Dancing Bhel Puri: ಫುಡ್ ಸ್ಟ್ರೀಟ್‌ನಲ್ಲಿ ಡ್ಯಾನ್ಸಿಂಗ್ ಭೇಲ್ ಪೂರಿ ಎಂದಾದರು ತಿಂದಿದ್ದೀರಾ?
ಭೇಲ್ ಪುರಿ ಭಾರತದ ಅಚ್ಚುಮೆಚ್ಚಿನ ರಸ್ತೆ ಬದಿ ತಿಂಡಿಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ. ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಇದನ್ನು ಆನಂದಿಸಿ ತಿನ್ನುವವರಿದ್ದಾರೆ. ಭೇಲ್ ಪುರಿ ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದನ್ನು ಮಂಡಕ್ಕಿಯೊಂದಿಗೆ ಸ್ವೀಟ್, ಖಾರ, ಪುದೀನಾ, ಕೊತ್ತಂಬರಿ ಬೆರೆಸಿ ತಯಾರಿಸಿದ ಚಟ್ನಿ, ಟೊಮೇಟೊ, ಈರುಳ್ಳಿ, ಪುರಿ, ಬೇಯಿಸಿದ ಆಲೂಗಡ್ಡೆ, ಬಟಾಣಿ ಬೆರೆಸಿ ತಯಾರಿಸಲಾಗುವುದು.
ಇದನ್ನು ತಯಾರಿಸಿದ ಕೂಡಲೆ ತಿನ್ನುವುದು ಉತ್ತಮ ಹಾಗು ರುಚಿಕರ. ಬೇರೆ ಬೇರೆ ವಿಧದಲ್ಲಿ ತಯಾರಿಸಿದ ಚಟ್ನಿಯೊಂದಿಗೆ ಸೇವಿಸಿದಲ್ಲಿ ಇದು ಇನ್ನು ರುಚಿ. ಭಾರತದಲ್ಲೆಡೆ ದಾರಿಯಲ್ಲಿ ಗಾಡಿಗಳನ್ನು ಇಟ್ಟುಕೊಂಡು ಇದನ್ನು ತಯಾರಿಸಿ ಮಾರುವವರೆ ಜಾಸ್ತಿ.

ಇತ್ತೀಚೆಗೆ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊ ವೈರಲ್ ಆಗಿದ್ದು, ಆಹಾರ ಪ್ರಿಯರ ಗಮನವನ್ನು ಸೆಳೆದಿದೆ. "ಡ್ಯಾನ್ಸಿಂಗ್ ಭೇಲ್ ಪುರಿ" ಎಂದು ಕರೆಯಲ್ಪಡುವ ಭೇಲ್ ಪುರಿಯ ತಯಾರಿಕೆಯನ್ನು ವೀಡಿಯೊದಲ್ಲಿ ಕಾಣಬಹುದು. ಈ ನಿರ್ದಿಷ್ಟ ಭೇಲ್ ಪುರಿಯನ್ನು 60 ವಿಭಿನ್ನ ಪದಾರ್ಥಗಳ ಸಂಯೋಜನೆಯಲ್ಲಿ ತಯಾರಿಸಲಾಗುತ್ತದೆ.
ಇದನ್ನು ತಯಾರಿಸುವಾಗ ತಯಾರಕ ನೃತ್ಯ ಮಾಡುವ ಮೂಲಕ ಉತ್ಸಾಹದಿಂದ ತಯಾರಿಸುತ್ತಾನೆ. ಜೊತೆಗೆ ವೇಗವಾಗಿ ಹೆಚ್ಚುವರಿ ಪದಾರ್ಥಗಳನ್ನು ಇದಕ್ಕೆ ಸೇರಿಸುತ್ತಾನೆ. ಮಾರಾಟಗಾರನ ಲಯಬದ್ಧ ಚಲನೆಗಳು ಭೇಲ್ ಪುರಿಯ ಹೆಸರನ್ನೇ ಬದಲಾಯಿಸಿದೆ. ನೀವು ಪೂರ್ಣ ವೀಡಿಯೊವನ್ನು ಇಲ್ಲಿ ವೀಕ್ಷಿಸಬಹುದು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಕಾಮೆಂಟ್‌ಗಳು ಬಂದಿವೆ.

ಐಸ್‌ಕ್ರೀಂ ದೋಸಾ:-
ಮಸಾಲೆ ದೋಸೆ ಅಂದ್ರೆ ಯಾರಿಗೆ ಇಷ್ಟ ಇಲ್ಲ. ಬೆಂಗಳೂರಿನಲ್ಲಿ ಎಂಟಿಆರ್, ಸಿಟಿಆರ್, ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ದೋಸೆ ತಿನ್ನೋಕೆ ಜನ ಕ್ಯೂನಲ್ಲಿ ನಿಂತಿರುತ್ತಾರೆ. ಆದರೆ ನೀವು ಯಾವಾತ್ರಾದ್ರೂ ಐಸ್‌ಕ್ರೀಮ್ ದೋಸೆ ತಿಂದಿದ್ದೀರಾ? ಅರೇ ಇದೇನಪ್ಪಾ ಐಸ್‌ಕ್ರೀಂ ದೋಸೆನಾ? ಅಂತ ಮುಖ ಕಿವುಚಬೇಡಿ. ಯಾಕೆಂದರೆ ಈ ಐಸ್‌ಕ್ರೀಂ ದೋಸೆಯನ್ನು ಇಷ್ಟಪಟ್ಟು ತಿನ್ನೋಕೆ ಅಂತಲೇ ಜನ ಕ್ಯೂನಲ್ಲಿ ನಿಲ್ಲುತ್ತಾರೆ. ಇಲ್ಲಿ ನಿಮಗೆ 3ಡಿ ಐಸ್ ಕ್ರೀಂ ದೋಸೆ ಕೂಡ ಸಿಗುತ್ತೆ. ಇದರ ಬೆಲೆ 130 ರೂಪಾಯಿ ಮಾತ್ರ. ಐಸ್ ಕ್ರೀಂ ಇಡ್ಲಿ ಬೆಲೆ 100 ರೂಪಾಯಿ. ಇನ್ನೂ ದೋಸೆ ಜೊತೆ ಎಲ್ರೂ ಚಟ್ನಿ, ಸಾಂಬಾರ್ ಕೊಡ್ತಾರೆ. ಆದರಿಲ್ಲಿ ವಟ್ನಿ ಬದಲು ಐಸ್ ಕ್ರೀಂ ಕೊಡ್ತಾರೆ.
ಈ ಡಿಫ್ರೆಂಟ್ ಐಸ್‌ಕ್ರೀಂ ದೋಸೆ ಎಲ್ಲಿ ಸಿಗುತ್ತೆ ಅಂದ್ರೆ ಅದು ನಮ್ಮ ಲಾಲ್‌ಬಾಗ್ ವೆಸ್ಟ್ ಗೆಟ್ ಹತ್ರ. ಹೌದು, ಅಮರ್‌ನಾಥ್ ಚಾಟ್ಸ್ ಮತ್ತು ಐಸ್ ಕ್ರೀಂ ಇಡ್ಲಿ ದೋಸಾ ಎಂಬ ಹೆಸರಿನ ಸಣ್ಣ ಕಾರ್ಟ್ ಹೋಟೆಲ್ ಇದೆ. ಇಲ್ಲೇ ನೋಡಿ ಸಿಗೋದು ಈ ಡಿಫ್ರೆಂಟ್ ಐಸ್ ಕ್ರೀಂ ದೋಸೆ, ಐಸ್ ಕ್ರೀಂ ಇಡ್ಲಿ.
ಕೆಲ ತಿಂಗಳಿನಿಂದ ಇಲ್ಲಿ ಈ ರೀತಿಯ ದೋಸೆಗಳನ್ನು ತಿನ್ನೋಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದಾರೆ. 547/2 ರಾಷ್ಟ್ರೀಯ ವಿದ್ಯಾಲಯ ರೋಡ್, 2ನೇ ಬ್ಲಾಕ್ ಜಯನಗರ ಈಸ್ಟ್, ಬೆಂಗಳೂರು 560004 ಈ ಹೋಟೆಲ್‌ನ ಎಕ್ಸ್ಯಾಕ್ಟ್ ಲೋಕೇಷನ್. ನೀವೇಲ್ಲಾ ಲಾವಾ ಕೇಕ್ ತಿಂದಿದ್ದೀರಾ. ಯಾವಾತ್ತಾದ್ರೂ ಲಾವಾ ಇಡ್ಲಿ ತಿಂದಿದ್ದೀರಾ? ತಿನ್ನಬೇಕು ಅಂದ್ರೆ ಇಲ್ಲಿಗೆ ನೀವು ಬರಲೇಬೇಕು.ಇಲ್ಲಿನ ಲಾವಾ ಇಡ್ಲಿ ನೋಡ್ತಾ ಇದ್ರೇನೆ ಬಾಯಲ್ಲಿ ನೀರು ಬರುತ್ತೆ.ಇಲ್ಲಿ ಬರೀ ಇಷ್ಟೇ ಅಲ್ಲ ಇದೆಲ್ಲಾ ಬಿಟ್ಟು ಬೇರೆ ಐಟಂ ಕೂಡ ಸಿಗುತ್ತೆ. ನಾರ್ಮಲ್ ದೋಸೆ, ನಾರ್ಮಲ್ ಇಡ್ಲಿ ಕೂಡ ಸಿಗುತ್ತೆ.












Click it and Unblock the Notifications