ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಮದುವೆ ಉಡುಪು ಧರಿಸಿ ರಾಯಲ್ ಎನ್‌ಫೀಲ್ಡ್ ಓಡಿಸಿದ ವಧು

|
Google Oneindia Kannada News

ಹುಡುಗಿಯೊಬ್ಬಳು ವಧುವಿನ ಉಡುಪು ಧರಿಸಿ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ತನ್ನ ಮದುವೆ ಸ್ಥಳಕ್ಕೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಮೇಕಪ್ ಆರ್ಟಿಸ್ಟ್ ದೀಪಾಲಿ ಹಾಗೂ ವಧು ವೈಶಾಲಿ ಚೌಧರಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈಶಾಲಿ ಎಂಬ ಹೆಸರಿನ ವಧು ದೆಹಲಿಯವರು (ವಿಡಿಯೊ ಶೀರ್ಷಿಕೆಯ ಪ್ರಕಾರ). ಇದು ಸದ್ಯಕ್ಕೆ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.

ತನ್ನ ಮದುವೆ ದಿನದಂದು ಕಲ್ಯಾಣ ಮಂಟಪಕ್ಕೆ ವಿಶೇಷವಾಗಿ ಎಂಟ್ರಿ ಕೊಡುವುದು ಪ್ರತಿಯೊಬ್ಬ ವಧುವಿನ ಕನಸಾಗಿರುತ್ತದೆ. ಆದರೆ ಈ ವಧುವಿನ ಎಂಟ್ರಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಭಾರವಾದ ಲೆಹೆಂಗಾವನ್ನು ಧರಿಸಿ ವೈಶಾಲಿ ರಾಯಲ್ ಎನ್‌ಫೀಲ್ಡ್ ಅನ್ನು ತುಂಬಾ ಚತುರತೆಯಿಂದ ಓಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಆತ್ಮವಿಶ್ವಾಸ ಮತ್ತು ತನ್ನ ಸವಾರಿಯನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆ. ಭಾರವಾದ ಆಭರಣಗಳು ಮತ್ತು ಲೆಹೆಂಗಾವನ್ನು ಧರಿಸಿ ಹೆಲ್ಮೆಟ್ ಇಲ್ಲದೆ ಅವರು ಮುಖ್ಯ ರಸ್ತೆಯಲ್ಲಿ ಬೈಕ್ ಸವಾರಿ ಓಡಿಸಿದ್ದಾರೆ.

Video: Bride Drives Royal Enfield in Bridal Dress

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ಇತ್ತೀಚೆಗೆ ಮದುವೆ ಸಮಾರಂಭಗಳು ವಿಭಿನ್ನತೆ ಪಡೆದುಕೊಳ್ಳುತ್ತಿವೆ. ಕಾರು, ಕುದುರೆಯಲ್ಲಿ ವರ ಮದುವೆ ಸಮಾರಂಭಕ್ಕೆ ಆಗಮಿಸುವ ರೂಢಿ ಈಗ ಬದಲಾಗಿದೆ. ಈಗೇನಿದ್ದರೂ ವಧು ಹೇಗೆ ಮದುವೆ ಮನೆಗೆ ಆಗಮಿಸುತ್ತಾಳೆ ಎನ್ನುವುದು ಟ್ರೆಂಡ್ ಆಗಿದೆ. ಮೇ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಟ್ಯ್ರಾಕ್ಟರ್ ಓಡಿಸುವ ಮೂಲಕ ವಧುವಿನ ಮೆರವಣಿಗೆ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Video: Bride Drives Royal Enfield in Bridal Dress

ಏಪ್ರಿಲ್ 20ರಂದು ಹರಿಯಾಣದಲ್ಲಿ ವಧು ಕುದುರೆ ಮೇಲೆ ಮೆರವಣಿಗೆ ಮಾಡಿರುವುದು ಕಂಡುಬಂದಿತ್ತು. ಇಲ್ಲಿ ರಮೇಶ್ ಕುಮಾರ್ ಅವರು ತಮ್ಮ ಮಗಳ ಮದುವೆಯಲ್ಲಿ ಪುತ್ರರಂತೆ ಮಗಳನ್ನು ಕುದುರೆ ಮೇಲೆ ಮೆರವಣಿಗೆ ಮಾಡಿಸಿದ್ದರು. ಇದರ ಮೂಲಕ ಪುರುಷರಿಗಿಂತ ಹೆಣ್ಣು ಮಕ್ಕಳು ಕಡಿಮೆ ಇಲ್ಲ ಎಂಬ ಸಂದೇಶ ನೀಡಿದ್ದರು. ಈ ವರ್ಷದ ಆರಂಭದಲ್ಲಿ, ಹರಿಯಾಣದ ಅಂಬಾಲಾದಲ್ಲಿ ನಡೆದ ಮದುವೆಯೊಂದರಲ್ಲಿ ವಧು ತನ್ನ ಕೈಯಲ್ಲಿ ಕತ್ತಿಯೊಂದಿಗೆ ಕುದುರೆಯ ಮೇಲೆ ಸವಾರಿ ಮಾಡುತ್ತಾ ವರನ ಮನೆಗೆ ಹೋಗಿ ಮದುವೆಯಾದ್ದಳು.

English summary
A video of a girl dressed as a bride riding a Royal Enfield bike to her wedding venue has gone viral on social media. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X