ವಿಡಿಯೋ: ಮಹಿಳೆಯ ಸ್ನಾನಗೃಹದಲ್ಲಿ 12 ಅಡಿ ಹೆಬ್ಬಾವು ಪತ್ತೆ ಹಚ್ಚಿದ ಸಾಕು ಬೆಕ್ಕು

ಎಲ್ಲಾ ಹಾವಿನ ಜಾತಿಗಳಲ್ಲಿ ಅತ್ಯಂತ ಅಪಾಯಕಾರಿ ಎಂದರೆ ಹೆಬ್ಬಾವು. ಇದು ಎಷ್ಟು ದೊಡ್ಡದಾಗಿರುತ್ತದೆ ಅಂದರೆ ಪಂಜರದಲ್ಲಿ ನೋಡಿದರೂ ಮುಂದೆ ನಿಂತುಕೊಳ್ಳಲು ಧೈರ್ಯ ಸಾಕಾಗುವುದಿಲ್ಲ. ಹೀಗಿರುವಾಗ ನಿಮ್ಮ ಮನೆಯ ಸ್ನಾನಗೃಹದಲ್ಲಿ ಈ ಭಯಾನಕ ಹಾವು ಹೊರಬಂದರೆ ಏನಾಗುತ್ತದೆ ಎಂದು ಊಹಿಸಿ. ಬಾತ್‌ ರೂಂನಲ್ಲಿ ಬೃಹತ್ ಹಾವು ಪತ್ತೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಹೆಬ್ಬಾವು ಶೌಚಾಲಯದ ಮೂಲಕ ಬಾತ್ ರೂಂ ತಲುಪಿದೆ.

ವಾಸ್ತವವಾಗಿ, ಈ ಘಟನೆಯು ಥೈಲ್ಯಾಂಡ್‌ನ ಮನೆಯೊಂದರದ್ದು. ಇಲ್ಲಿ ಮಹಿಳೆಯೊಬ್ಬರ ಮನೆಯ ವಾಶ್ ರೂಂಗೆ 12 ಅಡಿ ಹೆಬ್ಬಾವು ನುಗ್ಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಬ್ಬಾವು ಶೌಚಾಲಯದ ಮೂಲಕ ಬಾತ್ ರೂಂ ತಲುಪಿದೆ ಎನ್ನಲಾಗಿದೆ.

ವೈರಲ್ ಕ್ಲಿಪ್‌ನಲ್ಲಿ, ಹೆಬ್ಬಾವು ಸ್ನಾನದ ತೊಟ್ಟಿಯ ಮೇಲೆ ಜಾರುತ್ತಿರುವುದನ್ನು ಕಾಣಬಹುದು ಮತ್ತು ಇನ್ನೊಂದು ಬದಿಯಲ್ಲಿ ಸ್ನಾನಗೃಹದಲ್ಲಿ, ಎರಡು ಸಾಕು ಬೆಕ್ಕುಗಳು ಮನೆಯಲ್ಲಿ ಕಂಡುಬರುತ್ತವೆ. ಸ್ನಾನದ ಕೋಣೆಗೆ ನುಗ್ಗಿದ ಈ ಹೆಬ್ಬಾವು ಸಾಕು ಬೆಕ್ಕಿನ ಮರಿಗಳನ್ನು ಮತ್ತು ಮನೆಯ ಸದಸ್ಯರನ್ನು ದಿಟ್ಟಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

Video: Pet cat discovers 12-foot python in womans bathroom

ಹಾವೊಂದು ಮಹಿಳೆಯ ಕಿವಿ ಹೊಕ್ಕಿರುವ ಸುದ್ದಿ ಒನ್‌ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿತ್ತು. ವೈರಲ್ ವಿಡಿಯೋದಲ್ಲಿ ಮಹಿಳೆಯ ಕಿವಿಯಿಂದ ಹಾವನ್ನು ತೆಗೆದುಹಾಕುವ ನಿರಂತರ ಪ್ರಯತ್ನದಲ್ಲಿ ವೈದ್ಯರಿರುವುದು ಕಾಣಬಹುದು. ಪ್ರತಿ ಪ್ರಯತ್ನದಲ್ಲೂ ವೈದ್ಯರು ವಿಫಲರಾಗುತ್ತಾರೆ. ಸಸ್ಪೆನ್ಸ್ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ನೋಡುಗರನ್ನು ದಿಗ್ಭ್ರಮೆಗೊಳಿಸಿತ್ತು. ಆದರೆ ವಿಡಿಯೋ ಮಾತ್ರ ಹಾವನ್ನು ತೆಗೆದುಹಾಕಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಬಹಿರಂಗಪಡಿಸದೆ ಕೊನೆಗೊಳ್ಳುತ್ತದೆ. ಜೊತೆಗೆ ಸಾಕಷ್ಟು ಚರ್ಚೆಗಳಿಗೂ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+