ಸುಸ್ಥಿರ ಅಭ್ನಿವೃದ್ಧಿಗಾಗಿ ಕೃತಕ ಬುದ್ಧಿಮತಿಕೆ

ಪ್ರಸ್ತುತ ವಿಶ್ವ ದೃಷ್ಟಿಕೋನದಲ್ಲಿ "ಸುಸ್ಥಿರ ಬೆಳವಣಿಗೆ" ಅಥವ "Sustainable development" ಎಂಬ ಪರಿಕಲ್ಪನೆ, ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯು, ನಾವು ಅವಲಂಬಿಸಿರುವ ನೈಸರ್ಗಿಕ ಮತ್ತು ಸಾಮಾಜಿಕ ಸಂಪನ್ಮೂಲಗಳನ್ನು ಸಂರಕ್ಷಿಸಿಯೇ ಬೆಳೆಯುವಂತಹ ಪ್ರಣಾಲಿಗೆ ಸುಸ್ಥಿರ ಬೆಳವಣಿಗೆ ಎಂದು ಕರೆಯುತ್ತೇವೆ.

ಸುಸ್ಥಿರತೆ ಎಂಬುದು ಭಾರತೀಯರಿಗೆ ಹೊಸ ವಿಷಯವೇನಲ್ಲ. ಶತಮಾನಗಳಿಂದ, ನಮ್ಮ ನಾಗರಿಕತೆಯು "ಧರ್ಮ" ಎಂಬ ಕೇಂದ್ರ ಪರಿಕಲ್ಪನೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಧರ್ಮ ಎಂಬ ಪದದ ಮೂಲ "ಧೃತ್"-- ಇದರ ಅರ್ಥ ಸ್ಥಿರತೆ ಮತ್ತು ನಿರಂತರತೆ.

ಆದರೆ, ಈಗಿನ ಹೆಚ್ಚುತ್ತಿರುವ ಕೈಗಾರಿಕೀಕರಣ ಮತ್ತು ಬಳಕೆ-ಆಧಾರಿತ ಆರ್ಥಿಕತೆ, ನಮ್ಮ ನೈಸರ್ಗಿಕ ಮತ್ತು ಸಾಮಾಜಿಕ ಸಂಪನ್ಮೂಲಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ತರುತ್ತಿವೆ. ಆರ್ಥಿಕ ಪ್ರಗತಿ ದೇಶದ ಹಿತಕ್ಕೆ ಅತಿ ಪ್ರಾಮುಖ್ಯವಾದುದ್ದು, ಮತ್ತು ಕೈಗಾರೀಕರಣ ಆರ್ಥಿಕ ಸಮೃದ್ಧಿಯ ಒಂದು ಅವಿಭಾಜ್ಯ ಅಂಗ. ಸುಸ್ಥಿರ ರೀತಿಯಲ್ಲಿ ಕೈಗಾರೀಕರಣ ಮತ್ತು ಆರ್ಥಿಕ ಉನ್ನತಿಯನ್ನು ತರುವುದು ಇಂದಿನ ಒಂದು ಒತ್ತುವ ಸವಾಲೇ ಸರಿ.

Sustainable Development Getting More Attention In Recent Days And India Will Be The Key Power

ಸುಸ್ಥಿರ ಕೈಗಾರೀಕರಣ ಒಂದು ಬಹಳ ಸಂಕೀರ್ಣವಾದ ಸಮಸ್ಯೆ. ಅದಕ್ಕಾಗಿ, ಮಾಹಿತಿ ತಂತ್ರಜ್ಞಾನ-- ಅದರಲ್ಲೂ ಪ್ರಮುಖವಾಗಿ ಕೃತಕ ಬುದ್ಧಿಮತಿಕೆಯ ಬಳಕೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತಿವೆ. ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮವು (UNDP) ಸುಸ್ಥಿರ ಬೆಳವಣಿಗೆಗಾಗಿ ಕೃತಕ ಬುದ್ಧಿಮತಿಕೆಯ ಸಂಶೋಧನೆಗೆ ಬಹಳ ಪ್ರಾಮುಖ್ಯತೆ ಕೊಟ್ಟಿದೆ.

ಸುಸ್ಥಿರ ಬೆಳವಣಿಗೆಗಾಗಿ ಬಳಸುವ ಒಂದು ಪ್ರಮುಖ ರೀತಿಯೇನೆಂದರೆ "ನೀತಿ ಮಧ್ಯಸ್ಥಿಕೆ" (policy intervention). ಈಗಾಗಲೇ ವಿಶ್ವದಾದ್ಯಂತ ಬಹಳಷ್ಟು ನೀತಿ ಮಧ್ಯಸ್ತಿಕೆಗಳು ಪ್ರಸ್ತುತ ಸಕ್ರಿಯವಾಗಿವೆ.

ಸುಸ್ಥಿರತೆಗಾಗಿ ನೀತಿ ಮಧ್ಯಸ್ತಿಕೆಗಳನ್ನು ವಿನ್ಯಾಸಗೊಳಿಸುವುದು ಬಹಳ ಸಂಕೀರ್ಣವಾದ ಕೆಲಸ. ಒಂದು ಅಂಶವನ್ನು ಸುಸ್ಥಿರಗೊಳಿಸುವ ನೀತಿ ಮಧ್ಯಸ್ತಿಕೆಗಳು ತಾವೇ ಇನ್ನೊಂದು ಅಂಶವನ್ನು ಅಸ್ಥಿರಗೊಳಿಸಬಹುದು. ಹಾಗಿಯೇ, ಒಂದು ಮಟ್ಟದಲ್ಲಿ ಸುಸ್ಥಿರಗೊಳಿಸುವಂಥ ಮಧ್ಯಸ್ತಿಕೆಗಳು, ತಾವೇ ಇನ್ನೊಂದು ಮಟ್ಟದಲ್ಲಿ ಪ್ರಣಾಲಿಯನ್ನು ಅಸ್ಥಿರಗೊಳಿಸಬಹುದು. ಉದಾಹರಣೆಗೆ, ಬಹಳ ಶ್ರಮಪಟ್ಟು ಅಳವಡಿಸಲಾದ ನೀತಿ ಮಧ್ಯಸ್ತಿಕೆಗಳು ಜನರ ಆರೋಗ್ಯವನ್ನು ಸುಸ್ಥಿರಗೊಳಿಸಿ, ಮರಣಮಟ್ಟವನ್ನು ಕಡಿಮೆ ಮಾಡಿತೆಂದು ಭಾವಿಸೋಣ. ಇದರ ಫಲಿತಾಂಶದಿಂದ ಆಹಾರ ಮತ್ತು ಇನ್ನಿತರೇ ಸಂಪನ್ಮೂಲಗಳ ಬೇಡಿಕೆ ಹೆಚ್ಚಾಗಿ, ಈ ಅಂಶದಲ್ಲಿ ಸಮಾಜವು ಅಸ್ಥಿರಗೊಳ್ಳಬಹುದು.! ಹಾಗಂತ ಜನರ ಅರೋಗ್ಯ ಗುಣಮಟ್ಟವನ್ನು ಸುಧಾರಿಸಬಹುದಾದಂತಹ ನೀತಿ ಮಧ್ಯಸ್ತಿಕೆಯನ್ನು ಅಳವಡಿಸದೇ ಇರುವುದು ಸಹ ಒಳ್ಳಯೆದಲ್ಲ.

ಹಾಗಾಗಿ, ಸುಸ್ಥಿರ ಬೆಳವಣಿಗೆಗಾಗಿ ನೀತಿ ಮಧ್ಯಸ್ತಿಕೆಗಳು ಸಮಗ್ರವಾದಂತ ರೀತಿಯಲ್ಲಿ ವಿನ್ಯಾಸಗೊಳಿಸಬೇಕು. ನೀತಿ ಮಧ್ಯಸ್ತಿಕೆಗಳು ಯಾವುದೇ ಒಂದು ಅಂಶದಮೇಲೆ ಕೇಂದ್ರೀಕೃತಗೊಂಡು ಮತ್ತೆಲ್ಲಾ ಅಂಶಗಳನ್ನು ಹೊರತುಪಡಿಸುವಂತಿರಬಾರದು.

ಇಂತಹ ಸಂಕೀರ್ಣವಾದಂತಹ ಕಾರ್ಯಕ್ಕೆ ಬೆಂಬಲ ನೀಡಲು, Policy Support System (PSS) ಎಂಬ ಕೃತಕ ಬುದ್ಧಿಮತಿಕೆಯ ಮೇಲೆ ಆಧಸಿದಾದಂಥ ತಂತ್ರಾಂಶಗಳು ಹೆಚ್ಚು ಪ್ರಚಲಿತವಾಗುತ್ತಿವೆ. ವಿಶ್ವದಾದ್ಯಂತ ಈ ದಿಕ್ಕಿನಲ್ಲಿ ಬಹಳಷ್ಟು ಸಂಶೋಧನಾ ಕಾರ್ಯಗಳು ಪ್ರಗತಿಯಲ್ಲಿದ್ದು, ಒಂದಷ್ಟು ವಾಣಿಜ್ಯ ಉತ್ಪನ್ನಗಳೂ ಸಹ ಬರಲು ಪ್ರಾರಂಭವಾಗಿವೆ.

ಭಾರತದಲ್ಲೂ ಸಹ, ಈ ದಿಕ್ಕಿನಲ್ಲಿ ಬಹುಮಟ್ಟದಲ್ಲಿ ಕಾರ್ಯಗಳು ಪ್ರಗತಿಯಲ್ಲಿವೆ. ರಾಷ್ಟ್ರಮಟ್ಟದಲ್ಲಿ, ಮತ್ತು ಹಲವಾರು ರಾಜ್ಯಮಟ್ಟದಲ್ಲಿ "ಮುಕ್ತ ದತ್ತಾಂಶ ಉಪಕ್ರಮಗಳು" (open data initiatives), ಬಹಳಷ್ಟು ವರ್ಷಗಳಿಂದ ನಡೆಯುತ್ತಾ ಬಂದಿವೆ. ಯಾವುದೇ ಕೃತಕ ಬುದ್ಧಿಮತಿಕೆಗೆ ಉನ್ನತ ಮಟ್ಟದ ದತ್ತಾಂಶಗಳು ಅತ್ಯಗತ್ಯ. ಹೀಗೆ ಒಂದೆರಡು ಮುಕ್ತ ದತ್ತಾಂಶ ವಿಶ್ಲೇಷಾಣ ವೇದಿಕೆಗಳೂ ಸಹ ಬರಲು ಪ್ರಾರಂಭವಾಗಿವೆ.

ಇವೆಲ್ಲವೂ, ಮುಂಬರುವ ತಿಂಗಳು ಮತ್ತು ವರುಷಗಳಲ್ಲಿ ಸುಸ್ಥಿರ ಬೆಳವಣಿಗೆಯಲ್ಲಿ ಭಾರತವು ಮಹತ್ವದ ಕಾರ್ಯಗಳನ್ನು ಕೈಗೊಳ್ಳಬಹುದೆಂಬ ಭರವಸೆ ಬಲಿಷ್ಠಗೊಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+