ವಿಡಿಯೋ: ಕಿಂಗ್ ಕೋಬ್ರಾದೊಂದಿಗೆ ಮುಂಗುಸಿ ಫೈಟ್: ಗೆದ್ದಿದ್ದು ಯಾರು?
ಮುಂಗುಸಿಯು ಸಣ್ಣ ಕಾಲುಗಳನ್ನು ಹೊಂದಿರುವ ಸಣ್ಣ ಪ್ರಾಣಿಯಾಗಿದೆ. ಆದರೆ ಇದನ್ನು ಉಗ್ರ ಹಾವಿನ ಹೋರಾಟಗಾರ ಎಂದು ಕರೆಯಲಾಗುತ್ತದೆ. ಹಾವುಗಳ ರಾಜ ನಾಗರಹಾವು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇದು 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮನುಷ್ಯರನ್ನು ಕೊಲ್ಲುತ್ತದೆ. ಯಾರಿಗೂ ಹೆದರದ ವಿಷಕಾರಿ ನಾಗರಹಾವು ಸಣ್ಣ ಮುಂಗುಸಿಗೆ ಹೆದರುತ್ತದೆ ಅನ್ನೋದು ವಿಸ್ಮಯವೇ ಸರಿ.
ಅಷ್ಟಕ್ಕೂ ಮುಂಗುಸಿಗೆ ಹಾವು ಯಾಕೆ ಹೆದರುತ್ತದೆ? ಮುಂಗುಸಿಯು ವಿಷಕಾರಿ ಹಾವಿನ ಮಾರಣಾಂತಿಕ ಕಡಿತದಿಂದ ಬದುಕಬಲ್ಲದು ಮತ್ತು ನಾಗರಹಾವುಗಳೊಂದಿಗಿನ ಕಾದಾಟದ 75 ರಿಂದ 80 ಪ್ರತಿಶತದಲ್ಲಿ, ಮುಂಗುಸಿ ಯಾವಾಗಲೂ ಗೆಲ್ಲುತ್ತದೆ. ಭಾರತೀಯ ಬೂದು ಮುಂಗುಸಿ (ನೆವ್ಲಾ) ನಿರ್ದಿಷ್ಟವಾಗಿ ಕಾದಾಡಲು ಮತ್ತು ನಾಗರಹಾವುಗಳಂತಹ ವಿಷಕಾರಿ ಹಾವುಗಳನ್ನು ತಿನ್ನಲು ಹೆಸರುವಾಸಿಯಾಗಿದೆ.
ಸದ್ಯ ಭಾರತೀಯ ಬೂದು ಮುಂಗುಸಿಯೊಂದಿಗೆ ನಾಗರಹಾವು ತೀವ್ರ ಕಾದಾಟದಲ್ಲಿ ತೊಡಗಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಮುಂಗುಸಿ ಮತ್ತು ನಾಗರಹಾವು ಪರಸ್ಪರ ದಾಳಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಮುಂಗುಸಿಯು ಅಂತಿಮವಾಗಿ ಹಾವನ್ನು ಬಾಯಿಗೆ ಹಿಡಿದು ಕೊಲ್ಲುತ್ತದೆ. ನಂತರ ಮುಂಗುಸಿಯು ಸರ್ಪವನ್ನು ಜೀವಂತವಾಗಿ ತಿನ್ನುವುದನ್ನು ಕಾಣಬಹುದು. ಈ ವಿಡಿಯೋವನ್ನು Instagramನಲ್ಲಿ 'beautiful_new_pix' ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಕಿಂಗ್ ಕೋಬ್ರಾ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿರಬಹುದು ಆದರೆ ಮುಂಗುಸಿಗೆ ಅಲ್ಲ!
|
ಆಮೆ ಜೊತೆ ಹಾವು ಕಾದಾಟ
ಕೆಲ ತಿಂಗಳ ಹಿಂದೆ ಆಮೆಯೊಂದಿಗೆ ಹಾವು ಕಾದಾಡಿತ್ತು. ಏಕಾಏಕಿ ಹಾವು ಆಮೆ ಮೇಲೆ ದಾಳಿ ಮಾಡಿತ್ತು. ಆಗ ಹಾವಿನ ತಲೆ ಆಮೆಯ ಕುತ್ತಿಗೆ ಭಾಗದಲ್ಲಿ ಸಿಕ್ಕಿಕೊಂಡು ಹಾವು ಹರಸಾಹಸವೇ ಪಟ್ಟಿತ್ತು. ಹಾವು ದಾಳಿ ಮಾಡಿ ಹೊರಟು ಹೋಗುವ ಸಂಚು ಇಲ್ಲಿ ಹುಸಿಯಾಯಿತು. ನಾಗರಹಾವು ಎಲ್ಲಾ ರೀತಿ ಪ್ರಯತ್ನ ಮಾಡಿದರೂ ತನ್ನ ಕುತ್ತಿಯನ್ನು ಆಮೆಯಿಂದ ಬಿಡಿಸಿಕೊಳ್ಳಲು ಆಗಲಿಲ್ಲ. ಕೊನೆಗೆ ಶತ ಪ್ರಯತ್ನದ ನಂತರ ಆಮೆಯಿಂದ ತಲೆ ಬಿಡಿಸಿಕೊಂಡ ಹಾವು 'ಬದುಕಿತೆ ಬಡಜೀವ' ಎಂದು ವೇಗವಾಗಿ ಹೋಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಕೇಪ್ ಕೋಬ್ರಾ ಅಳಿಲು ಫೈಟ್
ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಕಲ್ಗಾಡಿ ಟ್ರಾನ್ಸ್‌ಫ್ರಾಂಟಿಯರ್ ಪಾರ್ಕ್‌ನಲ್ಲಿ ಕೇಪ್ ಕೋಬ್ರಾ ಅಳಿಲುಗಳು ಮತ್ತು ಅವುಗಳ ಮರಿಗಳನ್ನು ಭೇಟೆಯಾಡಲು ಪ್ರಯತ್ನಿಸುತ್ತಿತ್ತು. ಅಳಿಲುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಈ ಫೈಟ್ ರೋಚಕವಾಯಿತು. ಅಳಿಲುಗಳು ತೊಂದರೆ ಅನುಭವಿಸುತ್ತಿರುವುದನ್ನು ನೋಡಿ ಮುಂಗುಸಿಯೊಂದು ಅಲ್ಲಿಗೆ ಬಂತು. ಇದಾದ ನಂತರವೂ ಮುಂಗುಸಿ ಹಾವಿನ ಮೇಲೆ ದಾಳಿ ಮಾಡಿ ಹಾವನ್ನು ಸೋಲಿಸಿತು. ಹಾವು ಕೂಡ ಹಲವು ಬಾರಿ ಕಚ್ಚಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ.
|
ಹಾವನ್ನು ನುಂಗಿದ ಕಪ್ಪೆ
ಈ ಹಿಂದೆ ರಾಯಚೂರಿನಲ್ಲಿ ಕಪ್ಪೆಯೊಂದು ಹಾವನ್ನು ನುಂಗಲೆತ್ನಿಸಿದ ಅಪರೂಪದ ಘಟನೆ ನಡೆದಿತ್ತು. ಕಪ್ಪೆ ತನ್ನ ಬಾಯಲ್ಲಿ ಹಾವನ್ನು ಹಿಡಿದು ಕೊಂಡಿರುವ ದೃಶ್ಯ ವೈರಲ್ ಆಗಿತ್ತು. ರಾಯಚೂರು ತಾಲ್ಲೂಕಿನ ದೇವಸೂಗೂರು ಹೋಬಳಿ ವ್ಯಾಪ್ತಿಯ ಗ್ರಾಮದ ಚರಂಡಿಯೊಂದರಲ್ಲಿ ಕಪ್ಪೆಯೊಂದು ತನ್ನ ಬಾಯಲ್ಲಿ ಹಾವನ್ನು ಹಿಡಿದು ಕೊಂಡಿರುವ ದೃಶ್ಯವನ್ನು ಸ್ಥಳೀಯರು ತಮ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದ್ದು ಬಾರೀ ಕುತೂಹಲ ಮೂಡಿಸಿತ್ತು.

ಅಪಾಯಕಾರಿ ಹಾವಿನೊಂದಿಗೆ ಮರಕುಟಿಕ ಕಾಳಗ
ಮರಕುಟಿಕವೊಂದು ಅಪಾಯಕಾರಿ ಹಾವಿನೊಂದಿಗೆ ತನ್ನ ಪ್ರಾಣವನ್ನು ಲೆಕ್ಕಿಸದೆ ಮಕ್ಕಳ ರಕ್ಷಣೆಗಾಗಿ ಹೋರಾಡಿದ ಘಟನೆ ನಡೆದಿದೆ. ಮರಕುಟಿಕ ಮರಿ ಇದ್ದ ಮರದ ತೊಗಟೆಯಲ್ಲಿ ಹಾವೊಂದು ಸೇರಿಕೊಂಡಿದೆ. ಇದನ್ನು ಗಮನಿಸಿದ ಮರಕುಟಿಕ ಹಾವಿನೊಂದಿಗೆ ಕಾಳಗಕ್ಕೆ ಬಿದ್ದಿದೆ. ಹಾವಿನ ಜೊತೆ ಸೆಣಸಾಡುವುದು ಅಪಾಯ ಎಂದು ತಿಳಿದಿದ್ದರೂ ತನ್ನ ಮರಿಯ ರಕ್ಷಿಸಬೇಕು ಎಂಬ ಹಠ, ಎಷ್ಟೇ ಕಷ್ಟವಿದ್ದರೂ ಮತ್ತೆ ಮತ್ತೆ ಹಾವಿನ ಜೊತೆ ಹೋರಾಡಿದೆ. ಈ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ ವೈರಲ್ ಆಗಿತ್ತು.












Click it and Unblock the Notifications