ಹೂಕೋಸಿನಲ್ಲಿ ಹಾವು: ತರಕಾರಿ ಖರೀದಿಸುವಾಗ ಎಚ್ಚರ ಎನ್ನುತ್ತೆ ಈ ವಿಡಿಯೋ...

ಮುಂಗಾರು ಸಮಯದಲ್ಲಿ ತರಕಾರಿಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಅವುಗಳನ್ನು ಖರೀದಿಸಬೇಡಿ. ಏಕೆಂದರೆ ಈ ಎಲೆಗಳ ಆಹಾರಗಳಲ್ಲಿ ಅನಪೇಕ್ಷಿತ ಅತಿಥಿಗಳು ಅಡಗಿಕೊಳ್ಳಬಹುದು. ಇಂತಹ ಘಟನೆಗಳಿಗೆ ಈ ವಿಡಿಯೋ ಸಾಕ್ಷಿಯಾಗಿದೆ.

ತರಕಾರಿ ಮಾರುಕಟ್ಟೆಯಿಂದ ಖರೀದಿಸಿದ ಹೂಕೋಸನ್ನು ಕಂಡು ಕುಟುಂಬವೊಂದು ಗಾಬರಿಯೊಂಡಿದೆ. ಹೂಕೋಸು ಬಿಡಿಸಲು ಪ್ರಯತ್ನಿಸಿದಾಗ ಅದರೊಳಗೆ ಒಂದು ಸಣ್ಣ ಹಾವು ಇರುವುದನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ.

Snake in Cauliflower: Be careful while buying vegetables - Video goes viral

ಹೂಕೋಸುವಿನಲ್ಲಿ ಸಣ್ಣದೊಂದು ಹಾವು ನುಸುಳುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ.

ಏನಿದು ವಿಡಿಯೋ?

ವಿಡಿಯೋ ಹೂಕೋಸು ಒಳಗೆ ಕ್ಯಾಮೆರಾವನ್ನು ಝೂಮ್ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಒಂದು ಸಣ್ಣ ಹಾವು ಒಳಗೆ ಇರುವುದು ಕ್ಯಾಮರಾ ಝೂಮ್ ಮಾಡಿದಾಗ ಕಂಡು ಬರುತ್ತದೆ. ಈ ಸಣ್ಣ ಹಾವನ್ನು ಸೆರೆಹಿಡಿಯುವ ಪ್ರಯತ್ನದಲ್ಲಿ ವ್ಯಕ್ತಿ ಹೂಕೋಸನ್ನು ತುಂಡಾಗಿಸಲು ಪ್ರಾರಂಭಿಸುತ್ತಾನೆ. ವ್ಯಕ್ತಿ ಹೂಕೋಸನ್ನು ತುಂಡಾಗಿಸುತ್ತಿದ್ದಂತೆ ಹಾವು ಹೂಕೋಸುವಿನ ಮತ್ತೊಂದು ಭಾಗಕ್ಕೆ ನುಸುಳುತ್ತದೆ.

ವೈರಲ್ ವೀಡಿಯೊವನ್ನು ಇಲ್ಲಿ ವೀಕ್ಷಿಸಿ

"ಇದು ಯಾವ ರೀತಿಯ ಹೂಕೋಸು?, ಕೋಬ್ರಾ ಹೂಕೋಸು ಅಥವಾ ವೈಪರ್ ಹೂಕೋಸು" ಎಂಬ ಶೀರ್ಷಿಕೆಯೊಂದಿಗೆ ದೇವೇಂದ್ರ ಸೈನಿ ಎಂಬ ಬಳಕೆದಾರರು ವೀಡಿಯೊವನ್ನು ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಹಂಚಿಕೊಂಡಿದ್ದಾರೆ.

X ನಲ್ಲಿ ಹಂಚಿಕೊಂಡಾಗಿನಿಂದ, ಕ್ಲಿಪ್ ನೆ್ಟ್ಟಿಗರನ್ನು ಭಯಭೀತಗೊಳಿಸಿದೆ. ಹಸಿರು ತರಕಾರಿಗಳನ್ನು ಖರೀದಿಸುವ ಮೊದಲು ಎಚ್ಚರಿಕೆಯಿಂದ ಪರಿಶೀಲಿಸುವ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದೆ. ಆದರೆ ಹೂಕೋಸಿನೊಳಗೆ ಹಾವು ಪತ್ತೆಯಾದ ಸ್ಥಳದ ವಿವರಗಳನ್ನು ದೇವೇಂದ್ರ ಉಲ್ಲೇಖಿಸಲಿಲ್ಲ.

ಈ ಹಿಂದೆ ಇಂಥದ್ದೇ ಘಟನೆ

ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಅಲ್ಡಿ ಅಂಗಡಿಯಿಂದ ಖರೀದಿಸಿದ ಬ್ರೊಕೊಲಿನಲ್ಲಿ ಜೀವಂತ ಹಾವನ್ನು ಕಂಡು 63 ವರ್ಷದ ವ್ಯಕ್ತಿ ಆಘಾತಕ್ಕೊಳಗಾಗಿದ್ದರು. ನೆವಿಲ್ಲೆ ಲಿಂಟನ್ ಊಟವನ್ನು ತಯಾರಿಸಲು ತನ್ನ ಫ್ರಿಜ್‌ನಿಂದ ತರಕಾರಿಯನ್ನು ತೆಗೆದುಕೊಂಡ ನಂತರ ಹಾವನ್ನು ಗುರುತಿಸಿದ್ದರು.

"ಇದು ಬಹಳ ಭಯಾನಕವಾಗಿತ್ತು. ಅದೃಷ್ಟವಶಾತ್ ನಾನು ಬ್ರೊಕೊಲಿಯನ್ನು ಅಡುಗೆಮನೆಯಲ್ಲಿ ಹಾಕಲಿಲ್ಲ"ಎಂದು ಲಿಂಟನ್ ಉಲ್ಲೇಖಿಸಿ ದಿ ಸ್ಕೈನ್ಯೂಸ್ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+