• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪುಷ್ಪಾ 'ಸಾಮಿ ಸಾಮಿ' ಹಾಡಿಗೆ ರಷ್ಯಾ ಹುಡುಗಿಯರ ಸಖತ್ ಡ್ಯಾನ್ಸ್

|
Google Oneindia Kannada News

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಈ ವರ್ಷದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತ ಪುಷ್ಪಾ ಸಿನಿಮಾವನ್ನು ನೋಡದ ಜನ ಸಿನಿಮಾವನ್ನು ಹೊಗಳಿದರು. ಮಾತ್ರವಲ್ಲದೆ ಸಿನಿಮಾದಂತೆ ಅದರ ಹಾಡುಗಳು ಕೂಡ ಜನ ಮೆಚ್ಚುಗೆಯನ್ನ ಗಳಿಸಿದವು. ಅದ್ಯಾವ ಮಟ್ಟಿಗೆ ಅಂದರೆ ವಯಸ್ಸಾದ ಅಜ್ಜಿಯರಿಂದ ಸಣ್ಣ ಮಕ್ಕಳವರೆಗೂ ಪುಷ್ಪಾ ಸಿನಿಮಾದ ಹಾಡಿಗೆ ಮೈ ಚಳಿ ಬಿಟ್ಟು ಕೊಣಿಯುವಷ್ಟು.

ಭಾರತೀಯ ಚಿತ್ರೋತ್ಸವದ ಭಾಗವಾಗಿ ಈ ಚಿತ್ರವು ಡಿಸೆಂಬರ್ 1 ಮತ್ತು ಡಿಸೆಂಬರ್ 3 ರಂದು ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಕ್ರಮವಾಗಿ ರಷ್ಯಾದ ಭಾಷೆಯಲ್ಲಿ ಪ್ರದರ್ಶನ ಕಾಣಲಿದೆ. ರಷ್ಯಾದ ಅಭಿಮಾನಿಗಳು ಶ್ರೀವಲ್ಲಿ, ಊ ಅಂಟವಾ ಮತ್ತು ಸಾಮಿ ಸಾಮಿಯಂತಹ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ರಷ್ಯಾದ ಪುಷ್ಪಾ ಅಭಿಮಾನಿಯೊಬ್ಬರು ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಸಾಮಿ ಸಾಮಿ ಹಾಡಿ ನೃತ್ಯ ಮಾಡುವ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ. ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ನರ್ತಕಿ ಮತ್ತು ನೃತ್ಯ ಸಂಯೋಜಕಿ ನಟಾಲಿಯಾ ಒಡೆಗೋವಾ ಅವರು ಇನ್‌ಸ್ಟಾಗ್ರಾಮ್ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು ತಮ್ಮ ಹುಡುಗಿಯರ ಗುಂಪಿನೊಂದಿಗೆ ಸಾಮಿ ಸಾಮಿ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. "ನನ್ನ ಹುಡುಗಿಯರೊಂದಿಗೆ #ಸಾಮಿಸಾಮಿ ನೃತ್ಯದಲ್ಲಿ ಸೋಫಿಯಾ ಅವರ ಅತ್ಯುತ್ತಮ ಭಾವನೆಗಳು" ಎಂದು ಶೀರ್ಷಿಕೆ ಬರೆದಿದ್ದಾರೆ.

ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿರುವ ಐತಿಹಾಸಿಕ ವಸ್ತುಸಂಗ್ರಹಾಲಯದಲ್ಲಿ ಆರು ಸುಂದರ ರಷ್ಯಾದ ಮಹಿಳೆಯರು ಹಾಡಿನ ಹೆಜ್ಜೆಗಳನ್ನು ಮರುಸೃಷ್ಟಿಸುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ. ಈ ಕ್ಲಿಪ್ 14k ವೀಕ್ಷಣೆಗಳನ್ನು ಮತ್ತು 700 ಲೈಕ್‌ಗಳನ್ನು ಪಡೆದುಕೊಂಡಿದೆ. ಫೈರ್ ಎಮೋಜಿಗಳು ಮತ್ತು ಹೃತ್ಪೂರ್ವಕ ಕಾಮೆಂಟ್‌ಗಳನ್ನು ಮಾಡಲಾಗಿದೆ.

ಭಾರತೀಯರು ಈ ವಿಡಿಯೊವನ್ನು ಇಷ್ಟಪಟ್ಟಿದ್ದಾರೆ. "ತುಂಬಾ ಉತ್ತಮ ನೃತ್ಯ" ಎಂದು ದೇಸಿ ಬಳಕೆದಾರರು ಬರೆದಿದ್ದಾರೆ. "ಅದ್ಬುತ ನೃತ್ಯ" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Video: Russian girls dance to Sami Sami song by Pushpa

ಮಾಸ್ಕೋದಲ್ಲಿ ಸಾಮಿ ಸಾಮಿ ಹಾಡಿಗೆ ರಷ್ಯಾದ ಕುಟುಂಬ ನೃತ್ಯ ಮಾಡುವ ವೈರಲ್ ವಿಡಿಯೊವನ್ನು ವೀಕ್ಷಿಸಿ:

English summary
Puppa will be screened in Russian language on December 1 and December 3 in Moscow and St. Petersburg respectively. Meanwhile, a video of Russian girls dancing to Puspa's song 'Sami Sami' has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X