URBN E-bike: ಬರೀ ₹999ಗೆ ಮನೆಗೆ ತನ್ನಿ ಚೆಂದದ ಇ-ಬೈಕ್, ಮೈಲೇಜ್, ವಿಶೇಷತೆಯ ಮಾಹಿತಿ
ಬೆಂಗಳೂರು, ಜನವರಿ 01: ಕರ್ನಾಟಕ ಸೇರಿದಂತೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಪರಿಸರಕ್ಕೆ ಪೂರಕವಾದ ಸಾರ್ವಜನಿಕ ಸ್ನೇಹಿ 'ಇವಿ' ವಾಹನಗಳು ನಿತ್ಯ ಸಾವಿರಾರು ಬೈಕ್, ಕಾರು, ತ್ರಿಚಕ್ರದ ವಾಹನಗಳು ರಸ್ತೆ ಇಳಿಯುತ್ತವೆ. ನೀವು ಸಹ ಕಡಿಮೆ ಬೆಲೆಗೆ ಇವಿ ಬೈಕ್ ಖರೀದಿಸಲು ಬಯಸಿದರೆ ಇಲ್ಲೊಂದು ಇ-ಬೈಕ್ ಇದೆ ನೋಡಿ. ಇದನ್ನು ನೀವು ಕೇವಲ ₹999ಗೆ ಬುಕ್ ಮಾಡಿ ಮನೆಗೆ ತರಬಹುದು.
ಜನರ ದಿನನಿತ್ಯ ಖರ್ಚು ಕಡಿಮೆ ಮಾಡುವ ಈ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿದೆ. ಅಲ್ಲದೇ ಇವುಗಳಿಂದ ಕಾರ್ಬನ್ ಡೈ ಆಕ್ಸೈಡ್ ಹೊರ ಬರಲ್ಲ. ಹೀಗಾಗಿ ಇದರಿಂದ ವಾಯು ಮಾಲಿನ್ಯ ಉಂಟಾಗುವುದಿಲ್ಲ. ಈ ಕಾರಣದಿಂದ ಅನೇಕ ಕಂಪನಿಗಳು ಹೆಚ್ಚೆಚ್ಚು 'ಇವಿ' ವಾಹನ ತಯಾರಿಸುತ್ತಿವೆ.

ಈ ಪೈಕಿ ಕಡಿಮೆ ವೆಚ್ಚದಲ್ಲಿ ಅತ್ಯಧಿಕ ಮೈಲೇಜ್ ಕೊಡಬಲ್ಲ URBN ಇ-ಬೈಕ್ ಅನ್ನು ಮೊಟೊವೋಲ್ಟ್ (Motovolt) ಕಂಪನಿ ತಯಾರಿಸಿದೆ. ಇದು ಮೊಟೊವೋಲ್ಟ್ 'ಇವಿ' ತಯಾರಿಕೆಯ ಸರಣಿಯ ಭಾಗವಾಗಿ ತಯಾರಿಸಿದೆ. ಇದೊಂದು ಅತ್ಯಂದ ಸುಂದರವಾದ ಆಕರ್ಷಕ ಇವಿ ಬೈಕ್‌ಗಳ ಸಾಲಿಗೆ ಸೇರಿದೆ..
ಇ-ಬೈಕ್ ಬೆಲೆ, ಮೈಲೇಜ್, ವೇಗದ ಮಾಹಿತಿ
ಈ URBN ಇ-ಬೈಕ್ ಒಂದು ಸ್ಮಾರ್ಟ್ ಇ-ಸೈಕಲ್ ಆಗಿದೆ. ಸಮಗ್ರ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಹೊಂದಿರುವ ಈ ಬೈಕ್ ದರ ರೂಪಾಯಿ 49999 ರಿಂದ 54999 ರೂಪಾಯಿ ಇದೆ. ಆದರೆ ಇದನ್ನು ನೀವು ಡೌನ್ ಪೇಮೆಂಟ್ ಕೇವಲ ರೂಪಾಯಿ 999 ಕಟ್ಟಿ ನೀವು ಖರೀದಿಸಬಹುದು.
ಈ ಬೈಕ್ ಸ್ಥಳೀಯ ಸಾರಿಗೆ ಇದು ಸೂಕ್ತ ರೈಡ್ ಎಂದು ಕಂಪನಿ ತಿಳಿಸಿದೆ. URBN ಇ-ಬೈಕ್ ದೈನಂದಿನ ಒಟ್ಟು 40 ಕೆಜಿ ತೂಕ ಹೊಂದಿದೆ. ಇದು ಗಂಟೆಗೆ 25 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಒಂದು ಬಾರಿಗೆ ಈ ಬೈಕ್ ಬ್ಯಾಟರಿ ಚಾರ್ಜ್ ಮಾಡಲು 4 ಗಂಟೆ ಹಿಡಿಯುತ್ತದೆ. ಇದನ್ನು ದಿನನಿತ್ಯ ಸಂಚಾರಕ್ಕೆ ಬಳಕೆ ಆಗುವಂತೆ ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಬೈಕ್‌ಗೆ ಕಪನಿಯು ಇಂಟಿಗ್ರೇಟೆಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮತ್ತು ವಿವಿಧ ವಿಧಾನಗಳಂತಹ ಅದರ ವೈಶಿಷ್ಟ್ಯಗಳನ್ನು ಒದಗಿಸಿದೆ. ಬೈಕ್ ಅನ್ನು ನೀವು ನಿಮ್ಮ ಹತ್ತಿರದ ಆನ್‌ಲೈನ್‌ನಲ್ಲಿ ಅಥವಾ ಶೋರೂಮ್‌ನಲ್ಲಿ ಕೇಂದ್ರಗಳಲ್ಲಿ ಖರೀದಿಸಬಹುದು. ಖರೀದಿಗೆ ಹೆಚ್ಚಿನ ಮಾಹಿತಿಗೆ https://www.motovolt.co/urbn-e-bike ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಇ-ಬೈಕ್ ಸಾಮರ್ಥ್ಯ- ವಿಶೇಷತೆ
ಮೊಟೊವೋಲ್ಟ್ ಕಂಪನಿಯು URBN ಇ-ಬೈಕ್‌ಗೆ ಬಿಐಎಸ್ ಅನುಮೋದಿತ ಬ್ಯಾಟರಿಯನ್ನು ಅಳವಡಿಸಿದ್ದು, ಇದನ್ನು ಹೊರತೆಗೆಯಬಹುದಾಗಿದೆ. ಇದು ಪೆಡಲ್ ಅಸಿಸ್ಟ್ ಅನ್ನು ಹೊಂದಿದೆ. ಇದು ಪ್ಯಡಲ್ ಅಥವಾ ಸ್ವಯಂಚಾಲಿತ ಮೋಡ್ ಮೂಲಕ ಸಂಚರಿಸುವ ಆಯ್ಕೆ ನೀಡಲಾಗಿದೆ. ಇದು ಇಗ್ನಿಷನ್ ಕೀ ಸ್ವಿಚ್, ಹ್ಯಾಂಡಲ್ ಲಾಕ್, ಹಿಂಬದಿ ಮತ್ತು ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹೈಡ್ರಾಲಿಕ್ ರಿಯರ್ ಶಾಕರ್ ಅನ್ನು. ಇದು ಹಳದಿ, ನೀಲಿ, ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಕಪ್ಪು ಮಿಶ್ರಿತ ಲಭ್ಯವಿದೆ.
ರಿಜಿಸ್ಟೇಷನ್-ಲೈಸನ್ಸ್ ಬೇಕಿಲ್ಲ
ನೀವು ಇದನ್ನು ಕೇವಲ 999 ರೂಪಾಯಿಗೆ ಬುಕ್ ಮಾಡಿ ಮನೆಗೆ ತೆರಬಹುದು. ಬಳಿಕ ಮಾಸಿಕವಾಗಿ ಸುಲಭ ಇಎಂಐ ಕಂತುಗಳಲ್ಲಿ ಬಾಕಿ ಹಣ ಪಾವತಿಸಬಹುದು. ವಿಶೇಷವೆಂದರೆ ಬೈಕ್ ಚಲಾಯಿಸಲು ನಿಮಗೆ ಯಾವುದೇ ಪರವಾನಿಗೆ ಮತ್ತು ನೋಂದಣಿ ಅಗತ್ಯವಿಲ್ಲ ಎಂದು ಕಂಪನಿ ಹೇಳಿಕೊಂಡಿದೆ..
URBN ಇ-ಬೈಕ್ ಖರೀದಿಗೆ ನೀವು ಹತ್ತಿರ ಸಂಸ್ಥೆ ಇಲ್ಲವೇ, ಕಂಪನಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications