New Year Celebration Venues: ಬೆಂಗಳೂರಿನಲ್ಲಿ ಅದ್ಧೂರಿ, ದುಬಾರಿ ಹೊಸ ವರ್ಷಾಚರಣೆ ನಡೆಯುವ ಸ್ಥಳಗಳಿವು

ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕೆಲವರು ಎಂ.ಜಿ.ರೋಡ್‌, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ಕಡೆಗೆ ಹೋಗಿ ಹೊಸ ವರ್ಷ ಆಚರಿಸಿ ಬರುತ್ತಾರೆ. ಇದರ ಜೊತೆಗೆ ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಅದ್ಧೂರಿ ಹಾಗು ದುಬಾರಿ ಹೊಸ ವರ್ಷಾಚರಣೆ ನಡೆಯುವ ಸ್ಥಳಗಳೂ ಇವೆ. ಅವುಗಳನ್ನು ಈ ಮುಂದಿನಂತೆ ತಿಳಿದುಕೊಳ್ಳೋಣ..

ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್: ಬೆಂಗಳೂರಿನ ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್‌ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆಗೆ ಹೆಸರುವಾಸಿಯಾಗಿದೆ. ಇಲ್ಲಿ ವಿಶೇಷವಾಗಿ ಕ್ರಿಸ್ಮಸ್ ಈವ್ ಡಿನ್ನರ್, ಹೊಸ ವರ್ಷದ ಮುನ್ನಾದಿನ ಪಾರ್ಟಿಗಳು ಆಯೋಜನೆಗೊಳ್ಳುತ್ತವೆ. ಲೈವ್ ಮನರಂಜನೆ, ರುಚಿಕರ ಖಾದ್ಯಗಳನ್ನು ಕೂಡ ಇಲ್ಲಿ ಸವಿಯಬಹುದು. ಇಲ್ಲಿನ ಪ್ರವೇಶ ದರ ಕೂಡ ತುಸು ದುಬಾರಿ ಎಂದು ವರದಿಯಾಗಿದೆ.

Top Luxury And Expensive New Year Celebration Venues In Bengaluru

ಬೆಂಗಳೂರು ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ಮತ್ತು ಸ್ಪಾ: ನಂದಿ ಬೆಟ್ಟದ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೆಟ್ ಬೆಂಗಳೂರು ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ಮತ್ತು ಸ್ಪಾ ವರ್ಷಾಂತ್ಯದ ಅತ್ಯುತ್ತಮ ವಿಹಾರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಐಷಾರಾಮಿ ವ್ಯವಸ್ಥೆಯು ಮರೆಯಲಾಗದ ಅನುಭವವನ್ನು ನೀಡುತ್ತದೆ. ಒಂದು ಲಾಂಗ್‌ ಡ್ರೈವ್‌ ಜೊತೆಗೆ ಹೊಸ ವರ್ಷದ ಎಂಜಾಯ್‌ಮೆಂಟ್‌ಗೆ ಇದು ನೆಮ್ಮದಿಯ ತಾಣ ಎನ್ನಲಾಗಿದೆ.

ತಾಜ್ ಎಂ.ಜಿ.ರಸ್ತೆ: ಎಂ.ಜಿ.ರಸ್ತೆಯಲ್ಲಿರುವ ತಾಜ್ ಹೋಟೆಲ್‌ನಲ್ಲೂ ಹೊಸ ವರ್ಷಾಚರಣೆ ಅದ್ಧೂರಿಯಾಗಿ ನೆರವೇರುತ್ತದೆ. ಇಲ್ಲಿನ ಐಷಾರಾಮಿ ಪಾರ್ಟಿಗೆ ಜನ ಮುಗಿಬೀಳುತ್ತಾರೆ. ಇಲ್ಲಿರುವ ಗ್ರ್ಯಾಂಡ್ ಬಾಲ್‌ರೂಮ್ ಲೈವ್ ಪ್ರದರ್ಶನಗಳು, ಪ್ರೀಮಿಯಂ ಪಾನೀಯಗಳು ಮತ್ತು ರುಚಿಕರ ಆಹಾರದೊಂದಿಗೆ ಅದ್ಧೂರಿ ಸಂಜೆಯನ್ನು ಕಳೆಯಬಹುದು. ತನ್ನ ಸೊಬಗು ಮತ್ತು ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿರುವ ಈ ಜಾಗವು ಹೊಸ ವರ್ಷಾಚರಣೆಯ ನೆಚ್ಚಿನ ಸ್ಥಳಗಳಲ್ಲಿ ಒಂದು.

ಮಲ್ಬೆರಿ ಶೇಡ್ಸ್ ನಂದಿ ಹಿಲ್ಸ್: ಬೆಂಗಳೂರಿನ ಸಮೀಪವೇ ಇರುವ ನಂದಿ ಹಿಲ್ಸ್‌ ಬಳಿ ಇರುವ ಮಲ್ಬೆರಿ ಶೇಡ್ಸ್ ಬೆಂಗಳೂರು ಕೂಡ ಹೊಸ ವರ್ಷಾಚರಣೆಗೆ ನೆಚ್ಚಿನ ತಾಣ. ಬೆಂಗಳೂರಿನಿಂದ ಹೊರವಲಯದಲ್ಲಿರೋ ಈ ಪ್ರದೇಶ ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಹೆಸರುವಾಸಿಯಾಗಿದೆ. ನಂದಿ ಬೆಟ್ಟದ ಸಮೀಪದಲ್ಲೇ ಇರುವ ಈ ತಾಣವು ಪ್ರಕೃತಿ ಸೊಬಗಿನೊಂದಿಗೆ ಪಾರ್ಟಿ ಮೂಡ್‌ ತರಿಸುತ್ತದೆ.

Top Luxury And Expensive New Year Celebration Venues In Bengaluru

ಕಾನ್ರಾಡ್ ಬೆಂಗಳೂರು: ಬೆಂಗಳೂರಿನ ಕೇಂದ್ರ ಭಾಗದಲ್ಲಿ ಸುಮಾರು 24 ಅಂತಸ್ತಿನ ಹೆಗ್ಗುರುತಾಗಿರುವ ಕಾನ್ರಾಡ್ ಬೆಂಗಳೂರು ಹೋಟೆಲ್‌ ಕೂಡ ಹೊಸ ವರ್ಷಾಚರಣೆಯ ಹಾಟ್‌ಸ್ಪಾಟ್‌ಗಳಲ್ಲಿ ಒಂದು. ಹಲಸೂರು ಕೆರೆಯ ಅದ್ಭುತ ನೋಟದೊಂದಿಗೆ ಇಲ್ಲಿ 285 ವಿಶಾಲವಾದ ಕೊಠಡಿಗಳು ಮತ್ತು ಸೂಟ್‌ಗಳ ವ್ಯವಸ್ಥೆ ಇದೆ. ಇದು ಐಷಾರಾಮಿ ಆತಿಥ್ಯ ಮತ್ತು ಆಧುನಿಕ ವ್ಯವಸ್ಥೆಗೆ ಹೆಸರುವಾಸಿಯಾಗಿದೆ.

ಇದಲ್ಲದೆ ಬೆಂಗಳೂರಿನ ವೈಟ್‌ಫೀಲ್ಡ್‌, ಯಶವಂತಪುರ, ಮಾರತ್‌ಹಳ್ಳಿ, ಇಂದಿರಾನಗರ, ಕೋರಮಂಗಲ, ಜೆಪಿ ನಗರ, ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಹಲವು ಪ್ರದೇಶಗಳಲ್ಲಿರುವ ಐಷಾರಾಮಿ ಹೋಟೆಲ್‌ಗಳು ದುಬಾರಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಸಾಕ್ಷಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+