ಲಸಿಕೆ ಪಡೆದುಕೊಂಡ ನಂತರವೂ ಸೋಂಕು ತಗುಲಿದರೆ ಏನು ಮಾಡಬೇಕು?

ನವದೆಹಲಿ, ಜುಲೈ 05: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ ಪಡೆದುಕೊಳ್ಳುವುದು ಅವಶ್ಯಕವಾಗಿದ್ದು, ಲಸಿಕೆ ಪಡೆದುಕೊಂಡ ನಂತರ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಎರಡು ಡೋಸ್‌ಗಳ ಲಸಿಕೆ ಪಡೆದುಕೊಂಡ ನಂತರವೂ ಕೆಲವರಿಗೆ ಸೋಂಕು ತಗುಲುತ್ತಿರುವುದು ಕಂಡುಬರುತ್ತಿದೆ.

ಲಸಿಕೆ ಪಡೆದ ನಂತರ ಸೋಂಕು ತಗುಲುವ ಸಾಧ್ಯತೆಯಿದ್ದರೂ ಅದು ತೀರಾ ಕಡಿಮೆ ಎಂದು ತಜ್ಞರು ಹೇಳಿದ್ದು, ಲಸಿಕೆಗಳು ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿವೆ. ಇದು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಹಾಗೂ ಮರಣ ಪ್ರಮಾಣವನ್ನು ತಗ್ಗಿಸುತ್ತದೆ ಎಂದು ಬಾಸ್ಟನ್ ವಿಶ್ವವಿದ್ಯಾಲಯದ ಡಾ. ಸ್ಯಾಂಡ್ರೋ ಗಲಿಯಾ ಅವರು ಹೇಳಿದ್ದಾರೆ. ಹಾಗಿದ್ದರೆ ಲಸಿಕೆ ಪಡೆದುಕೊಂಡ ನಂತರ ಸೋಂಕು ತಗುಲಿದರೆ ಏನು ಮಾಡಬೇಕು? ಮುಂದೆ ಓದಿ...

 ಲಸಿಕೆ ಪಡೆದ ನಂತರವೂ ಸೋಂಕು ಬಂದರೆ ಏನು ಮಾಡಬೇಕು?

ಲಸಿಕೆ ಪಡೆದ ನಂತರವೂ ಸೋಂಕು ಬಂದರೆ ಏನು ಮಾಡಬೇಕು?

ಲಸಿಕೆ ಪಡೆದ ನಂತರ ಯಾವುದೇ ಲಕ್ಷಣಗಳಿಲ್ಲದೇ ಅಥವಾ ಸೌಮ್ಯ ಲಕ್ಷಣಗಳೊಂದಿಗೆ ಸೋಂಕು ಕಾಣಿಸಿಕೊಳ್ಳಬಹುದು. ಹೀಗಾಗಿ ಲಸಿಕೆ ಪಡೆದುಕೊಂಡ ನಂತರ ಸೋಂಕಿಗೆ ತುತ್ತಾದವರು ಮೊದಲು ಹತ್ತು ದಿನಗಳ ಅವಧಿ ಐಸೊಲೇಟ್ ಆಗಿರಬೇಕು.

ಕೊರೊನಾ ಸೋಂಕಿತರಂತೆ ಇವರು ಕೂಡ ಬೇರೆಯವರಿಂದ ಆರು ಅಡಿ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಯಾವುದೇ ಲಕ್ಷಣಗಳಿಲ್ಲದ ವ್ಯಕ್ತಿಯು ಬೇರೆಯವರಿಗೆ ಸುಲಭವಾಗಿ ಸೋಂಕು ದಾಟಿಸಬಲ್ಲನು. ಹೀಗಾಗಿ ಅಂತರ ಕಾಯ್ದುಕೊಳ್ಳುವುದು ಅವಶ್ಯಕ.
 ಎಚ್ಚರಿಕೆ ಇಂದ ಇರಬೇಕು

ಎಚ್ಚರಿಕೆ ಇಂದ ಇರಬೇಕು

ಲಸಿಕೆ ಪಡೆದುಕೊಂಡವರಿಗೆ ಯಾವುದೇ ಲಕ್ಷಣಗಳಿಲ್ಲದೇ ಸೋಂಕು ತಗುಲುತ್ತದೆ. ಹೀಗಾಗಿ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಐಸೊಲೇಟ್ ಆಗಿ ಎಂದು ವೈದ್ಯ ಡಾ. ಎರಿಕ್ ಸಿಯೋನ್ ಪೆನಾ ಹೇಳಿದ್ದಾರೆ. ಲಸಿಕೆ ಪಡೆದವರಲ್ಲಿ ಮೂಗು ಕಟ್ಟುವಿಕೆ, ಸರಾಗ ಉಸಿರಾಟಕ್ಕೆ ತೊಂದರೆ ಹಾಗೂ ಮೈಕೈ ನೋವಿನಂಥ ಲಕ್ಷಣಗಳು ಗೋಚರಿಸಬಹುದು. ಹೀಗಾಗುತ್ತಿದ್ದಂತೆ ವೈದ್ಯರ ಸಲಹೆ ಪಡೆದುಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

 ಲಸಿಕೆ ಪಡೆದ ನಂತರವೂ ಸೋಂಕು ಕಾಣಿಸಿಕೊಳ್ಳುವುದು ಏಕೆ?

ಲಸಿಕೆ ಪಡೆದ ನಂತರವೂ ಸೋಂಕು ಕಾಣಿಸಿಕೊಳ್ಳುವುದು ಏಕೆ?

ಕೆಲವರಲ್ಲಿ ಲಸಿಕೆ ಪಡೆದುಕೊಂಡ ನಂತರವೂ ಸೋಂಕು ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿಯ ಪ್ರಮಾಣದಲ್ಲಿನ ಕುಸಿತ ಇದಕ್ಕೆ ಕಾರಣವಾಗಿರುತ್ತದೆ. ಲಸಿಕೆ ಪಡೆದ ನಂತರವೂ ಅವಶ್ಯಕ ರೋಗನಿರೋಧಕ ಶಕ್ತಿ ದೇಹದಲ್ಲಿ ದೀರ್ಘಕಾಲ ಉಳಿದುಕೊಳ್ಳದೇ ಇರುವುದು ಇದಕ್ಕೆ ಕಾರಣವಾಗಿರುತ್ತದೆ.

 ದೇಶದಲ್ಲಿ ತಗ್ಗಿದ ಎರಡನೇ ಅಲೆ

ದೇಶದಲ್ಲಿ ತಗ್ಗಿದ ಎರಡನೇ ಅಲೆ

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,796 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 723 ಮಂದಿ ಮೃತಪಟ್ಟಿದ್ದಾರೆ, ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದಾಗಿ 4,02,728 ಮಂದಿ ಸಾವನ್ನಪ್ಪಿದ್ದಾರೆ. ಒಂದೇ ದಿನದಲ್ಲಿ 42,352 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇಲ್ಲಿಯವರೆಗೆ, 2,97,00,430 ಮಂದಿ ಗುಣಮುಖರಾಗಿದ್ದಾರೆ.

Recommended Video

      Unlock 3.0 ? CM ಕೊಟ್ಟಿರೋ ಹೊಸ ನಿಯಮಾವಳಿಗಳು | Relaxation From Lockdown | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+