ಅಮೆರಿಕ v/s ಚೀನಾ ಬೇಹುಗಾರಿಕೆ ಯುದ್ಧ..!
ಚೀನಾ ವ್ಯಾಪ್ತಿಯ ದಕ್ಷಿಣ ಚೀನಾ ಸಮುದ್ರದ No fly Zoneನಲ್ಲಿ ಅಕ್ರಮವಾಗಿ ಪ್ರವೇಶಿಸುವ ಮೂಲಕ ಅಮೆರಿಕದ 'ಯು-2' ಬೇಹುಗಾರಿಕಾ ವಿಮಾನ ಮತ್ತೆ ಸುದ್ದಿಗೆ ಬಂದಿದೆ. ಜಲಗಡಿ ಪ್ರವೇಶಿಸಿದ್ದಕ್ಕೆ ಕೆರಳಿ ಕೆಂಡವಾಗಿದ್ದ ಚೀನಾ 'ಯು-2' ವಿಮಾನ ಹೊಡೆದುರುಳಿಸಲು ಕ್ಷಿಪಣಿ ಉಡಾಯಿಸಿತ್ತು. ಇದು ಎರಡೂ ದೇಶಗಳ ಮಧ್ಯೆ ಬಿಗುವಿನ ವಾತಾವರಣ ನಿರ್ಮಿಸಿದೆ.
ಆದರೆ ಅಮೆರಿಕ ತನ್ನ 'ಯು-2' ಶ್ರೇಣಿಯ ಬೇಹುಗಾರಿಕೆ ವಿಮಾನಗಳನ್ನು ಆಧುನಿಕಗೊಳಿಸಲು ಕೆಲ ತಿಂಗಳ ಹಿಂದೆಯೇ ಭಾರಿ ಪ್ರಮಾಣದ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. 'ಯು-2' ಶ್ರೇಣಿಯ ವಿಮಾನ ಆಧುನಿಕಗೊಳಿಸಲು ಅಮೆರಿಕ ವಾಯುಪಡೆ 50 ಮಿಲಿಯನ್ ಡಾಲರ್ ಖರ್ಚು ಮಾಡುವ ಪ್ರಸ್ತಾಪ ಮುಂದಿಟ್ಟಿತ್ತು.
ಈ ಘಟನೆ ನಡೆದು ತಿಂಗಳುಗಳು ಕಳೆಯುವುದರ ಒಳಗೆ ಚೀನಾ ವಾಯುಗಡಿಗೆ ನುಗ್ಗಿ 'ಯು-2' ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಅಮೆರಿಕ ವಾಯುಪಡೆ ಪಾಲಿನ ಬಾಹುಬಲಿ, ಬೇಹುಗಾರಿಕಾ ವಿಮಾನಗಳ ನಾಯಕ 'ಯು-2' ಅಥವಾ ''ಡ್ರ್ಯಾಗನ್ ಲೇಡಿ'' ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಬಹುದೊಡ್ಡ ಕಾರಣವಿದೆ. ಅರ್ಧ ಶತಮಾನದಷ್ಟು ಇತಿಹಾಸ ಇರುವ ಈ ವಿಮಾನಗಳನ್ನು ಕಂಡರೆ ವೈರಿಪಡೆ ಬೆಚ್ಚಿಬೀಳುತ್ತದೆ.

ರಷ್ಯಾ ಎದುರು ಸೋತಿದ್ದ ಅಮೆರಿಕ..!
ಮೊದಲ ಮಹಾಯುದ್ಧದ ತರುವಾಯ ಸೃಷ್ಟಿಯಾದ ಶೀತಲ ಸಮರದ ವಾತಾವರಣದಲ್ಲಿ ರೂಪುಗೊಂಡ ವಿಮಾನವೇ 'ಯು-2'. ಮೊಟ್ಟ ಮೊದಲಬಾರಿಗೆ ಅತಿ ಎತ್ತರದಲ್ಲಿ ಅಂದರೆ ಸುಮಾರು 70 ಸಾವಿರ ಅಡಿ ಮೇಲೆ ಹಾರುವ ಸಾಮರ್ಥ್ಯ ಹೊಂದಿದ್ದ ವಿಮಾನಗಳು ಇವು. ಆದರೆ 'ಯು-2' ವಿಮಾನದ ಸಾಮರ್ಥ್ಯ ಜಗತ್ತಿಗೆ ಮನವರಿಕೆಯಾಗಿದ್ದು 1960ರಲ್ಲಿ.

ರಷ್ಯಾ ಕ್ಷಿಪಣಿ ಹೊಡೆತ ತಿಂದಿದ್ದ ಯು 2
ಚೀನಾ ಜಲಗಡಿಯಲ್ಲಿ ಈಗ ಮಾಡಿದ ಕಿತಾಪತಿಯನ್ನೇ ರಷ್ಯಾ ಎದುರು ಮಾಡಲು ಹೋಗಿ 'ಯು-2' ಬೇಹುಗಾರಿಕಾ ವಿಮಾನ ನೆಲಕ್ಕುರುಳಿತ್ತು. ಅಮೆರಿಕ ಮುಖಭಂಗ ಅನುಭವಿಸಿತ್ತು. 1960ರಲ್ಲಿ ಈ ದುಸ್ಸಾಹಸಕ್ಕೆ ಕೈಹಾಕಿದ್ದ ಅಮೆರಿಕ ಸೋತು ಸುಣ್ಣವಾಗಿತ್ತು. ಸುಮಾರು 70 ಸಾವಿರ ಅಡಿ ಎತ್ತರದಲ್ಲಿ ಹಾರಿದ್ದ 'ಯು-2' ವಿಮಾನವನ್ನು ರಷ್ಯಾ ಕ್ಷಿಪಣಿಗಳು ಯಶಸ್ವಿಯಾಗಿ ನೆಲಕ್ಕೆ ಉರುಳಿಸಿದ್ದವು. ಆಗಲೇ ಜಗತ್ತಿಗೆ ಗೊತ್ತಾಗಿದ್ದು 'ಯು-2' ಸ್ಪೈ ಪ್ಲೇನ್‌ನ ಸಾಮರ್ಥ್ಯ.

ಹಾಲಿವುಡ್ ಸಿನಿಮಾಗಳಿಗೂ ಇದೇ ಕತೆ ಸ್ಫೂರ್ತಿ..!
ಯುದ್ಧ ತಂತ್ರಜ್ಞಾನ ಹಾಗೂ ವೆಪನ್ ಸಿಸ್ಟಮ್‌ನಲ್ಲಿ ಅಮೆರಿಕ ಯಾವಾಗಲೂ ಮುಂದಿರುತ್ತದೆ. ಏಕೆಂದರೆ ಅಮೆರಿಕ ಸೃಷ್ಟಿಸಿಕೊಂಡಿರುವ ವಾತಾವರಣವೇ ಅಂತಹದ್ದು. ಎಲ್ಲಿ ನೋಡಿದರೂ ಶತ್ರುಗಳನ್ನೇ ಸೃಷ್ಟಿಕೊಂಡಿರುವ ಅಮೆರಿಕ, ಇಂತಹ ಶಸ್ತ್ರಾಸ್ತ್ರಗಳನ್ನು ಹೊಂದಿರಲೇಬೇಕಿದೆ. ಅದರಲ್ಲೂ 1950ರಿಂದ ಅಮೆರಿಕ ವಾಯುಪಡೆಯಲ್ಲಿರುವ 'ಯು-2' ಶ್ರೇಣಿಯ ಬೇಹುಗಾರಿಕಾ ವಿಮಾನಗಳು ಹಾಲಿವುಡ್ ಮಂದಿಗೂ ಹಾಟ್ ಫೇವರಿಟ್. ಇದೇ ವಿಮಾನಗಳ ಕಥೆ ಆಧರಿಸಿ ಹಲವು ಹಾಲಿವುಡ್ ಸಿನಿಮಾಗಳು ಬಂದಿವೆ. ಅಷ್ಟರಮಟ್ಟಿಗೆ 'ಯು-2' ಯುದ್ಧ ವಿಮಾನಗಳು ರಕ್ಷಣಾ ಕ್ಷೇತ್ರವನ್ನು ಆವರಿಸಿವೆ. ವಿಶೇಷವೆಂದರೆ ಜಗತ್ತಿಗೆ ಶಸ್ತ್ರಾಸ್ತ್ರ ಪೂರೈಸುವ ಅಮೆರಿಕ, 'ಯು-2' ಶ್ರೇಣಿ ಬೇಹುಗಾರಿಕಾ ವಿಮಾನಗಳನ್ನು ಈವರೆಗೆ ಯಾರಿಗೂ ಮಾರಾಟ ಮಾಡಿಲ್ಲ.

ಚೀನಾ ವಿರುದ್ಧ ಯುದ್ಧ ಮಾಡುತ್ತಾ ಅಮೆರಿಕ..?
ಅಮೆರಿಕ ಈವರೆಗೂ ತನ್ನ ಮೇಲೆ ದಾಳಿ ಮಾಡಿದ್ದನ್ನು ಸಹಿಸಿಕೊಂಡು ಕೂತಿಲ್ಲ. ಇದೀಗ ಚೀನಾ ಅಮೆರಿಕ ವಾಯುಪಡೆಯ ಬ್ರಹ್ಮಾಸ್ತ್ರವನ್ನೇ ಕೆಣಕಿದೆ. ಇದರಿಂದ ಅಮೆರಿಕ ಕೂಡ ಕೆರಳಿ ಕೆಂಡವಾಗಿದೆ. ಇದು ಯುದ್ಧಕ್ಕೆ ದಾರಿ ಮಾಡಿಕೊಡುವ ಮುನ್ಸೂಚನೆ ನೀಡಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನೇರ ಯುದ್ಧ ನಡೆಯದೇ ಇದ್ದರೂ, ಅಮೆರಿಕ ಈಗ ಚೀನಾ ವಿರುದ್ಧ ಸಾರಿರುವ ವಾಣಿಜ್ಯ ಯುದ್ಧವನ್ನೇ ಮುಂದುವರಿಸಿಕೊಂಡು ಹೋಗಬಹುದು. ಇದು ಚೀನಿ ಆರ್ಥಿಕತೆಯನ್ನ ಮತ್ತಷ್ಟು ಚಿಂತಾಜನಕ ಸ್ಥಿತಿಗೆ ಕೊಂಡೊಯ್ಯುವುದು ಪಕ್ಕಾ.












Click it and Unblock the Notifications