ಯುಗಾದಿ ವೇಳೆ ಇದೇನಿದು 'ಟೈಮ್ ಟ್ರಾವೆಲರ್' ಅಶುಭ ಭವಿಷ್ಯ

ಭಯಾನಕ ಸಾಂಕ್ರಾಮಿಕ ರೋಗದಿಂದ ಪ್ರಪಂಚವೇ ನಾಶವಾಗುತ್ತದೆ ಎಂದು ಟೈಮ್ ಟ್ರಾವೆಲರ್ ಭವಿಷ್ಯ ನುಡಿದಿದ್ದಾರೆ.

ಪ್ರಪಂಚದ ಅಂತ್ಯವು ಹಳೆಯ ಪರಿಕಲ್ಪನೆಯಾಗಿದೆ. ಪ್ರಪಂಚದ ಅಂತ್ಯವನ್ನು ಹಲವು ಬಾರಿ ಪ್ರಚಾರ ಮಾಡಲಾಗಿದೆ. ಇದು 2012 ರಲ್ಲಿ ಕೊನೆಗೊಳ್ಳುತ್ತದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಆ ಸಮಯದಲ್ಲಿ 2012 ಎಂಬ ಹಾಲಿವುಡ್ ಚಿತ್ರವೂ ಬಂದಿತ್ತು. ಪ್ರತಿ ಬಾರಿ ಈ ರೀತಿಯ ಪ್ರಚಾರ ನಡೆದಾಗ ಜಗತ್ತು ಕೊನೆಗೊಳ್ಳುತ್ತಿಲ್ಲ, ಜೀವಂತವಾಗಿದೆ. ಇತ್ತೀಚೆಗೆ, ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಯುಗದ ಅಂತ್ಯದ ಕುರಿತು ಸಂದೇಶವನ್ನು ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 30 ರಂದು Eno Alaric ಅವರು TikTok ನಲ್ಲಿ radianttimetraveler ಎಂಬ ಖಾತೆಯನ್ನು ಹೊಂದಿದ್ದಾರೆ. ಶೀಘ್ರದಲ್ಲೇ ಜಗತ್ತು ಕೊನೆಗೊಳ್ಳುತ್ತದೆ ಎಂದು ಅವರು ಹೇಳುತ್ತಿದ್ದಾರೆ. ಇದು 2023ರಲ್ಲೇ ಆಗಲಿದೆ ಎಂದರು. ಅವರ ವಿಡಿಯೋದಲ್ಲಿ ನಾಲ್ಕು ಸಂದೇಶಗಳಿವೆ. ಮೊದಲಿಗೆ ಅವರು "ಹೌದು ನಾನು ರಿಯಲ್ ಟೈಮ್ ಟ್ರಾವೆಲರ್. ಈ ಜಗತ್ತು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ" ಎಂದು ಹೇಳಿದ್ದಾರೆ.

This is the ominous future of the time traveller during Ugadi

ಈಗ ಇದೇ ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅವ್ರು ಭವಿಷ್ಯದ ಬಗ್ಗೆ ಹೇಳಿದ್ದು, ಮುಂಬರುವ ವರ್ಷಗಳಲ್ಲಿ ಮತ್ತೊಂದು ಭಯಾನಕ ಸಾಂಕ್ರಾಮಿಕ ರೋಗವು ಹೊರಹೊಮ್ಮಲಿದೆ ಎಂದು ಹೇಳಿದರು. ಇದು ಪ್ರಪಂಚದಾದ್ಯಂತದ ಜನರನ್ನ ನಾಶ ಮಾಡಲಿದೆ ಎನ್ನುತ್ತಾರೆ.

ಕಳೆದ ಎರಡುವರೆ ವರ್ಷದಿಂದ ಕೊರೊನಾ ಇಡೀ ವಿಶ್ವವನ್ನೇ ಆತಂಕದಲ್ಲಿ ಮುಳುಗಿಸಿದೆ. ಹಲವಾರು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಈಗಲೂ ಬಾದಿಸುತ್ತಿದೆ. ಹೀಗಿರುವಾಗ ಮುಂಬರುವ ವರ್ಷಗಳಲ್ಲಿ ಮತ್ತೊಂದು ಭಯಾನಕ ಸಾಂಕ್ರಾಮಿಕ ರೋಗವು ಹೊರಹೊಮ್ಮಲಿದೆ ಎಂದು ಹೇಳಿದರು. ಇದು ಪ್ರಪಂಚದಾದ್ಯಂತದ ಜನರನ್ನ ನಾಶ ಮಾಡಲಿದೆ ಎನ್ನುತ್ತಾರೆ ಟೈಮ್ ಟ್ರಾವೆಲರ್.

This is the ominous future of the time traveller during Ugadi

ಡೈಲಿ ಸ್ಟಾರ್ ವರದಿಯ ಪ್ರಕಾರ, ಆ ವ್ಯಕ್ತಿ ತಾನು ಸಮಯದ ಮೂಲಕ ಪ್ರಯಾಣಿಸಿದ್ದೇನೆ. 2714ರಿಂದ ಹಿಂತಿರುಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಮುಂದಿನ ಜಾಗತಿಕ ಸಾಂಕ್ರಾಮಿಕ ಸೇರಿದಂತೆ ಮುಂದಿನ ದಶಕದ ಘಟನೆಗಳ ಬಗ್ಗೆ ವ್ಯಕ್ತಿ ಎಚ್ಚರಿಕೆ ನೀಡಿದರು. ಈ ಸಾಂಕ್ರಾಮಿಕ ರೋಗ ಹೇಗೆ ಹರಡುತ್ತದೆ ಮತ್ತು ವೈರಸ್ ಎಲ್ಲಿಂದ ಬರುತ್ತದೆ ಎಂಬುದನ್ನೂ ಹೇಳಿದ್ದಾನೆ ಎಂಬುದು ಗಮನಾರ್ಹ. ಅವರ ಹೇಳಿಕೆಯ ಪ್ರಕಾರ, 2024ರಲ್ಲಿ ಅಂದರೆ ಮುಂದಿನ ವರ್ಷ ಮಂಜುಗಡ್ಡೆ ಕರಗುತ್ತದೆ. ಅದರ ಅಡಿಯಲ್ಲಿ ಹುದುಗಿರುವ ಅಪಾಯಕಾರಿ ವೈರಸ್ ಪ್ರಪಂಚದಾದ್ಯಂತ ಹರಡುತ್ತದೆ. 35 ಕೋಟಿಗೂ ಹೆಚ್ಚು ಜನರು ಈ ವೈರಸ್‌ನಿಂದ ಬಳಲುತ್ತಾರೆ. ಈ ವೈರಸ್ ಜನರನ್ನ ಗಂಭೀರವಾಗಿ ಕಾಡುತ್ತಿದೆ ಎಂದು ಹೇಳಿದ್ದಾರೆ.

ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯ ಹೆಸರು ಎನೋ ಅಲಾರಿಕ್ (Eno Alaric).. ಟಿಕ್‌ಟಾಕ್‌ನಲ್ಲಿ @theradianttimetraveller ಹೆಸರಿನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ಈ ವರ್ಷ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ಯಗ್ರಹವನ್ನ ಹುಡುಕುವುದಾಗಿ ಘೋಷಿಸಿತು. ಇದು ಅನೇಕ ನಕ್ಷತ್ರಗಳಿಂದ ಹೆಚ್ಚಿನ ಪ್ರಮಾಣದ ಶಕ್ತಿಯನ್ನ ಹೀರಿಕೊಳ್ಳುತ್ತದೆ. ಅದರ ನಂತರ ಅವರು ಸೂರ್ಯನಿಂದ ಶಕ್ತಿಯನ್ನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಎನೋ ಅಲಾರಿಕ್ ಅವರಿಗೆ 1.30 ಲಕ್ಷ ಫಾಲೋವರ್ಸ್ ಇದ್ದಾರೆ. ಚಾಂಪಿಯನ್ ಎಂಬ ಅನ್ಯಗ್ರಹ ಜೀವಿಗಳು ಮತ್ತೆ ಭೂಮಿಗೆ ಬಂದು ದೊಡ್ಡ ಯುದ್ಧ ಮಾಡಲಿದ್ದಾರೆ ಎಂದರು. ಎರಡನೆಯ ಸಂದೇಶದಲ್ಲಿ ಮಾನವರು ಆ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ವಿವರಿಸಿದರು. ಹಾಗೂ ನಾಲ್ಕನೇ ಸಂದೇಶದಲ್ಲಿ 2023ರ ಮಾರ್ಚ್ 23ರಂದು ಭೂಮಿಯಲ್ಲಿರುವ 8 ಸಾವಿರ ಜನರನ್ನು ಬೇರೆ ಗ್ರಹಕ್ಕೆ ಕರೆದೊಯ್ಯಲಾಗುವುದು.ಅವರು ವಾಸಿಸಲು ಸೂಕ್ತ ವಾತಾವರಣ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕೆಲವು ವಿಚಿತ್ರ ಮತ್ತು ಆಘಾತಕಾರಿ ಹೇಳಿಕೆಗಳನ್ನ ಸಹ ಎನೋ ಅಲಾರಿಕ್ ನೀಡಿದ್ದಾರೆ. 2025ರಲ್ಲಿ ಮಾನವರು ಮಂಗಳ ಗ್ರಹವನ್ನ ತಲುಪಲಿದ್ದು, ಅಲ್ಲಿ ಅವರು ನೋಡುವ ದೃಶ್ಯಗಳು ಜನರನ್ನ ಅಚ್ಚರಿಗೊಳಿಸುತ್ತವೆ. ಗಗನಯಾತ್ರಿಗಳು ಲ್ಯಾಂಡಿಂಗ್ ಸೈಟ್ ಬಳಿ ಮಾನವ ಮೂಳೆಗಳನ್ನ ಕಂಡುಕೊಳ್ಳುತ್ತಾರೆ. ಭೂಮಿಯಲ್ಲಿ ವಾಸಿಸುವ ಮಾನವರು ಮಂಗಳ ಗ್ರಹದಲ್ಲಿ ಹಿಂದೆ ವಾಸಿಸುತ್ತಿದ್ದರು ಎಂಬುದನ್ನ ಇದು ಸಾಬೀತುಪಡಿಸುತ್ತದೆ ಎಂದು ಆಘಾತಕ್ಕೊಳಗಾಗುತ್ತಾರೆ. 2026ರಲ್ಲಿ, ಇತಿಹಾಸದಲ್ಲಿ ಅತಿದೊಡ್ಡ ಸೌರ ಚಂಡಮಾರುತವು ಭೂಮಿಗೆ ಅಪ್ಪಳಿಸಲಿದೆ. ಇದರಿಂದ ಜಗತ್ತಿನಾದ್ಯಂತ ಆರು ವಾರಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+