Valentine’s Day 2024: ರೋಸ್ ಡೇ ಟು ವ್ಯಾಲೆಂಟೈನ್ಸ್ ಡೇ, ಯಾವ ದಿನ ಏನು ವಿಶೇಷ ತಿಳಿಯಿರಿ
ನವದೆಹಲಿ, ಫೆಬ್ರವರಿ. 05: ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲೆಡೆಯೂ ಪ್ರೇಮಸ್ವರವೇ ಕೇಳಿಬರುತ್ತಿದೆ. ಇದು ಒಂದು ದಿನದ ಆಚರಣೆಯಲ್ಲ. ಬರೋಬ್ಬರಿ ಒಂದು ವಾರಗಳ ಕಾಲ ನಡೆಯುವ ಪ್ರೇಮ ಸಂಭ್ರಮ. ವ್ಯಾಲೆಂಟೈನ್ಸ್ ಡೇ ಫೆಬ್ರವರಿ 14 ರಂದು ಬಂದರೆ, ಅದರ ಹಿಂದಿನ ಇಡೀ ವಾರವು ವಿಶೇಷ ದಿನಗಳನ್ನು ಹೊಂದಿರುತ್ತದೆ. ಇದನ್ನೇ ವ್ಯಾಲೆಂಟೈನ್ ವೀಕ್ ಎನ್ನಲಾಗುತ್ತದೆ.
ಈ ವ್ಯಾಲೆಂಟೈನ್ ವೀಕ್ 2024ರ ಎಲ್ಲಾ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ಯಾವ ದಿನ ಯಾವ ಯಾವ ವಿಶೇಷತೆ ಎಂಬುದನ್ನು ತಿಳಿಯೋಣ.
ದಿನ 1: ಫೆಬ್ರವರಿ 7, ರೋಸ್ ಡೇ
ದಿನ 2: ಫೆಬ್ರವರಿ 8, ಪ್ರಪೋಸ್ ಡೇ
ದಿನ 3: ಫೆಬ್ರವರಿ 9, ಚಾಕೊಲೇಟ್ ಡೇ
ದಿನ 4: ಫೆಬ್ರವರಿ 10, ಟೆಡ್ಡಿ ಡೇ
ದಿನ 5: ಫೆಬ್ರವರಿ 11, ಪ್ರಾಮಿಸ್ ಡೇ
ದಿನ 6: ಫೆಬ್ರವರಿ 12, ಹಗ್ ಡೇ (ಅಪ್ಪುಗೆಯ ದಿನ)
ದಿನ 7: ಫೆಬ್ರವರಿ 13, ಕಿಸ್ ಡೇ
ದಿನ 8: ಫೆಬ್ರವರಿ 14, ಪ್ರೇಮಿಗಳ ದಿನ
ಈ ವಿಶೇಷ ದಿನಗಳಲ್ಲಿ ಏನು ಮಾಡಬಹುದು ಈ ದಿನ ಏಕೆ ವಿಶೇಷ ಎಂಬುದನ್ನು ಮತ್ತಷ್ಟು ವಿವರವಾಗಿ ತಿಳಿಯೋಣ.

ರೋಸ್ ಡೇ
ವ್ಯಾಲೆಂಟೈನ್ಸ್ ವೀಕ್ ಆರಂಭವೇ ರೋಸ್ ಡೇಯಿಂದ ಪ್ರಾರಂಭವಾಗುತ್ತದೆ. ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತಮ್ಮ ಸಂಗಾತಿ ಅಥವಾ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಗುಲಾಬಿ ಯಾವತ್ತಿಗೂ ಪ್ರೀತಿಯ ಶಾಶ್ವತ ಸಂಕೇತ. ಗುಲಾಬಿಗಳನ್ನು ವಿನಿಮಯ ಮಾಡಿಕೊಳ್ಳುವುದು ಒಬ್ಬರ ಭಾವನೆಗಳನ್ನು ತಮ್ಮ ಸಂಗಾತಿಗೆ ವ್ಯಕ್ತಪಡಿಸುವ ಒಂದು ಮಾರ್ಗ. ಬಿಳಿ ಗುಲಾಬಿ ಶಾಂತಿ ಅಥವಾ ಶುದ್ಧತೆಯನ್ನು ಸೂಚಿಸುತ್ತದೆ. ಹಳದಿ ಗುಲಾಬಿ ಸ್ನೇಹದ ಸಂಕೇತವಾಗಿದೆ ಮತ್ತು ಕೆಂಪು ಗುಲಾಬಿ ಪ್ರೀತಿಯನ್ನು ಸೂಚಿಸುತ್ತದೆ.
ಪ್ರಪೋಸ್ ಡೇ
ಪ್ರಪೋಸ್ ಡೇ ದಿನವನ್ನು ಸದುಪಯೋಗಪಡಿಸಿಕೊಳ್ಳಿ. ಈ ದಿನ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಅಥವಾ ಸಂಗಾತಿಗೆ ಅಥವಾ ಕ್ರಶ್‌ಗೆ ಪ್ರಪೋಸ್ ಮಾಡಿ. ಈ ದಿನವು ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಮನಸಾರೆ ತಿಳಿಸಲು ಹೆಚ್ಚು ಸೂಕ್ತ. ಈ ದಿನ, ಜೋಡಿಗಳು ಜೊತೆಯಾಗಿ ಪ್ರವಾಸ ಮತ್ತು ಡಿನ್ನರ್‌ಗೆ ಹೋಗುತ್ತಾರೆ. ಅಲ್ಲಿಯೇ ತಮ್ಮ ಸಂಗಾತಿಗೆ ಪ್ರಪೋಸ್ ಮಾಡುತ್ತಾರೆ.
ಚೊಲೊಲೇಟ್ ಡೇ
ಇದು ಪ್ರೇಮಿಗಳ ವಾರದ ಮೂರನೇ ದಿನವಾಗಿದ್ದು, ಜೋಡಿ ತಮ್ಮ ಸಂಬಂಧಕ್ಕೆ ಸಿಹಿಯನ್ನು ಸೇರಿಸಲು ಪರಸ್ಪರ ವಿವಿಧ ರೀತಿಯ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಚಾಕೊಲೇಟ್ ಪೆಟ್ಟಿಗೆಗಳು ಮತ್ತು ಹೂಗುಚ್ಛಗಳನ್ನು ಉಡುಗೊರೆ ರೀತಿಯಲ್ಲಿ ಕಳುಹಿಸುತ್ತಾರೆ. ಕೆಲವು ಜೋಡಿ ಪ್ರತಿ ಚಾಕೊಲೇಟ್‌ಗೆ ವಿಭಿನ್ನ ಅರ್ಥವಿದೆ ಎಂದು ನಂಬುತ್ತಾರೆ, ಇತರರು ತಮ್ಮ ನೆಚ್ಚಿನ ಚಾಕೊಲೇಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಟೆಡ್ಡಿ ಡೇ
ಟೆಡ್ಡಿ ಎಂದರೆ ದೊಡ್ಡವರಿಂದ ಸಣ್ಣವರಿಗೂ ಕೂಡ ಇಷ್ಟ. ಇಂತಹ ಟೆಡ್ಡಿ ಬೊಂಬೆಗಳನ್ನು ಪ್ರೀತಿಯ ಸಂಕೇತವೆಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನವನ್ನು ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿ ಮತ್ತು ವಾತ್ಸಲ್ಯದ ಪುರಾವೆಯಾಗಿ ಟೆಡ್ಡಿ ಬೇರ್‌ಗಳನ್ನು ಪರಸ್ಪರ ಉಡುಗೊರೆಯಾಗಿ ನೀಡುತ್ತಾರೆ.
ಪ್ರಾಮಿಸ್ ಡೇ
ಈ ದಿನ, ಪ್ರೇಮಿಗಳು ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಲು ಮತ್ತು ಒಟ್ಟಿಗೆ ಇರಲು ಪ್ರಾಮಿಸ್ ನೀಡುತ್ತಾರೆ. ಈ ದಿನವು ಇಬ್ಬರು ವ್ಯಕ್ತಿಗಳ ನಡುವಿನ ಒಂದು ಒಪ್ಪಂದಕ್ಕೆ ಮುದ್ರೆ ಬೀಳುವ ದಿನ.
ಅಪ್ಪುಗೆಯ ದಿನ
ಅಪ್ಪುಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಹಲವಾರು ವರದಿಗಳು ಹೇಳುತ್ತವೆ. ಈ ವೈಜ್ಞಾನಿಕ ನಂಬಿಕೆಯ ಜೊತೆಗೆ, ಈ ದಿನವು ಪ್ರೇಮಿಗಳ ವಾರದ ಒಂದು ಭಾಗವಾಗಿದೆ. ಪ್ರೀತಿಪಾತ್ರರಿಂದ ಬೆಚ್ಚಗಿನ ಬಿಗಿಯಾದ ಅಪ್ಪುಗೆಯು ಪ್ರೇಮಿಗಳ ವಾರದಲ್ಲಿ ಅಪ್ಪುಗೆಯ ದಿನದಂದು ಗಮನಾರ್ಹವಾಗಿರುತ್ತದೆ.
ಕಿಸ್ ಡೇ
ಚುಂಬನವು ಆತ್ಮೀಯತೆಯ ಅಭಿವ್ಯಕ್ತಿ ಮಾತ್ರವಲ್ಲದೆ ಬದ್ಧತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಜೋಡಿ ತಮ್ಮ ಸಂಬಂಧಕ್ಕೆ ಬದ್ಧತೆಯನ್ನು ತೋರಿಸಲು ತಮ್ಮ ವ್ಯಾಲೆಂಟೈನ್ಸ್ ವೀಕ್ ಅನ್ನು ಮೀಸಲಾದ ಕಿಸ್ ಡೇಯೊಂದಿಗೆ ಆಚರಿಸುತ್ತಾರೆ. ಈ ದಿನ ಪ್ರೇಮಿಗಳ ವಾರದಲ್ಲಿ ಬಹಳ ಮಹತ್ವ ಪಡೆದಿದೆ.
ಪ್ರೇಮಿಗಳ ದಿನ
ಪ್ರೇಮಿಗಳ ದಿನದಂದು ಜೋಡಿ ರೋಮ್ಯಾಂಟಿಕ್ ಗೆಟ್‌ಅವೇಗಳು, ಡಿನ್ನರ್‌ಗಳು ಮತ್ತು ಪ್ರವಾಸಗಳನ್ನು ಪ್ಲ್ಯಾನ್ ಮಾಡುತ್ತಾರೆ. ತಮ್ಮ ಸಂಗಾತಿಯೊಂದಿಗೆ ಇಡೀ ದಿನದ ಸಮಯವನ್ನು ಕಳೆಯಲು ಮೊದಲೆ ಸಿದ್ಧರಾಗಿರುತ್ತಾರೆ. ದಿನವನ್ನು ವಿಶೇಷವಾಗಿಸಲು ಮತ್ತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪರಸ್ಪರ ಉಡುಗೊರೆಗಳು ಮತ್ತು ಸರ್ಪ್ರೈಸ್‌ಗಳನ್ನು ನೀಡುತ್ತಾರೆ.












Click it and Unblock the Notifications