15 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯ ಇರುವ 5 ಬೆಸ್ಟ್ ಮೊಬೈಲ್ಸ್
ನೀವು ಸ್ಮಾರ್ಟ್‌ಫೋನ್ ಕೊಳ್ಳುವ ಯೋಚನೆಯಲ್ಲಿ ಇದ್ದೀರಾ.. ಹೊಸ ಟೆಕ್ನಾಲಜಿ ಹೊಂದಿರುವ ಪೋನ್ ಕಡಿಮೆ ಬೆಲೆಗೆ ನಿಮ್ಮ ಜೇಬುವ ಸೇರುವ ಕನಸು ಇದೆಯಾ.. ನಿಮ್ಮ ಹತ್ತು ಹಲವು ಪ್ರಶ್ನೆಗೆ ಉತ್ತರ ಇಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ ಬೆಸ್ಟ್ ಐದು ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ. ಈ ಮೊಬೈಲ್‌ಗಳು ಆಂಡ್ರಾಯ್ಡ್ 14 ಬೆಂಬಲಿಸುವಂತಾಗಿವೆ. ಅಲ್ಲದೆ 5000 ಎಂಎಎಚ್ ಬ್ಯಾಟರಿ ಹೊಂದಿವೆ.
ಈ ಪಟ್ಟಿಯಲ್ಲಿ ನಿಮಗೆ ಹತ್ತಾರು ಫೋನ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಬೆಸ್ಟ್ ಫೀಚರ್ಸ್ ಹಾಗೂ ಪರ್ಫಾಮೆನ್ಸ್ ಹೊಂದಿರುವ ಮೊಬೈಲ್‌ಗಳನ್ನು ಈ ವರದಿಯಲ್ಲಿ ತಿಳಿಸಲಾಗಿದೆ. ಈ ಫೋನ್‌ಗಳ ಬಜೆಟ್ 15 ಸಾವಿರಕ್ಕಿಂತಲೂ ಕಡಿಮೆ ಆಗಿರಲಿದೆ.

Motorola g64 5G
Motorola g64 5G ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಬೆಸ್ಟ್ ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ 6000mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಯಾವುದೇ ಬ್ಯಾಂಕ್ ಕೊಡುಗೆ ಇಲ್ಲದೆ ರೂ 13,999 ಗೆ ಲಭ್ಯವಿದೆ, ಆದರೆ ಬ್ಯಾಂಕ್ ಕೊಡುಗೆಗಳೊಂದಿಗೆ ನೀವು ಮೊಬೈಲ್‌ನ್ನು ರೂ 1,500 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಫೋನ್ 8 GB RAM, 128 GB ಇಂಟರ್ನಲ್ ಸ್ಟೋರೇಜ್, 6.5 ಇಂಚಿನ ಪೂರ್ಣ HD+ ಡಿಸ್ಪ್ಲೇ ಮತ್ತು 50MP ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Infinix
Infinix ನ ಈ ಫೋನ್ 15 ಸಾವಿರ ಬಜೆಟ್‌ನಲ್ಲಿ ಖರೀದಿಸಬಹುದಾದ ಬೆಸ್ಟ್ ಫೋನ್ ಆಗಿದೆ. 6000 mAh ಬ್ಯಾಟರಿ ಮತ್ತು ಟರ್ಬೊ ಚಾರ್ಜಿಂಗ್‌ನೊಂದಿಗೆ ಬರುವ ಈ ಫೋನ್ ಪ್ರಸ್ತುತ ಕೇವಲ 11,650 ರೂಗಳಲ್ಲಿ ಲಭ್ಯವಿದೆ. ಕಂಪನಿಯು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ಮೂಲಕ ಫೋನ್ ಖರೀದಿಸಿದರೆ 1750 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತಿದೆ. ಈ ಮೊಬೈಲ್ 6.78 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ 50 MP ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ.

ರೆಡ್‌ಮಿ 13 ಜಿ
ರೆಡ್‌ಮಿ 13 ಜಿ ಸಹ ಈ ರೇಂಜ್‌ನಲ್ಲಿ ಖರೀದಿಸಬಹುದಾದ ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ತನ್ನ ಲಾಂಚ್ ಪ್ರೈಸ್‌ಗಿಂತಲೂ ಶೇಕಡಾ 25 ರಷ್ಟು ಕಡಿಮೆ ದರದಲ್ಲಿ ಲಭ್ಯವಿದ್ದು, 10,499 ರೂಗಳಿಗೆ ಖರೀದಿಸಬಹುದು. ಈ ಫೋನ್‌ಗೆ ಎಕ್ಸ್‌ಚೆಂಜ್ ಆಫರ್ ಹಾಗೂ ಬ್ಯಾಂಕ್ ಆಫರ್ ಸಹ ನೀಡಲಾಗುತ್ತದೆ. ಈ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂಭಾಗದಲ್ಲಿ 50 ಎಂಪಿ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ 5 ಎಂಪಿ ಕ್ಯಾಮೆರಾ ಹೊಂದಿದೆ.

realme C65 5G
ಈ ವಿಭಾಗದಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಚೀನಾ ಕಂಪನಿಯ ಫೋನ್ ಎಂದರೆ realme C65 5G. ಇದು ಸಹ ಲಾಂಚ್ ಪ್ರೈಸ್‌ಗಿಂತ ಶೇಕಡಾ 21 ರಷ್ಟು ಕಡಿಮೆ ಬೆಲೆಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು, 12,499 ರೂಗಳಿಗೆ ಇದನ್ನು ಪಡೆಯಬಹುದು. ಅಲ್ಲದೆ ಆಕರ್ಷಕ ಬ್ಯಾಂಕ್ ಆಫರ್‌ಗಳು ಸಹ ಇದಕ್ಕೆ ಲಭ್ಯ. ಈ ಮೊಬೈಲ್ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 5000 ಎಂಎಎಚ್ ಬ್ಯಾಟರಿ ಹೊಂದಿರಲಿದೆ. ಹಿಂಭಾಗದಲ್ಲಿ 50 ಎಂಪಿ ಹಾಗೂ ಮುಂಭಾಗದಲ್ಲಿನ 8 ಎಂಪಿ ಕ್ಯಾಮೆರಾ ನೀಡಲಾಗಿದೆ.

ಸ್ಯಾಮ್‌ಸಂಗ್ ಎಂ34
ಸ್ಯಾಮ್‌ಸಂಗ್ ಎಂ34 ಮೊಬೈಲ್ ಅನ್ನು ಸಹ ಈ ರೇಂಜ್‌ನಲ್ಲಿ ಸಿಗುವ 6000 ಎಂಎಎಚ್ ಬ್ಯಾಟರಿ ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ ಸದ್ಯ ಫ್ಲಿಪ್ ಕಾರ್ಟ್‌ನಲ್ಲಿ 14,179 ರೂ.ಗಳಿಗೆ ಲಭ್ಯ. ಈ ಸಾಧನೆ 6ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. 6.5 ಇಂಚಿನ ಡಿಸ್‌ಪ್ಲೇ ಹೊಂದಿದೆ.












Click it and Unblock the Notifications