗಿ ಈ ವಿಡಿಯೋ ಮಾಡಿರಬಹುದು ಎಂಬಿತ್ಯಾದಿ ಕಾಮೆಂಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಂಥದ್ದೇನಿದೆ?
ಮನೆ ಮೇಲ್ಛಾವಣಿ ಮೇಲೆ ಐಮೆನ್ ಪ್ರಿಯಕರನನ್ನು ನೆನಸಿಕೊಂಡು ಕಣ್ಣೀರಿಡುವ, ಹೆಚ್ಚು ದುಃಖಿತಳಾದಂತೆ ಕಾಣಿಸುತ್ತಾಳೆ. ತಲೆ ಮೇಲೆ ಕೈ ಹೊತ್ತು ಕೂರುವ ದೃಶ್ಯವನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋದ ಮೇಲೆ ಶಿರ್ಷಿಕೆ ಇದ್ದು, ಅದರಲ್ಲಿ "ಕ್ಯಾ ಕರೂನ್ (ನಾನು ಏನು ಮಾಡಬೇಕು)" ಎಂದು ಕೇಳುತ್ತಾಳೆ, ನೀವು ನಿಮ್ಮ ಪ್ರೀತಿಯನ್ನು ಹುಡುಕುವಲ್ಲಿ ಹುಡುಕಿದ್ದೀರಿ, ಆದರೆ ಪ್ರೀತಿಸುವವರ ಭಾರತೀಯ ನೀವು ಪಾಕ್ತಿಸ್ತಾನ ದೇಶದವಳಾದರೆ'' ಏನು ಮಾಡಬೇಕು. ಹೀಗೆಂದು ತಲೆ ಮೇಲೆ ಕೈಇಟ್ಟುಕೊಂಡು ಕಣ್ಣೀರಿಡುವ ದೃಶ್ಯದ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
11 ಲಕ್ಷಕ್ಕೂ ಹೆಚ್ಚು ವಿವ್ಸ್, ಕಾಮೆಂಟ್ಸ್ ಹೇಗಿವೆ?
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಆಗುತ್ತಿದ್ದಂತೆ ಲಕ್ಷಗಟ್ಟಲೆ ವೀಕ್ಷಣೆ ಪಡೆದಿದೆ. ಸುಮಾರು 11 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಕಣ್ತುಂಬಿಕೊಂಡಿದ್ದಾರೆ. ಕೆಲವರು ಈ ದುಃಖಿತ ಯುವತಿಗೆ ಮರುಗಿದ್ದಾರೆ. ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅನೇಕರು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರು ಮಾಡಿರುವ ಕಾಮೆಂಟ್ ನೋಡಿದರೆ, ಎರಡು ದೇಶಗಳ ನಡುವಿನ ವಿಭಜನೆಯನ್ನು ಇದು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ. ಐಮೆನ್ ಅವರ ಪ್ರೇಮಕಥೆಯು ಭೌಗೋಳಿಕ ರಾಜಕೀಯ ವಿಭಜನೆಯನ್ನು ಜಯಿಸಬಹುದು. ಇಬ್ಬರು ಒಂದಾಗಬಹುದೆಂಬಂತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ನೀವು ವಾಘಾ ಗಡಿಯಲ್ಲಿ ನಿಮ್ಮ ಪ್ರೀತಿಯ ಹುಡುಗನನ್ನು ಭೇಟಿಯಾಗಿ ಎಂದು ಸಲಹೆ ಕೊಟ್ಟಿದ್ದಾರೆ.
ಈ ಯುವತಿ ಮನವರಂಜನೆಗಾಗಿ ಇಂತಹ ವಿಡಿಯೋ ಮಾಡುತ್ತಾರೆ ಬಂದಿದ್ದಾರೆ ಎಂದು ಅವರ ಪ್ರೊಫೈಲ್ ನೋಡಿದರೆ ಅನ್ನಿಸುತ್ತದೆ. ಸದ್ಯ ಈ ವಿಡಿಯೋ ಅನ್ನು ಯಾರು ಗಂಭೀರವಾಗಿ ಪರಿಗಣಿಸದೇ ಮನರಂಜನೆ ದೃಷ್ಟಿಯಿಂದ ನೋಡಿದ್ದಾರೆ.












Click it and Unblock the Notifications