Uttarakhand ABP CVoter Exit Poll 2022: ರಾಜ್ಯದಲ್ಲಿ ಯಾರಿಗೆ ಜಯ?
ನವದೆಹಲಿ, ಮಾರ್ಚ್ 07; ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಪೂರ್ಣಗೊಂಡಿದೆ. ಸೋಮವಾರ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.
ಉತ್ತರಾಖಂಡ ರಾಜ್ಯದಲ್ಲಿ ABP C-voter ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ 26-32 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಉತ್ತರಾಖಂಡ ವಿಧಾನಸಭೆ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.

ABP C-voter ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ 2022ರ ಚುನಾವಣೆಯಲ್ಲಿ ಬಿಜೆಪಿ 26-32, ಕಾಂಗ್ರೆಸ್ 32-38, ಎಎಪಿ 2, ಇತರರು 3-7 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.
ಸೀಟು ಹಂಚಿಕೆ; ಉತ್ತರಾಖಂಡದಲ್ಲಿ ಬಿಜೆಪಿ ಶೇ 41ರಷ್ಟು, ಕಾಂಗ್ರೆಸ್ ಶೇ 39ರಷ್ಟು, ಎಎಪಿ ಶೇ 9ರಷ್ಟು ಮತ್ತು ಇತರರು ಶೇ 11ರಷ್ಟು ಸೀಟು ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications