Viral Video: ನೀವು ಟ್ರಾಫಿಕ್ ರೂಲ್ಸ್ ಫಾಲೋ ಮಾಡದಿದ್ದರೂ ನಾವು ಮಾಡುತ್ತೇವೆ ಅಂತಿವೆ ಈ ಹಸುಗಳು!
ಬೆಂಗಳೂರು, ಜೂನ್. 27: ಸಿಲಿಕಾನ್ ಸಿಟಿಯಲ್ಲಿ ಹೆಚ್ಚು ಚರ್ಚೆಗೆ ಒಳಗಾಗುವ ವಿಷಯ ಎಂದರೆ ಟ್ರಾಫಿಕ್. ಇಲ್ಲಿನ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವ ವಾಹನಗಳು ಆದಷ್ಟು ಬೇಗ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಸಂಚಾರ ದಟ್ಟಣೆ ಇಲ್ಲದ ರಸ್ತೆಗಳಲ್ಲಿ ಹೋಗಲು ಹೆಚ್ಚು ವಾಹನ ಸವಾರರು ಯತ್ನಿಸುತ್ತಾರೆ. ಆದರೆ, ಮನುಷ್ಯರಿಗಿಂತ ನಾವೇ ವಾಸಿ ಎನ್ನುತ್ತಿವೆ ಈ ಪ್ರಾಣಿಗಳು.
ಹೌದು... ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಎರಡು ವಿಡಿಯೋಗಳು ಜನರಿಗೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡಲು ಹೇಳುವಂತಿವೆ. ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಪುಣೆಯ ಎರಡು ವಿಡಿಯೋಗಳು ಸಕತ್ ಸದ್ದು ಮಾಡುತ್ತಿವೆ. ವಿಡಿಯೋಗಳಲ್ಲಿ ಹಸುಗಳು ರಸ್ತೆಯಲ್ಲಿ ಸಿಗ್ನಲ್ ಬಿಡುವುದನ್ನು ಕಾಯುತ್ತಿವೆ. ಸಾವಿರಾರು ಮಂದಿ ಈ ವಿಡಿಯೋಗಳಿಗೆ ಲೈಕ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ತಿವೆ ಹಸುಗಳು!
ಬೆಂಗಳೂರಿನ ವೈರಲ್ ವಿಡಿಯೋದಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಹಸುವೊಂದು ನಿಂತಿದ್ದು, ವಾಹನ ಸವಾರರು ಮತ್ತು ನೆಟ್ಟಿಗರು ಆಶದಚರ್ಯ ವ್ಯಕ್ತಪಡಿಸಿದ್ದಾರೆ. Whats Hot Bangalore ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಟ್ರಾಫಿಕ್ ಜಾಮ್ ನಡುವೆ ಕಪ್ಪು ಮತ್ತು ಬಿಳಿ ಬಣ್ಣದ ಹಸು ಶಾಂತವಾಗಿ ನಿಂತಿರುವುದನ್ನು ಕಾಣಬಹುದು.
ಈ ವಿಡಿಯೋ ಹಂಚಿಕೊಂಡ ಒಂದು ದಿನದಲ್ಲೇ 57 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಲೈಕ ಮಾಡಿದ್ದು, ಕಾಮೆಂಟ್ ಮಾಡುತ್ತಿದ್ದಾರೆ. Whats Hot Bangalore ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋಗೆ "ಬೆಂಗಳೂರು ಟ್ರಾಫಿಕ್‌ಗಳು ಯಾವುದನ್ನೂ ಬಿಡುವುದಿಲ್ಲ" ಎಂದು ಶೀರ್ಷಿಕೆ ನೀಡಲಾಗಿದೆ.
ಪುಣೆಯಲ್ಲಿಯೂ ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ ಹಸು
ಪುಣೆ ಪೊಲೀಸರು ಕೂಡ ಟ್ರಾಫಿಕ್ ರೂಲ್ಸ್ ಫಾಲೋ ಮಾಡುವ ಹಸುವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಹಸು ತಾಳ್ಮೆಯಿಂದ ನಿಂತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರೆಡ್ ಸಿಗ್ನಲ್ ಗ್ರೀನ್‌ಗೆ ತಿರುಗಲಿ ಎಂದು ಹಸು ಕಾಯುತ್ತಿರುವುದನ್ನು ನೋಡಬಹುದು. ಅದರ ಮುಂದೆ ಯಾವುದೇ ವಾಹನಗಳು ಇಲ್ಲದಿದ್ದರೂ ಕೂಡ ಸಿಗ್ನಲ್ ಜಂಪ್ ಮಾಡುತ್ತಿಲ್ಲ.
ಈ ವಿಡಿಯೋವನ್ನು ಕೆಂಪು ಟ್ರಾಫಿಕ್ ಲೈಟ್ ಹಸಿರು ಬಣ್ಣಕ್ಕೆ ತಿರುಗಲು ಕಾಯುತ್ತಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋವನ್ನು ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಪೊಲೀಸ್ ಇಲಾಖೆ ಬಳಸಿಕೊಂಡಿದೆ. ಇದನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮರುಹಂಚಿಕೊಳ್ಳಲಾಗುತ್ತಿದೆ.












Click it and Unblock the Notifications