Unforgettable 2020: ವರ್ಷದ ವಿವಾದಾತ್ಮಕ ಸುದ್ದಿಗಳು

2020 ಕೊರೊನಾ ಕಾರಣಗಳಿಂದ ಸ್ತಬ್ಧವಾಗಿದ್ದರೂ ವಿವಾದಗಳಿಗೇನು ಕೊರತೆ ಇರಲಿಲ್ಲ. ಕೊವಿಡ್ 19 ಒಂದು ವಿವಾದವಾಗಿ ಪರಿಣಮಿಸಿದ್ದರೂ ಇದರ ಹೊರತಾಗಿಯೂ ಸಾಕಷ್ಟು ವಿಚಾರಗಳು ವಿವಾದವಾಗಿ ಪರಿಣಮಿಸಿದವು.

ಇದರಿಂದ ಕೆಲವು ವಿಚಾರಗಳಂತೂ ಕೊವಿಡ್ ಅನ್ನೇ ಮರೆಸುವ ಮಟ್ಟಿಗೆ ಸದ್ದು ಮಾಡಿದವು.

Unforgettable 2020: Biggest Controversies Of The Year

*ರಾಜಮನೆತನದ ಗೌರವ ತೊರೆದ ಹ್ಯಾರಿ ಮೆಘಾನ್

ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ಆತನ ಪತ್ನಿ ಮೆಘಾನ್ ರಾಜಮನೆತನ ತೊರೆದು ದೂರವಾಗಿದ್ದು, ಬ್ರಿಟನ್ ರಾಜಕೀಯ ಸೇರಿದಂತೆ ವಿಶ್ವದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಿತ್ತು. ರಾಜಮನೆತನದೊಳಗಿನ ಕಿತ್ತಾಟದಿಂದ ಬೇಸತ್ತು ಹ್ಯಾರಿ ಹಾಗೂ ಮೆಘಾನ್ ಮುಂದಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ರಾಜಮನೆತನದ ಗೌರವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು, ಹಾಗೆಯೇ ರಾಜಮನೆತನದ ಸ್ಥಾನಮಾನ ತೊರೆದು ಅಮೆರಿಕದಲ್ಲಿ ತಮ್ಮ ಮಗನೊಂದಿಗೆ ಜೀವನ ನಡೆಸುತ್ತಾ ಸ್ವಂತ ಉದ್ಯಮದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದಾರೆ.

*ಕಿಮ್ ಜಾಂಗ್ ಉನ್ ನಿಧನ ಸುದ್ದಿ

ಉತ್ತರ ಕೊಡಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೃದಯ ಚಿಕಿತ್ಸೆ ವೈಫಲ್ಯದಿಂದ ನಿಧರಾಗಿದ್ದಾರೆ ಎನ್ನುವ ಸುದ್ದಿ ಹೆಚ್ಚು ಸದ್ದು ಮಾಡಿತ್ತು, ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ಕಿಮ್ ಜಾಂಗ್ ಉನ್‌ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಶಸ್ತ್ರ ಚಿಕಿತ್ಸೆ ಬಳಿಕ ನಿಧನರಾದರು ಎನ್ನುವ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದಕ್ಷಿಣ ಕೊರಿಯಾದ ಕೆಲ ಮಾಧ್ಯಮಗಳು ಕೂಡ ಕಿಮ್ ಜಾಂಗ್ ಉನ್ ನಿಧನದ ಬಗ್ಗೆ ಸುದ್ದಿ ಮಾಡಿದ್ದವು. ಆದರೆ ಈ ವಿವಾದಕ್ಕೆ ತೆರೆ ಎಳೆಯಲು ಖುದ್ದು ಕಿಮ್ ಸಾರ್ವಜನಿಕ ಬಳಿ ಕಾಣಿಸಿಕೊಳ್ಳಬೇಕಾಯಿತು. ಆದರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಕಿಮ್ ಜಾಂಗ್ ಉನ್ ಅಲ್ಲ ಎನ್ನುವ ಕತೆಗಳು ಸೃಷ್ಟಿಯಾದವು.

*ಸುಶಾಂತ್ ಸಿಂಗ್ ರಜಪೂತ್ ನಿಧನ:

ಭಾರತದ ಮಟ್ಟಿಗೆ ಇತ್ತೀಚೆಗೆ ಸುಶಾಂತ್ ಸಿಂಗ್ ರಜಪೂತ್ ನಿಧನ ಸುದ್ದಿ ಮಾಡಿದಷ್ಟು ಇನ್ಯಾವ ವಿಚಾರಗಳೂ ಸದ್ದು ಮಾಡಲಿಲ್ಲ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಇಡೀ ಭಾರತವೇ ಶಾಕ್‌ಗೆ ಒಳಗಾಗಿತ್ತು. ಸಾವಿನ ಬಳಿಕ ಸುಶಾಂತ್ ಆತ್ಮಹತ್ಯೆಯೋ, ಹತ್ಯೆಯ ಸೇರಿ ಸಾಕಷ್ಟು ಆಯಾಮಗಳ ಕಥೆಗಳು ಹುಟ್ಟಿಕೊಂಡವು. ಮೊದಲು ರಿಯಾ ಚಕ್ರವರ್ತಿ ಸುತ್ತ ಕೆಲ ವಿಚಾರಗಳು ಬಹಿರಂಗವಾದರೆ ಬಳಿಕ ಬಾಲಿವುಡ್ ಮಾಫಿಯಾ ಇದರ ಹಿಂದಿದೆ ಎನ್ನುವ ಸುದ್ದಿಗಳು ಬಂದವು. ಈ ಸುದ್ದಿ ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ, ಮಹಾರಾಷ್ಟ್ರ ಹಾಗೂ ಬಿಹಾರ ನಡುವಿನ ರಾಜಕೀಯಕ್ಕೂ ಕಾರಣವಾಯಿತು. ದೇಶದ ಇತಿಹಾದಲ್ಲೇ ಮೊದಲ ಬಾರಿಗೆ ಒಂದು ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಎರಡು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್ ಮೆಟ್ಟಿಲೇರುವಂತಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+