ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸುಧಾಕರ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರೇ ಬೇಸ್ತು

|
Google Oneindia Kannada News

ಮೊದಲು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಇದಾದ ನಂತರ ಸಚಿವ ಉಮೇಶ್ ಕತ್ತಿ ನಿಧನದ ನಂತರ ಮುಂದೂಡಲ್ಪಟ್ಟಿದ್ದ ಜನಸ್ಪಂದನ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ಶನಿವಾರ (ಸೆ 10) ಯಶಸ್ವಿಯಾಗಿ ಮುಗಿದಿದೆ.

ಇಡೀ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದ ಸಚಿವ ಡಾ.ಸುಧಾಕರ್ ಅವರ ಸಂಘಟನಾ ಶಕ್ತಿ ರಾಜ್ಯ ಬಿಜೆಪಿಯಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಚಿವರು ಗಣಪತಿ ಹೋಮವನ್ನೂ ಮಾಡಿದ್ದರು.

Breaking: ಡಬಲ್ ಎಂಜಿನ್ ಸರ್ಕಾರ ಬೇಕು ಹೊರತು ಡಬಲ್ ಸ್ಟೇರಿಂಗ್ ಸರ್ಕಾರವಲ್ಲ: ಸುಧಾಕರ್Breaking: ಡಬಲ್ ಎಂಜಿನ್ ಸರ್ಕಾರ ಬೇಕು ಹೊರತು ಡಬಲ್ ಸ್ಟೇರಿಂಗ್ ಸರ್ಕಾರವಲ್ಲ: ಸುಧಾಕರ್

ಚಿಕ್ಕಬಳ್ಳಾಪುರ ಭಾಗದಲ್ಲಿ ಬಿಜೆಪಿಗೆ ಅಷ್ಟೇನೂ ನೆಲೆಯಿಲ್ಲ, ಹಾಗಾಗಿ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಸುಧಾಕರ್, ಕಾರ್ಯಕ್ರಮ ಎಲ್ಲೂ ಹಳಿತಪ್ಪದಂತೆ ವಹಿಸಿದ್ದರು. ಸುಮಾರು ಎಂಟು ಸಾವಿರ ಕಾರ್ಯಕರ್ತರನ್ನು ಇದಕ್ಕಾಗಿ ನಿಯೋಜಿಸಲಾಗಿತ್ತು.

ಮುಂದಿನ ಚುನಾವಣೆಗೆ ಈ ಕಾರ್ಯಕ್ರಮ ದಿಕ್ಸೂಚಿಯಾಗಬಲ್ಲದು ಎನ್ನುವ ಚರ್ಚೆಯ ನಡುವೆ, ಸಚಿವ ಸುಧಾಕರ್ ಅವರು ಪ್ರಮುಖವಾಗಿ ಈ ಭಾಗದ ಕಾಂಗ್ರೆಸ್ ಮುಖಂಡರಿಗೆ ತಮ್ಮ ಸಂಘಟನಾ ಶಕ್ತಿಯನ್ನು ಭರ್ಜರಿಯಾಗಿಯೇ ತೋರಿಸಿದರು.

 ಸಮಾವೇಶದ ಮುನ್ನಾದಿನ ಕಾರ್ಯಕ್ರಮ ರದ್ದಾಗಿದೆ ಎಂದ ಸಿಎಂ

ಸಮಾವೇಶದ ಮುನ್ನಾದಿನ ಕಾರ್ಯಕ್ರಮ ರದ್ದಾಗಿದೆ ಎಂದ ಸಿಎಂ

ಕಳೆದ ಬಾರಿಯೂ ಸಂಪೂರ್ಣ ಪೂರ್ವತಯಾರಿಯನ್ನು ಸುಧಾಕರ್ ಮಾಡಿಕೊಂಡಿದ್ದರು. ಸಮಾವೇಶದ ಮುನ್ನಾದಿನ ಕಾರ್ಯಕ್ರಮ ರದ್ದಾಗಿದೆ ಎಂದು ಖುದ್ದು ಸಿಎಂ ಬೊಮ್ಮಾಯಿ ಹೇಳಿದ್ದರು. ಅಡುಗೆಯನ್ನೂ ಸಿದ್ದಪಡಿಸಲಾಗಿತ್ತು, ಆದರೆ, ಬಿಜೆಪಿ ಕಾರ್ಯಕರ್ತರ ಆಕ್ರೋಶದ ಬಿಸಿಯನ್ನು ಅರಿತ ರಾಜ್ಯ ಬಿಜೆಪಿ ನಾಯಕರು ಬೊಮ್ಮಾಯಿ ಸರಕಾರದ ಒಂದು ವರ್ಷದ ಸಾಧನಾ ಕಾರ್ಯಕ್ರಮವನ್ನು ರದ್ದು ಪಡಿಸಿದ್ದರು. ಇದೇ ರೀತಿ ಉಮೇಶ್ ಕತ್ತಿ ನಿಧನದ ವೇಳೆಯೂ ಕಾರ್ಯಕ್ರಮವನ್ನು ಮುಂದೂಡುವ ಅನಿವಾರ್ಯತೆಗೆ ಬಿಜೆಪಿ ನಾಯಕರು ಬಿದ್ದಿದ್ದರು.

 ಸಚಿವ ಉಮೇಶ್ ಕತ್ತಿ ನಿಧನ ಮತ್ತೆ ಕಾರ್ಯಕ್ರಮ ಮುಂದೂಡಿಕೆ

ಸಚಿವ ಉಮೇಶ್ ಕತ್ತಿ ನಿಧನ ಮತ್ತೆ ಕಾರ್ಯಕ್ರಮ ಮುಂದೂಡಿಕೆ

ಕಾರ್ಯಕ್ರಮಕ್ಕೆ ಒಂದಲ್ಲಾ ಒಂದು ವಿಘ್ನ ಬರುತ್ತಿದ್ದರೂ, ಸಮಾವೇಶ ನಡೆಸಲೇ ಬೇಕು ಎನ್ನುವ ಛಲದಿಂದ ಸಚಿವ ಡಾ.ಸುಧಾಕರ್ ಎಲ್ಲಾ ಜವಾಬ್ದಾರಿಯ ಮುಂದಾಳತ್ವವನ್ನು ವಹಿಸಿಕೊಂಡಿದ್ದರು. ಅಂದು ಕೊಂಡಿದ್ದಕ್ಕಿಂತ ಒಂದು ಪಟ್ಟು ಹೆಚ್ಚೇ ಎನ್ನುವಂತೆ ಸಚಿವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಂದುಕೊಂಡಿದ್ದನ್ನು ಸಾಧಿಸಿದ ಸುಧಾಕರ್ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾದರು ಎಂದು ವ್ಯಾಖ್ಯಾನಿಸಲಾಗುತ್ತಿದೆ.

 ಸಿಎಂ ಬೊಮ್ಮಾಯಿ ಮನಸಾರೆ ಶ್ಲಾಘನೆ

ಸಿಎಂ ಬೊಮ್ಮಾಯಿ ಮನಸಾರೆ ಶ್ಲಾಘನೆ

ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಸುಧಾಕರ್ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನಸಾರೆ ಹೊಗಳಿದರು. ಲಕ್ಷಾಂತರ ಜನರು ಸೇರಿದ್ದರಿಂದ ಊಟದ ವ್ಯವಸ್ಥೆಯಲ್ಲೂ ಎಲ್ಲೂ ಲೋಪವಾಗಲಿಲ್ಲ. ಬಂದಂತಹ ಸಾವಿರಾರು ವಾಹನಗಳಿಗೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

 ಸಚಿವ ಸುಧಾಕರ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರೇ ಬೇಸ್ತು

ಸಚಿವ ಸುಧಾಕರ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರೇ ಬೇಸ್ತು

ಒಟ್ಟಾರೆಯಾಗಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಭಾಗದಲ್ಲಿ ಬಿಜೆಪಿಯ ವರ್ಚಸ್ಸನ್ನು ತಕ್ಕಮಟ್ಟಿಗೆ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಇದರ ಜೊತೆಗೆ, ಈ ಭಾಗದಲ್ಲಿ ಡಾ.ಸುಧಾಕರ್ ಕೂಡಾ ತಮ್ಮ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ, ಸುಧಾಕರ್ ಅವರಿಗೆ ಈ ಕಾರ್ಯಕ್ರಮ ಬೂಸ್ಟರ್ ಡೋಸ್ ನಂತಾಗಿದೆ.

English summary
Success Of Jana Spandana Programme In Doddaballapur May Get Booster To Dr. Sudhakar. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X