ಟ್ರಾಫಿಕ್ ಜಾಮ್, ಅಂಗಡಿಗಳು ಬಂದ್..! ಹೇಗಿತ್ತು ತಾಲಿಬಾನ್ ಆಡಳಿತದ ಮೊದಲ ದಿನ..?

ರಸ್ತೆ ತುಂಬಾ ಗಿಜಿಗುಡುತ್ತಿರುವ ಕಾರುಗಳು, ಟ್ರಾಫಿಕ್ ಪೊಲೀಸರೇ ಇಲ್ಲದ ಸಿಗ್ನಲ್ಸ್, ಗಡಿಬಿಡಿಯ ನಡುವೆ ರಸ್ತೆ ಮಧ್ಯೆ ಸಿಲುಕಿ ಪರದಾಡಿದ ಸವಾರರು. ಅಂದಹಾಗೆ ತಾಲಿಬಾನ್ ಆಡಳಿತದ ಮೊದಲ ದಿನ ಅಫ್ಘಾನ್‌ ಚಿತ್ರಣ ಹೀಗಿತ್ತು. ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು 'ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ' ಎಂದು ಕರೆದ ಮೊದಲ ದಿನವೇ ಕಾಬೂಲ್ ಸ್ಥಿತಿ ಹಿಂದಿಗಿಂತ ಭಿನ್ನವಾಗಿ ಕಂಡಿತ್ತು. 60 ಲಕ್ಷ ಜನರು ವಾಸಿಸುವ ಕಾಬೂಲ್ ನಗರದಲ್ಲಿ ಪುರುಷರದ್ದೇ ಪ್ರಾಬಲ್ಯವಿದ್ದಂತೆ ಕಂಡುಬಂತು.

Recommended Video

      ತಾಲಿಬಾನ್ ಆಡಳಿತದ ನಿಯಮಗಳನ್ನು ಕೇಳಿದ್ರೆ ಎಂಥವರೂ ನಡುಗಿ ಹೋಗ್ತಾರೆ | Oneindia Kannada

      ಭಾಗಶಃ ಅಂಗಡಿಗಳು ಬಾಗಿಲು ಹಾಕಿದ್ದವು. ಇಡೀ ಕಾಬೂಲ್ ನಗರ ಸುತ್ತುವರಿದಿದ್ದ ತಾಲಿಬಾನ್ ಪಡೆಗಳು ಕೈಯಲ್ಲಿ ಗನ್ ಹಿಡಿದು ರಕ್ಷಣೆಗೆ ನಿಂತಿದ್ದವು. ಅಮೆರಿಕ ಬೆಂಬಲಿತ ಅಶ್ರಫ್ ಘನಿ ಸರ್ಕಾರ ಉರುಳುತ್ತಿದ್ದಂತೆ ಇಡೀ ಅಫ್ಘಾನ್ ಸ್ಥಿತಿ ಭಿನ್ನವಾದಂತೆ ಕಂಡುಬಂತು. ವ್ಯಾಪಾರ ಹಾಗೂ ವಹಿವಾಟಿನ ಮೇಲೆ ಈ ಬದಲಾವಣೆ ಪ್ರಭಾವ ಬೀರಿದ್ದರೂ, ಜನರ ಓಡಾಟಕ್ಕೆ ಯಾವುದೇ ಅಡ್ಡಿ ಎದುರಾಗಿರಲಿಲ್ಲ. ಹೀಗಾಗಿ ಜನ ನಿರಾತಂಕವಾಗಿ ಸಿಟಿ ಸುತ್ತುತ್ತಿದ್ದರು. ಆದರೆ ಅಂಗಡಿ ಮಾಲೀಕರು ಮಾತ್ರ ಭಯಪಟ್ಟು ಬಾಗಿಲು ತೆರೆಯಲೇ ಇಲ್ಲ.

      ಬಾಂಬ್ ಬೀಳಲಿಲ್ಲ, ಗುಂಡು ಸಿಡಿಯಲಿಲ್ಲ

      ಬಾಂಬ್ ಬೀಳಲಿಲ್ಲ, ಗುಂಡು ಸಿಡಿಯಲಿಲ್ಲ

      ಇಷ್ಟುದಿನ ಅಮೆರಿಕ ಸೇನೆ ಹೇಳಿದಂತೆ ಅಫ್ಘಾನಿಸ್ತಾನದಲ್ಲಿ ಏನೂ ನಡೆಯಲಿಲ್ಲ. ದೊಡ್ಡ ದೊಡ್ಡ ಸ್ಕ್ಯಾನರ್‌ಗಳು, ಬಾಂಬ್ ಪತ್ತೆ ಮಾಡುವ ಯಂತ್ರಗಳು ಖಾಲಿ ಬಿದ್ದಿವೆ. ಏರ್‌ಪೋರ್ಟ್‌ ರಸ್ತೆಯಲ್ಲೂ ಖಾಕಿ ಪಡೆ ಕಾಣಿಸಲಿಲ್ಲ. ಇನ್ನು ಪೊಲೀಸ್ ಚೆಕ್‌ಪೋಸ್ಟ್‌ಗಳು ಪಂಜರದಂತೆ ನಿಂತಿವೆ. ಪೊಲೀಸ್ ಕ್ಯಾಬಿನ್ ಒಳಗೆ ಮನುಷ್ಯರ ಸುಳಿವೇ ಇರಲಿಲ್ಲ. ಹೀಗೆ ತಾಲಿಬಾನ್ ಆಡಳಿತದ ಮೊದಲ ದಿನ ಅಫ್ಘಾನ್‌ನಲ್ಲಿ ಎಲ್ಲವೂ ವ್ಯತಿರಿಕ್ತವಾಗಿತ್ತು. ಇಷ್ಟು ದಿನ ರಸ್ತೆಯಲ್ಲೇ ಸಿಡಿಯುತ್ತಿದ್ದ ಬಾಂಬ್ ಹಾಗೂ ಗುಂಡುಗಳು ಸದ್ದು ಮಾಡಲೇ ಇಲ್ಲ. ಎಲ್ಲೆಡೆಯೂ ವಾತಾವರಣ ಶಾಂತವಾಗಿತ್ತು ಹಾಗೂ ಜನರು ನೆಮ್ಮದಿಯಾಗಿ ಓಡಾಡಿದರು.

      ಹೊಸ ಅತಿಥಿಗಳ ಆಗಮನ..!

      ಹೊಸ ಅತಿಥಿಗಳ ಆಗಮನ..!

      ತಾಲಿಬಾನ್ ಆಡಳಿತ ಜಾರಿಗೆ ಬಂದರೂ ಅಫ್ಘಾನಿಸ್ತಾನದಲ್ಲಿ ದೊಡ್ಡ ಬದಲಾವಣೆ ಏನೂ ಕಾಣಲಿಲ್ಲ. ಆದರೆ ಹೊಸ ಅತಿಥಿಗಳು ಎಂಟ್ರಿ ಕೊಟ್ಟಿದ್ದರು. 1996ರಲ್ಲಿ ತಾಲಿಬಾನ್ ಆಡಳಿತ ನಡೆಸುವಾಗ ಇದ್ದ ಉಡುಪುಗಳೇ ಕಾಣಿಸುತ್ತಿದ್ದವು. ಅದೇ ರೀತಿಯ ಬಟ್ಟೆ ತೊಟ್ಟು, ಗಡ್ಡ ಬಿಟ್ಟು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ್ದ ತಾಲಿಬಾನ್ ಯುವಕರು, ಕೈಯಲ್ಲಿ ಗನ್ ಹಿಡಿದು ಕಾವಲು ಕಾಯುತ್ತಿದ್ದರು. ಹೀಗೆ ಅಫ್ಘಾನ್‌ನ 34 ಪ್ರಾಂತ್ಯಗಳಿಂದ ಬಂದ ತಾಲಿಬಾನ್ ಪಡೆಯ ಸದಸ್ಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯುತ್ತಿದ್ದರು.

       ತಾಲಿಬಾನ್ ಈಗ ಫುಲ್ ಸ್ಮಾರ್ಟ್

      ತಾಲಿಬಾನ್ ಈಗ ಫುಲ್ ಸ್ಮಾರ್ಟ್

      1996ರ ಸಮಯ ಈಗ ಮುಗಿದಿದೆ, ತಾಲಿಬಾನ್ ಬದಲಾಗಿದೆ. 2021ಕ್ಕೆ ತಕ್ಕಂತೆ ತಾಲಿಬಾನ್ ಕೂಡ ತನ್ನನ್ನು ಬದಲಾಯಿಸಿಕೊಂಡಿದೆ, ಸದಸ್ಯರ ಕೈಯಲ್ಲಿ ಸ್ಮಾರ್ಟ್ ಫೋನ್‌ ರಾರಾಜಿಸುತ್ತಿವೆ. ಹಾಗೇ ಮತ್ತೊಂದ್ಕಡೆ ಗನ್ ಹಿಡಿದು ರಸ್ತೆಯಲ್ಲಿ ನಿಂತಿರುವ ತಾಲಿಬಾನ್ ಪಡೆ ಜೊತೆಗೆ ಫೋಟೋ ತೆಗೆಯಲು ಜನ ಮುಗಿಬೀಳುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಾಲಿಬಾನ್ ಪಡೆಗಳ ಜೊತೆಗಿನ ಫೋಟೋ ರಾರಾಜಿಸುತ್ತಿವೆ. ಕಾಬೂಲ್ ನಗರಕ್ಕೆ ಎಂಟ್ರಿ ಕೊಡುತ್ತಿರುವ ಪ್ರತಿಯೊಂದು ವಾಹನಗಳನ್ನೂ ಗನ್ ಹಿಡಿದು ನಿಂತ ತಾಲಿಬಾನ್‌ ಸದಸ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

      ಅಫ್ಘಾನಿಸ್ತಾನದಲ್ಲಿ ಎಲ್ಲೆಲ್ಲೂ ಕಟ್ಟೆಚ್ಚರ..!

      ಅಫ್ಘಾನಿಸ್ತಾನದಲ್ಲಿ ಎಲ್ಲೆಲ್ಲೂ ಕಟ್ಟೆಚ್ಚರ..!

      ಅಪರಾಧ ಮಾಡಿದವರಿಗೆ ತಾಲಿಬಾನ್ ತನ್ನದೇ ರೀತಿಯಲ್ಲಿ ಕಠಿಣಶಿಕ್ಷೆ ನೀಡುವುದು ವಾಡಿಕೆ. ಆದ್ರೆ ಈ ಬಾರಿ ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗನ್ ಹಿಡಿದು ನಿಂತಿರುವ ತಾಲಿಬಾನ್ ಪಡೆಗಳು ಜನರಿಗೆ ರಕ್ಷಣೆ ನೀಡುತ್ತಿವೆ. ಅಫ್ಘಾನ್‌ನಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಪರಿಸ್ಥಿತಿ ಕೈಮೀರಿ ಹೋಗಬಹುದು. ಹಿಂಸೆ ಭುಗಿಲೆದ್ದಿದ್ದೇ ಆದರೆ ಲೂಟಿ, ದೊಂಬಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿರುವ ತಾಲಿಬಾನ್ ಆಡಳಿತಗಾರರು ಕತ್ತಲಾಗುತ್ತಿದ್ದಂತೆ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಿ ಜನರನ್ನ ಮನೆಗೆ ಕಳುಹಿಸುತ್ತಿದ್ದಾರೆ. ಒಟ್ನಲ್ಲಿ ಇದೆಲ್ಲವನ್ನೂ ಗಮನಿಸುತ್ತಿದ್ದರೆ ತಾಲಿಬಾನ್ ಸಂಪೂರ್ಣ ಬದಲಾಗಿರುವಂತೆ ಕಾಣುತ್ತಿದೆ. ಹೊಸ ಆಡಳಿತ ನೀಡುವ ಹುರುಪು ತಾಲಿಬಾನ್ ಆಡಳಿತಗಾರರಲ್ಲಿ ಕಾಣುತ್ತಿದ್ದು, ಮುಂದೆ ಯಾವ ತಿರುವು ಪಡೆಯಲಿದೆ ಎಂಬುದನ್ನ ಕಾದು ನೋಡಬೇಕಿದೆ. (ಕೃಪೆ: ಅಲ್ ಜಜೀರಾ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+