Video Viral: ನೀವು 'ಮೊಮೋ' ತಿನ್ನುವವರಾಗಿದ್ದರೇ ಈ ತಪ್ಪದೇ ವಿಡಿಯೋ ನೋಡಿ
ಬೆಂಗಳೂರು, ಸೆಪ್ಟಂಬರ್ 09: ಧಾವಂತದ ಬದುಕಿನಲ್ಲಿ ಮನುಷ್ಯನಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ಇಂತಹ ಸವಾಲು ಎದುರಿಸಲು ಆತನಿಗೆ ಸಹಾಯ ಮಾಡುವುದೇ ನಿತ್ಯ ತಿನ್ನುವ ಆಹಾರ. ಆದರೆ ನಾವು ನಿತ್ಯ ತಿನ್ನಬಹುದಾಗ ಆಹಾರ ಹೇಗೆ ತಯಾರಾಗುತ್ತದೆ? ಗುಣಮಟ್ಟ, ಶುಚಿತ್ವದ ಕಡೆಗೆ ಗಮನ ಹರಿಸಬೇಕಾಗುತ್ತದೆ. ಇಲ್ಲೊಬ್ಬರು ಮೆಮೊ ತಯಾರಿಸುವ ವಿಚಾರವಾಗಿಯೇ ಜೈಲು ಸೇರಿದ್ದಾರೆ.
ಹೌದು, ಮನೆಯಲ್ಲಿ ಎಷ್ಟೆ ರುಚಿ ರುಚಿ ಆಹಾರ ಮಾಡಿದರೂ ಹೊರಗಿನ ತಿಂಡಿ ತಿನಿಸುಗಳ ಬಗ್ಗೆ ಮನಸೋಲುವುದು ಸಹಜ. ಆದರೆ ನೀವು ಮೊಮೋಸ್ ತಿನ್ನುವವರಾಗಿದ್ದಾರೆ ತಪ್ಪದೇ ಎಚ್ಚರ ವಹಿಸಬೇಕಿದೆ. ಈ ಮೊಮೋಸ್ ದೇಶದ ಬೀದಿ ಬದಿಯ ಆಹಾರಗಳಲ್ಲಿ ಒಂದಾಗಿದೆ.

ಮೊಮೋ ತಯಾರಕರ ಬಂಧನ
ಆದರೆ ಈ ಮೊಮೋ ಅನ್ನು ಟಿಬೆಟಿಯನ್ ಮತ್ತು ನೇಪಾಳಿ ಪಾಕಪದ್ಧತಿಯ ತಯಾರಕರ ಹೇಗೆಲ್ಲ ಮಾಡುತ್ತಾರೆ, ಶುಚಿತ್ವದ ಕುರಿತು ನೀವು ಗಮನಿಸಬೇಕಾಗಿದೆ. ಏಕೆಂದರೆ ಇತ್ತೀಚೆಗೆ ನಡೆದ ಘಟನೆಯಲ್ಲಿ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಮೊಮೋಸ್ ಮಾಡುವ ಹಿಟ್ಟನ್ನು ಕಾಲಿನಿಂದ ತುಳಿದು ಬೆರೆಸಿದ್ದ ಕಾರಣಕ್ಕೆಆಗಿ ಇಬ್ಬರನ್ನು ಬಂಧಿಸಲಾಗಿದೆ.
ವರದಿಯೊಂದರ ಪ್ರಕಾರ, ರಾಜ್ಯದ ಜಬಲ್‌ಪುರದ ಸ್ಥಳೀಯರು ಬಾರ್ಗಿ ಪೊಲೀಸ್ ಠಾಣೆ ಬಳಿ ಈ ಇಬ್ಬರು ಆಹಾರ (ಮೊಮೋ ಇತರೆ) ತಯಾರಿಕೆ ಹೊಂದಿದ್ದರು. ಅವರ ವಿರುದ್ಧ ಶುಚಿತ್ವ, ಗುಣಮಟ್ಟ ಬಗ್ಗೆ ಪೊಲೀಸಿರಿಗೆ ನೀಡಿದ ದೂರಿನ ಅನ್ವಯ ಮಧ್ಯಪ್ರದೇಶ ಪೊಲೀಸರು ರಾಜ್‌ಕುಮಾರ್ ಗೋಸ್ವಾಮಿ ಮತ್ತು ಸಚಿನ್ ಗೋಸ್ವಾಮಿ ಅವರನ್ನು ಬಂಧಿಸಿದ್ದಾರೆ. ಇವರಿಬ್ಬರು ರಾಜಸ್ಥಾನದ ನಿವಾಸಿಗಳು ಎಂಬುದು ಗೊತ್ತಾಗಿದೆ.
ಕಾಲಿನಿಂದ ತುಳಿದು ಮೊಮೋ ತಯಾರಿಕೆ
ಬಂಧಿತರು ಮೊಮೋ ಮಾಡುವ ಪದ್ಧತಿ, ಹಿಟ್ಟನ್ನು ಕಾಲಿನಿಂದ ತುಳಿಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ನೆಟ್ಟಿಗರು ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೊದಲ್ಲಿ, ಒಳ ಉಡುಪಿನ ಮೇಲೆಯೇ ನಿಂತ ವ್ಯಕ್ತಿಯೊಬ್ಬ ಕಂಟೈನರ್ ರೀತಿಯ ಪಾತ್ರೆಯಲ್ಲಿ ನಿಂತು ಮೊಮೊ ಹಿಟ್ಟನ್ನು ತುಳಿಯುವುದು ಕಾಣಿಸುತ್ತದೆ.
ಮಣ್ಣಿನ ಮೇಲೆ ನಿಂತು ನೃತ್ಯ ಮಾಡುವ ಹಾಗೇ ಕಂಟೇನರ್‌ನಲ್ಲಿ ನಿಂತು ತುಳಿಯುತ್ತಾನೆ. ಕೈಯಿಂದ ಹಿಟ್ಟನ್ನು ತಿರುಗಿಸಿ ತಿರುಗಿಸಿ ತುಳಿಯುತ್ತಾನೆ. ಹೀಗೆ ಹಿಟ್ಟು ಹದಕ್ಕೆ ಬರುವವರೆಗೂ ಈತ ತುಳಿಯುತ್ತಿದ್ದಾನೆ. ಈ ವಿಡಿಯೋವನ್ನು ಸಚಿನ್ ಗುಪ್ತಾ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಮೇಲೆ ಮೊಮೋ ತಿನ್ನುವುದೇ ಬಿಡಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿಗಳ ವಿರುದ್ಧ ನೆಟ್ಟಿಗರ ಆಕ್ರೋಶ
ವೀಡಿಯೋ ವೈರಲ್ ಆಗುತ್ತಿದ್ದಂತೆ, ಸಾಕಷ್ಟು ಬಾರಿ ರಿಶೇರ್ ಆಗಿದೆ. ಅಲ್ಲದೇ ಇಂತಹ ವ್ಯಾಪಾರಿಗಳನ್ನು ಬಂಧಿಸಬೇಕು. ಜನರಿಗೆ ಗುಣಮಟ್ಟದ ಆಹಾರ ಕೊಡಲು ಆಗದವರ ಈ ವರ್ತನೆ ಖಂಡನೀಯ ಇವರನ್ನು ಜೈಲಿಗೆ ಕಳುಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
मध्यप्रदेश के जबलपुर में आज पैरों से मैदा गूंथकर मोमोज बनाने की Video सामने आई। पुलिस ने मोमोज दुकान संचालक राजकुमार गोस्वामी और सचिन गोस्वामी को गिरफ्तार किया है। pic.twitter.com/MIrQxpN8Wp
— Sachin Gupta (@SachinGuptaUP) September 6, 2024
ಇವರ ವ್ಯಾಪಾರಿ ಮಳಿಗೆಯನ್ನು ವಶಪಡಿಸಿಕೊಳ್ಳಬೇಕು. ಇದುವರೆಗೆ ಇವರಿಂದ ಅದೇಷ್ಟು ಜನರು ಮೊಮೊ ತಿಂದಿದ್ದಾರೋ ದೇವರೇ ಬಲ್ಲ. ಇವರ ವಿರುದ್ಧ ಕ್ರಮ ಕೈಗೊಂಡು ಈ ರೀತಿ ಮಾಡುವ ಇತರರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.












Click it and Unblock the Notifications