Vande Sadharan Express: ಶೀಘ್ರದಲ್ಲೇ ಬರಲಿವೆ ವಂದೇ ಸಾಧಾರಣ್ ಎಕ್ಸ್‌ಪ್ರೆಸ್ ರೈಲುಗಳು- ಮಾರ್ಗ, ವಿನ್ಯಾಸ, ವೈಶಿಷ್ಟ್ಯ
ಭಾರತೀಯ ರೈಲ್ವೆಯು ಹಿಂದೆಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಭಾರತದಾದ್ಯಂತ ಸೆಮಿ ಹೈಸ್ಪೀಡ್ ರೈಲುಗಳು ( ವಂದೇ ಭಾರತ್ ಎಕ್ಸ್‌ಪ್ರೆಸ್ ) ಸಂಚರಿಸುತ್ತಿವೆ. ಈ ರೈಲುಗಳು ದೇಶದ ಮಹಾನಗರಗಳಿಗೆ ಸಂಪರ್ಕವನ್ನು ಕಲ್ಪಿಸಿವೆ. ಕರ್ನಾಟಕದಲ್ಲಿ ಪ್ರಸ್ತುತ ಮೂರು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರು-ಹೈದರಾಬಾದ್, ಚೈನೈ-ಬೆಂಗಳೂರು-ಮೈಸೂರು, ಬೆಂಗಳೂರು-ಹುಬ್ಬಳ್ಳಿ-ಧಾರವಾಡ-ಬೆಳಗಾವಿ ನಡುವೆ ಸೆಮಿ ಹೈ-ಸ್ಪೀಡ್ ರೈಲುಗಳ ಓಡಾಡುತ್ತಿವೆ.
ಇದೇ ರೀತಿಯಲ್ಲಿ ಸಾಮಾನ್ಯ ಜನರಿಗೆ ( ಆರ್ಥಿಕವಾಗಿ ಹಿಂದುಳಿದವರಿಗೆ ) ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಭಾರತೀಯ ರೈಲ್ವೆಯು ಹೊಸ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೀತಿಯಲ್ಲಿಯೇ ವಂದೇ ಸಾಧಾರಣ್ ಎಕ್ಸ್‌ಪ್ರೆಸ್ ಅಥವಾ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆ.

ಭಾರತೀಯ ರೈಲ್ವೇ ಶೀಘ್ರದಲ್ಲೇ ಹೊಸ ಸೆಮಿ-ಹೈ-ಸ್ಪೀಡ್ ರೈಲುಗಳನ್ನು ( ವಂದೇ ಸಾಧಾರಣ್ ) ಪ್ರಾರಂಭಿಸಲಿದೆ. ಹೆಚ್ಚು ನಿಖರವಾಗಿ ಹೇಳುವುದಾದರೆ, ಈ ವರ್ಷದ ಡಿಸೆಂಬರ್‌ನಲ್ಲಿ ರೈಲುಗಳಿಗೆ ಹಸಿರು ನಿಶಾನೆ ದೊರೆಯಲಿದೆ.
ವಂದೇ ಸಾಧಾರಣ ಎಕ್ಸ್‌ಪ್ರೆಸ್
ವಂದೇ ಸಾಧಾರಣ ಎಕ್ಸ್‌ಪ್ರೆಸ್ ದೇಶದ ಅತ್ಯಂತ ವೇಗದ ರೈಲುಗಳಾಗಿ ಹೊರಬರಲಿದೆ. ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗಿಂತ ವಂದೇ ಸಾಧಾರಣ ಎಕ್ಸ್‌ಪ್ರೆಸ್ ರೈಲುಗಳು ಭಿನ್ನವಾಗಿ ಇರಲಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಭಿನ್ನವಾಗಿ 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವಿರುವ ದೀರ್ಘ ಇಂಟರ್‌ಸಿಟಿ ಪ್ರಯಾಣಗಳಿಗೆ ಈ ರೈಲುಗಳನ್ನು ನಿಯೋಜಿಸಲಾಗುತ್ತದೆ. ಅಲ್ಲದೆ, ಈ ರೈಲುಗಳನ್ನು ಹಗಲು-ರಾತ್ರಿ ಪ್ರಯಾಣಕ್ಕೆ ಬಳಸಲಾಗುವುದು.

ವಂದೇ ಸಾಧಾರಣ ಎಕ್ಸ್‌ಪ್ರೆಸ್: ಕೋಚ್‌ಗಳು
ವಂದೇ ಸಾಧಾರಣ ಎಕ್ಸ್‌ಪ್ರೆಸ್ 22 ಕೋಚ್‌ಗಳು ಮತ್ತು 2 ಇಂಜಿನ್‌ಗಳನ್ನು ಒಳಗೊಂಡಿರುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಭಿನ್ನವಾಗಿ, ಇದು ಪುಶ್-ಪುಲ್ ಸೆಟಪ್ ಆಗಿರುತ್ತದೆ. ಕಾಯ್ದಿರಿಸದ ವರ್ಗಕ್ಕೆ 12 ಸ್ಲೀಪರ್ ಕೋಚ್‌ಗಳು ಮತ್ತು 8 ಕೋಚ್‌ಗಳು ಇರುತ್ತವೆ. ಒಟ್ಟಾರೆಯಾಗಿ, ವಂದೇ ಸಾಧಾರಣ ರೈಲು 1,800 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ಈ ರೈಲಿನಲ್ಲಿ 2 ಲಗೇಜ್ ಬೋಗಿಗಳು ಇರುತ್ತವೆ.
ವಂದೇ ಸಾಧಾರಣ ಎಕ್ಸ್‌ಪ್ರೆಸ್: ಎಂಜಿನ್ ಮತ್ತು ವೇಗ
ರೈಲು 130 ಕಿಮೀ ( ಗಂಟೆಗೆ ) ವೇಗವನ್ನು ಹೊಂದಿದೆ. ಆದರೆ ಇದು ಹಳಿಗಳ ಮೇಲಿನ ವಿವಿಧ ಅಂಶಗಳು ಮತ್ತು ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 110 ಕಿಮೀ ವೇಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ.

ವಂದೇ ಸಾಧಾರಣ ಎಕ್ಸ್‌ಪ್ರೆಸ್: ಮಾರ್ಗಗಳು
ಸದ್ಯಕ್ಕೆ, ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅಥವಾ ವಂದೇ ಸಾಧಾರಣ್ ಎಕ್ಸ್‌ಪ್ರೆಸ್‌ಗೆ ಎರಡು ಪ್ರಸ್ತಾವಿತ ಮಾರ್ಗಗಳಿವೆ. ಮುಂಬೈ-ಪಾಟ್ನಾ ಮತ್ತು ದೆಹಲಿ-ಮುಂಬೈ ಮಾರ್ಗಗಳಲ್ಲಿ ಸಂಚರಿಸುವ ನಿರೀಕ್ಷೆ ಇದೆ. ಆ ನಂತರದ ಹಂತದಲ್ಲಿ, ಹೆಚ್ಚಿನ ಮಾರ್ಗಗಳನ್ನು ಸೇರಿಸಲಾಗುತ್ತದೆ. ಮೇಲೆ ತಿಳಿಸಿದ ಮಾರ್ಗಗಳಲ್ಲಿ ರೈಲು ಓಡುವ ನಿರೀಕ್ಷೆಯಿದೆ. ಆದರೆ ಸ್ವಲ್ಪ ಸಮಯದ ನಂತರ - ಪಾಟ್ನಾ-ನವದೆಹಲಿ, ಹೌರಾ-ನವದೆಹಲಿ, ಹೈದರಾಬಾದ್-ನವದೆಹಲಿ, ಎರ್ನಾಕುಲಂ-ಗುವಾಹಟಿ, ತಾಂಬರಂ-ಹೌರಾ, ದೆಹಲಿ-ಜೋಧ್‌ಪುರ-ಬಾಂದ್ರಾ ಟರ್ಮಿನಸ್, ಮತ್ತು ಜಮ್ಮು- ಚೆನ್ನೈ ಮಾರ್ಗಗಳಲ್ಲಿ ಈ ರೈಲು ಸಂಚರಿಸಬಹುದು.

ವಂದೇ ಸಾಧಾರಣ ಎಕ್ಸ್‌ಪ್ರೆಸ್: ಸೌಲಭ್ಯಗಳು ಮತ್ತು ವೈಶಿಷ್ಟ್ಯಗಳು
ಆರಂಭಿದ ಹಂತದಲ್ಲಿ ವಂದೇ ಸಾಧಾರಣ ಎಕ್ಸ್‌ಪ್ರೆಸ್ ನಾನ್-ಎಸಿ ರೈಲಾಗಿರುತ್ತದೆ. ಕುತೂಹಲಕಾರಿಯಾಗಿ, ಇದು ಕೋಚ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧಾರಿತ ಟ್ಯಾಪ್‌ಗಳು, ಎಲೆಕ್ಟ್ರಿಕ್ ಔಟ್‌ಲೆಟ್‌ಗಳು, ಬಯೋ-ವ್ಯಾಕ್ಯೂಮ್ ಟಾಯ್ಲೆಟ್‌ಗಳು, ಎಲ್‌ಇಡಿ ಲೈಟ್‌ಗಳು, ಆಧುನಿಕ ಸ್ವಿಚ್‌ಗಳು, ಫ್ಯಾನ್‌ಗಳು ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆಯನ್ನು ಈ ರೈಲುಗಳು ಹೊಂದಿರುತ್ತದೆ. ಇದಲ್ಲದೆ, ಪ್ರತಿ ಆಸನವು ಮೊಬೈಲ್ ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿರುತ್ತದೆ. ಇದು ಸ್ವಯಂಚಾಲಿತ ಮುಚ್ಚುವ ಬಾಗಿಲುಗಳು ಮತ್ತು ಆನ್‌ಬೋರ್ಡ್ ಕ್ಯಾಟರಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ.












Click it and Unblock the Notifications