ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಸಖತ್ ಸ್ಮಾರ್ಟ್‌ಫೋನ್ ರಿಲೀಸ್ ಮಾಡಲಿದೆ Sony
ಈ ಕಂಪನಿಯ ಹೆಸರು ಕೇಳಿದರೆ ಸಾಕು ಈ ಕಂಪನಿಯು ಯಾವ ವಿಭಾಗದಲ್ಲಿ ಎಕ್ಸ್‌ಪರ್ಟ್ ಎಂಬುದು ತಿಳಿಯುತ್ತದೆ. ಮೊಬೈಲ್ ಫೋನ್‌ಗಳಿಗೆ ಕ್ಯಾಮೆರಾ ಸೆಂಸಾರ್ ರೆಡಿ ಮಾಡುವ ಸೋನಿ ಕಂಪನಿ ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಮತ್ತೊಂದು ಫೋನ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ.
ಪ್ರೀಮಿಯಂ ಸೆಗ್ಮೆಂಟ್ ಗ್ರಾಹಕರನ್ನು ಟಾರ್ಗೆಟ್ ಮಾಡಿ Sony Xperia 1 VI ಫೋನ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. Samsung Galaxy S24 ರೀತಿ ಹಿಂಬಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ವ್ಯವಸ್ಥೆಯನ್ನು ಈ ಫೋನ್ ಹೊಂದಿದ್ದು, ಉತ್ತಮ ಫೋಟೋಗಳನ್ನು ತೆಗೆಯಲು ಈ ಫೋನ್ ಬೆಸ್ಟ್ ಆಯ್ಕೆ ಎಂದು ಹೇಳಬಹುದು ಎಂದು ಹೇಳಲಾಗುತ್ತಿದೆ.

ಸೋನಿ ಎಕ್ಸ್‌ಪೀರಿಯಾ 1 VI ಆಗಿ ಬಿಡುಗಡೆ ಮಾಡಲಾದ ಈ ಫೋನ್ ಕ್ವಾಲ್‌ಕಾಮ್‌ನ ಪ್ರಮುಖ ಪ್ರೊಸೆಸರ್ ಅನ್ನು ಹೊಂದಿದೆ. ಇದಲ್ಲದೆ, ಇದು ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ. ಸೋನಿಯ ಈ ಪ್ರಮುಖ ಸ್ಮಾರ್ಟ್‌ಫೋನ್‌ನ 1.26 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಜಪಾನ್‌ನ ಪ್ರಮುಖ ಟೆಕ್ ಕಂಪನಿ ಸೋನಿಯ ಸ್ಮಾರ್ಟ್‌ಫೋನ್ ಸರಣಿ ಎಕ್ಸ್‌ಪೀರಿಯಾ ಸಾಕಷ್ಟು ಜನಪ್ರಿಯವಾಗಿದೆ. ಕಂಪನಿಯು ಶೀಘ್ರದಲ್ಲೇ ಎಕ್ಸ್‌ಪೀರಿಯಾ 1 VI ಅನ್ನು ಬಿಡುಗಡೆ ಮಾಡಲಿದೆ ಎಂಬುದು ಸುದ್ದಿ ಹೊರ ಬಿದ್ದಿದೆ. ಈಗಾಗಲೇ ಈ ಫೋನ್ ಮಾಹಿತಿಯು ಸೋರಿಕೆಯಾಗಿದ್ದು, ಎಕ್ಸ್‌ಪೀರಿಯಾ 1 VI ನ ವಿನ್ಯಾಸ ಮತ್ತು ಪ್ರಮುಖ ವಿಶೇಷಣಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. Xperia 1 VI ಬಿಡುಗಡೆ ಅಥವಾ ಅದರ ವಿಶೇಷಣಗಳ ಬಗ್ಗೆ ಸೋನಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಎಷ್ಟು ಮೆಗಾ ಪಿಕ್ಸಲ್ ಕ್ಯಾಮೆರಾ ಲಭ್ಯ?
Sony Xperia 1 VI 48MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಕ್ಯಾಮರಾ ಹೈಬ್ರಿಡ್ OIS ಮತ್ತು EIS ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆ ಇದೆ. ಇದಲ್ಲದೆ, ಈ ಫೋನ್ 12MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೋನಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12MP ಕ್ಯಾಮೆರಾವನ್ನು ಕಂಪನಿ ನೀಡುವ ಸಾಧ್ಯತೆ ಇದೆ.
Hone your adventures with #Xperia1VI!
— Sony | Xperia (@sonyxperia) May 15, 2024
From the 85-170mm optical telephoto lens to 120fps video recording and more, capture moments with uncompromising quality while expanding your entertainment horizons.#SonyXperia #ZoomIntoWonder #2DayBattery
ಡಿಸ್‌ಪ್ಲೇ ಹೇಗಿದೆ?
ಸೋನಿ ಎಕ್ಸ್‌ಪೀರಿಯಾ 1 VI 120Hz ರಿಫ್ರೆಶ್ ರೇಟ್ ಮತ್ತು 1.5x ಬ್ರೈಟ್‌ನೆಸ್‌ನೊಂದಿಗೆ ನವೀಕರಿಸಿದ OLED ಡಿಸ್ಪ್ಲೇಯನ್ನು ಹೊಂದಿರುತ್ತದೆ, 6.5 ಡಿಸ್‌ಪ್ಲೇಯೊಂದಿಗೆ ಗ್ರಾಹಕರನ್ನು ಸೆಳೆಯಲಿದೆ.
Xperia 1 VI ನಲ್ಲಿ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 ಜನರೇಷನ್ 3 ಪ್ರೊಸೆಸರ್ ಅನ್ನು ಒದಗಿಸುವ ಸಾಧ್ಯತೆ ಇದೆ. ಈ ಫೋನ್ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ. ಇದರ 512GB ಮಾದರಿಯನ್ನು ಜಪಾನ್ ಮತ್ತು ಪೂರ್ವ ಏಷ್ಯಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಇದರ ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಮೂಲಕ 1.5TB ವರೆಗೆ ವಿಸ್ತರಿಸಬಹುದು.
ಬ್ಯಾಟರಿ ಹೇಗಿದೆ?
ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 30 ವ್ಯಾಟ್ ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಸಂಪರ್ಕಕ್ಕಾಗಿ, ಇದು ಯುಎಸ್‌ಬಿ ಟೈಪ್ ಸಿ, 3.5 ಎಂಎಂ ಆಡಿಯೊ ಜ್ಯಾಕ್, ಎನ್‌ಎಫ್‌ಸಿ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸೋನಿ ಫೋನ್ ಆಂಡ್ರಾಯ್ಡ್ 14 ಬೆಂಬಲಿಸುತ್ತದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications