Video Viral: ಎರಡು ಕೈಗಳು ಇಲ್ಲದಿದ್ದರೂ ಡೆಲಿವರಿ ಬಾಯ್ ಆಗಿ ಕೆಲಸ, ಸ್ಫೂರ್ತಿದಾಯಕ ವ್ಯಕ್ತಿಯ ವಿಡಿಯೋ
Viral Video: ಇಂದಿನ ದುಬಾರಿ ಕಾಲದಲ್ಲಿ ಮನೆ ಮಂದಿ ದುಡಿದರೂ ತೀರದ ಪರಿಸ್ಥಿತಿ ಇದೆ. ಅಂಥದರಲ್ಲಿ ಕೆಲವು ಕೈ ಕಾಲುಗಳು ಗಟ್ಟಿ ಇದ್ದರೂ ಸಹಿತ ದುಡಿದು ತಿನ್ನಲು ಹಿಂದೆ ಮುಂದೆ ನೋಡುತ್ತಾರೆ. ಸಣ್ಣ ಸಣ್ಣ ಕೆಲಸ ಮಾಡಲು ಹಿಂದೇಟು ಹಾಕುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತಿ ಸ್ವಾವಲಂಬಿಯಾಗಿದ್ದಾರೆ. ಆ ಮೂಲಕ ಇತರರಿಗೂ ಸ್ಪೂರ್ತಿಯಾಗಿದ್ದಾರೆ.
ಹೌದು, ಅಂಗ್ಯವೈಕಲ್ಯ ಇರುವ ವ್ಯಕ್ತಿಯು ಝೊಮಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ವಿಡಿಯೋ ತುಣಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವ್ಯಕ್ತಿಗೆ ಎರಡು ಕೈಗಳು ಇಲ್ಲ. ಹೀಗಿದ್ದರೂ ಸಹಿತ ದುಡಿದು ತಿನ್ನಬೇಕು ಎಂಬುವವರ ಸಾಲಿನಲ್ಲಿ ಮೊದಲು ನಿಲ್ಲುತ್ತಾರೆ.

ಕಾರಣ ಅವರು ಸ್ಕೂಟರ್ ಮೂಲಕ ಮನೆ ಮನೆಗೆ ತೆರಳಿ ಝೋಮಾಟೋ ಫುಡ್ ಡೆಲಿವರಿ ಮಾಡುವ ಮುಖೇನ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರನ್ನು ನೋಡಿದರೆ ಎಂಥವರಿಗೂ ನಾನು ಹೆಚ್ಚು ಕೆಲಸ ಮಾಡಬೇಕು ಎಂದುಕೊಳ್ಳದೇ ಇರಲಾರರು.
ಬದುಕಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಮಾತಿಗೆ ಸೂಕ್ತವಾಗಿರುವ ಈ ವ್ಯಕ್ತಿಯು ಝೋಮಾಟೋ ಕೆಂಪು ಬಣ್ಣದ ಟೀ ಶರ್ಟ್ ಹಾಕಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಎರಡು ಕೈಗಳು ಇಲ್ಲದಿದ್ದರೂ ಸ್ಕೂಟರ್ ಹ್ಯಾಂಡಲ್ ಹಿಡಿದು ನಗುಮೊಗದಿಂದಲೇ ಮಾತನಾಡಿಸುತ್ತಾರೆ ಸಾಗುತ್ತಾರೆ.
शब्द खामोश हो जाते है, जब तस्वीरें बोलती है।😭 pic.twitter.com/IKgYJ9hFYV
— ज़िन्दगी गुलज़ार है ! (@Gulzar_sahab) October 26, 2024
ಇತರರಂತೆ ದಿನವಿಢೀ ಫುಡ್ ಡೆಲಿವರಿ ಮಾಡಿ, ಬೀದಿ ಬೀದಿ ಸುತ್ತಿ ಬೆವರು ಹರಿಸುತ್ತಾರೆ. ಎಲ್ಲವು ಸರಿ ಇದ್ದು ಉದ್ಯೋಗ ಮಾಡದೇ ನೆಪ ಹೇಳುವವರ ಮಧ್ಯೆ ಇವರು ಆದರ್ಶಪ್ರಾಯವಾಗುತ್ತಾರೆ. ದುಡಿಯದೇ ಮನೆಗೆ ಭಾರವಾದ ಅದೇಷ್ಟೋ ಮಂದಿಗೆ ಇವರನ್ನು ತೋರಿಸಬೇಕು. ಅದೇಷ್ಟೋ ಮಂದಿಗೆ ಇವರ ಈ ಜೀವನ ಪಾಠವಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದ ವಿಡಿಯೋ
ಈ ವಿಡಿಯೋ ಅನ್ನು @Gulzar_sahab ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್‌ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಶೇರ್ ಮಾಡಿದ 24 ಗಂಟೆಯಲ್ಲಿ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ನೆಟ್ಟಿಗರು ಈ ವ್ಯಕ್ತಿಯ ಸಾಹಸ, ಬದುಕುವ ಛಲ ಕಂಡು ನಿಬ್ಬೆರಗಾಗಿದ್ದಾರೆ. ಪ್ರಶಂಸೆಯ ಸುರಿಮಳೆ ಸುರಿಸಿದ್ದಾರೆ. 20,000 ಕ್ಕೂ ಹೆಚ್ಚು ಲೈಕ್ಸ್‌ಗಳು ಹಾಗೂ 3000 ಕ್ಕೂ ಅಧಿಕ ಕಾಮೆಂಟಗಳು ಈ ಪೋಸ್ಟ್‌ಗೆ ಬಂದಿವೆ. ಅಂದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications