Snake: ಹಾವಿನ ಆಕಳಿಕೆಯನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿದೆ ವೀಕ್ಷಿಸಿ
ಸಾಮಾನ್ಯವಾಗಿ ಮನುಷ್ಯರು ಆಕಳಿಸುವುದನ್ನು ನೀವು ನೋಡಿರಬಹುದು. ಸಾಕು ಪ್ರಾಣಿಗಳಾದ ಬೆಕ್ಕು ಮತ್ತು ನಾಯಿ ಸೇರಿದಂತೆ ಇನ್ನಿತರ ಪ್ರಾಣಿಗಳು ಆಕಳಿಸುವುದನ್ನು ನೀವು ಕಂಡಿರಬಹುದು. ಆದರೆ ಎಂದಾದರೂ ಹಾವು ಆಕಲಿಸುವುದನ್ನು ನೀವು ನೋಡಿದ್ದೀರಾ? ನೋಡಿಲ್ಲ ಅಂತಾದರೆ ಈ ವಿಡಿಯೋವನ್ನು ನೋಡಿ.
ಹಾವು.... ಈ ಒಂದು ಶಬ್ದ ಕಿವಿಗೆ ಬಿದ್ದರೆ ನೂರು ಅಡಿ ದೂರ ನಿಲ್ಲುವವರೇ ಜಾಸ್ತಿ. ಯಾಕೆಂದರೆ ಭಯಾನಕ ಜೀವಿ ಹಾಗೂ ವಿಷಕಾರಿ ಸರೀಸೃಪಗಳಲ್ಲಿ ಹಾವು ಕೂಡ ಒಂದು. ಹಿಂದೂ ಸಂಪ್ರದಾಯಗಳಲ್ಲಿ ಹಾವನ್ನು ದೇವರೆಂದು ಪೂಜಿಸಲಾಗುತ್ತದೆ. ಹೀಗಾಗಿ ಹಾವಿನ ಸುತ್ತ ಅನೇಕ ಕಥೆಗಳು ಇವೆ. ಅವುಗಳ ಬಗ್ಗೆ ತಿಳಿದುಕೊಳ್ಳಲು ಇನ್ನಷ್ಟು ಕುತೂಹಲವನ್ನು ಹೊಂದಿರುವುದು ಸಹಜವಾಗಿದೆ.

ಹೀಗಾಗಿನೇ ಹಾವುಗಳ ವಿಶೇಷ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿರುತ್ತವೆ. ಹಾವಿನೊಂದಿಗೆ ಸ್ನೇಹದಿಂದ ವರ್ತಿಸುವುದು, ಮನೆಯಲ್ಲಿಟ್ಟುಕೊಂಡು ಸಾಕುವುದು ಇಂತೆಲ್ಲಾ ವಿಡಿಯೋಗಳು ನೀವು ನೋಡಿರುತ್ತೀರಿ. ಆದರೆ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಹಾವೊಂದು ಆಕಳಿಸಿದೆ.
"ನೀವು ಎಂದಾದರೂ ಹಾವು ಆಕಳಿಸುವುದನ್ನು ನೋಡಿದ್ದೀರಾ?" ಎಂಬ ಶೀರ್ಷಿಕೆಯೊಂದಿಗೆ ಟೆರಿಫೈಯಿಂಗ್ ನೇಚರ್ @TerrifyingNatur ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀಡಿಯೋವನ್ನು ಇಲ್ಲಿ ವೀಕ್ಷಿಸಿ:-
Have you ever seen a snake yawn? pic.twitter.com/zgbYJhtYVs
— Terrifying Nature (@TerrifyingNatur) May 2, 2023
ಹಾವುಗಳ ಬಗ್ಗೆ ನೀವು ತಿಳಿಯಬೇಕಾದದ್ದು ಇಲ್ಲಿದೆ-
ಹಾವುಗಳು ಕಣ್ಣಿಗೆ ಕಾಣಿಸುವುದಕ್ಕಿಂತ ಅಡಗಿರುವುದೇ ಹೆಚ್ಚು. ತಮಗೆ ಕೋಪ, ಭೀತಿ ಉಂಟಾದಾಗ ಮಾತ್ರ ಅವು ಆಕ್ರಮಣ ಮಾಡುತ್ತವೆ. ಇಲ್ಲವಾದರೆ ಅವು ಯಾರನ್ನೂ ಕಚ್ಚುವುದಿಲ್ಲ. ಅವು ಆಹಾರಕ್ಕಾಗಿ ಬೇಟೆಯಾಡಲು ಅಥವಾ ಅಗತ್ಯವಿದ್ದಾಗ ತಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರ ದಾಳಿ ಮಾಡುತ್ತವೆ. ಸಂಯೋಗದ ಅವಧಿಯನ್ನು ಹೊರತುಪಡಿಸಿ ಹಾವುಗಳು ಹೆಚ್ಚಾಗಿ ಒಂಟಿಯಾಗಿರುತ್ತವೆ.

ಜಗತ್ತಿನಲ್ಲಿ ಸುಮಾರು 3,000 ವಿವಿಧ ಜಾತಿಯ ಹಾವುಗಳಿವೆ. ಅವುಗಳಲ್ಲಿ ಸರಿಸುಮಾರು 600 ವಿಷಕಾರಿ, ಆದರೆ ಸುಮಾರು 200 ಮಾತ್ರ ಮಾನವರಿಗೆ ಗಮನಾರ್ಹವಾದ ಗಾಯವನ್ನು ಉಂಟುಮಾಡುವ ಅಥವಾ ಕೊಲ್ಲುವ ಸಾಮರ್ಥ್ಯವನ್ನು ಹೊಂದಿವೆ.
ಹಾವಿನ ವಿಷವು ತನ್ನ ಆಹಾರವನ್ನು ಬೇಟೆಯಾಡಲು ಸಹಾಯ ಮಾಡುತ್ತದೆ. ಮತ್ತು ಮಾಂಸವನ್ನು ನುಂಗಲು ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾವುಗಳು ತಮ್ಮ ನಾಲಿಗೆಯಿಂದ ವಾಸನೆ ಗ್ರಹಿಸಿ ಬೇಟೆಯನ್ನು ಹುಡುಕುತ್ತವೆ. ಅವು ಯಾವ ದಿಕ್ಕಿನಿಂದ ವಾಸನೆ ಬರುತ್ತಿದೆ ಎಂಬುದನ್ನು ಸಹ ತಿಳಿಯಬಲ್ಲವು.
ಉಷ್ಣತೆ ಇಲ್ಲದೆ, ಹಾವುಗಳು ತಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ಅಥವಾ ಚಲಿಸಲು ಸಾಕಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಹಾವುಗಳಿಗೆ ಉತ್ತಮ ದೃಷ್ಟಿ ಇರುವುದಿಲ್ಲ.












Click it and Unblock the Notifications