ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಸಲಾಡ್‌ನಲ್ಲಿ ಬದುಕಿತ್ತು ಬಸವನ ಹುಳ: ವಿಡಿಯೋ ವೈರಲ್!
ಬೆಂಗಳೂರು ಡಿಸೆಂಬರ್ 18: ಇತ್ತೀಚೆಗೆ ಆನ್‌ಲೈನ್ ಆಹಾರ ವಿತರಣೆ ಅತ್ಯಂತ ಪ್ರಸಿದ್ಧವಾಗಿದೆ. ಏನಾದ್ರು ತಿನ್ಬೇಕು ಅನಿಸಿದರೆ ಅರ್ಡರ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಆಹಾರ ಬಂದು ಬಿಡುತ್ತದೆ. ಈ ನಡುವೆ ಜನ ಸ್ವಿಗ್ಗಿಯಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಹೆಚ್ಚು. ಈ ಮಧ್ಯೆ ವೈರಲ್ ಆದ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಸಲಾಡ್‌ನಲ್ಲಿ ಬದುಕಿರುವ ಬಸವನ ಹುಳ ಕಂಡು ಬಂದಿದೆ.
ಇದನ್ನು ಕಂಡು ಆನ್‌ಲೈನ್ ಆಹಾರ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಸತ್ತ ಇಲಿ, ಕೋಳಿ ತಲೆ, ಉಗುರು, ಜಿರಳೆ ಕಂಡು ಬಂದಿರುವುದಿದೆ. ಆದರೀಗ ವೈರಲ್ ಆದ ವಿಡಿಯೋದಲ್ಲಿ ಬದುಕಿದ ಬಸವನ ಹುಳು ಕಂಡು ಬಂದಿದೆ.

ಇಂದಿನ ದಿನಗಳಲ್ಲಿ ಜನರು ತಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳಿಂದ ತಮ್ಮ ನೆಚ್ಚಿನ ಭಕ್ಷ್ಯಗಳನ್ನು ಆರ್ಡರ್ ಮಾಡುವುದು ತುಂಬಾ ಸುಲಭ ಮತ್ತು ಸಹಾಯಕವಾಗಿದೆ. ಈವರೆಗೆ ಗ್ರಾಹಕರು ತಪ್ಪು ಆದೇಶಗಳನ್ನು ಪಡೆದಿರುವ ಅಥವಾ ಅವರ ಆರ್ಡರ್‌ಗಳಲ್ಲಿ ಕೀಟಗಳು ಪತ್ತೆಯಾಗಿರುವುದು ಇದೇ ಮೊದಲಲ್ಲ.
ಹೌದು.. ಎರಡು ದೊಡ್ಡ ಆಹಾರ ವಿತರಣಾ ಅಪ್ಲಿಕೇಶನ್‌ಗಳಾದ Swiggy ಮತ್ತು Zomato ನಿಂದ ಬಂದ ಆಹಾರದಲ್ಲಿ ಗಂಭೀರ ದೋಷ ಕಂಡುಬಂದಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ವಿಗ್ಗಿಯಿಂದ ಆರ್ಡರ್ ಮಾಡಿದ ಸಲಾಡ್‌ನಲ್ಲಿ ಬದುಕಿದ ಬಸವನ ಹುಳು ಕಂಡು ಬಂದಿದೆ ಎಂದು ದೂರಿದ್ದಾರೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಜೊಮಾಟೊದಲ್ಲಿ ಆರ್ಡರ್ ಮಾಡಿದ ಫ್ರೈಡ್ ರೈಸ್‌ನಲ್ಲಿ ಸತ್ತ ಜಿರಳೆ ಕಂಡುಬಂದಿದೆ ಎಂದು ದೂರಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ.
ಬೆಂಗಳೂರಿನ ವ್ಯಕ್ತಿ ಆರ್ಡರ್ ಮಾಡಿದ ಸಲಾಡ್‌ನಲ್ಲಿ ಬದುಕಿದ ಬಸವನ ಹುಳು:
ಬೆಂಗಳೂರಿನ ವ್ಯಕ್ತಿಯೊಬ್ಬರು ಜೀವಂತ ಬಸವನ ಹುಳು ಇರುವ ಸಲಾಡ್ ಅನ್ನು ಪಡೆದುಕೊಂಡಿದ್ದಾರೆ ಎಂದು ಸ್ವಿಗ್ಗಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ವ್ಯಕ್ತಿ ಧವನ್ ಸಿಂಗ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ತಮ್ಮ ಸಲಾಡ್‌ನಲ್ಲಿ ಬಸವನ ಹುಳು ಇರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Never ordering from @LeonGrill ever again!@SwiggyCares do whatever you can to ensure this shit doesn't happen to others...
— Dhaval singh (@Dhavalsingh7) December 15, 2023
Blr folks take note
Ughhhhh pic.twitter.com/iz9aCsJiW9
ವೀಡಿಯೋದೊಂದಿಗೆ "ಸ್ವಿಗ್ಗಿ, ಇದು ಇತರರಿಗೆ ಆಗದಂತೆ ನೋಡಿಕೊಳ್ಳಿ... ಬೆಂಗಳೂರಿನ ಜನರೇ ಗಮನಿಸಿ" ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ವಿಗ್ಗಿ, "ಹಾಯ್ ಧವಲ್. ಇದು ನಿಜಕ್ಕೂ ಭಯಾನಕವಾಗಿದೆ. ದಯವಿಟ್ಟು ಆರ್ಡರ್ ಐಡಿಯೊಂದಿಗೆ ನಮಗೆ ಸಹಾಯ ಮಾಡಿ. ಇದರಿಂದ ನಾವು ಅದನ್ನು ಪರಿಶೀಲಿಸಬಹುದು'' ಎಂದಿದೆ.
ಬೆಂಗಳೂರಿನ ಮಹಿಳೆಗೆ ಫ್ರೈಡ್ ರೈಸ್‌ನಲ್ಲಿ ಸತ್ತ ಜಿರಳೆ ಪತ್ತೆ:
ಬೆಂಗಳೂರಿನಲ್ಲಿ ನಡೆದ ಮತ್ತೊಂದು ಇದೇ ರೀತಿಯ ಘಟನೆಯಲ್ಲಿ, ಮಹಿಳೆಯೊಬ್ಬರು ಡೆಲಿವರಿ ಆ್ಯಪ್ ಜೊಮಾಟೊ ಬಳಸಿ ಆರ್ಡರ್ ಮಾಡಿದ್ದ ಚಿಕನ್ ಫ್ರೈಡ್ ರೈಸ್‌ನಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ. ಅವರು ಈ ಬಗ್ಗೆ 'ಎಕ್ಸ್'ನಲ್ಲಿ ಬರೆದಿದ್ದಾರೆ. "ನಾನು ಜೊಮಾಟೊದಲ್ಲಿ ಚಿಕನ್ ಫ್ರೈಡ್ ರೈಸ್ ಅನ್ನು "ಟ್ಯಾಪ್ರಿ ಬೈ ದಿ ಕಾರ್ನರ್" ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದೆ. ನನ್ನ ಆಹಾರದಲ್ಲಿ ಜಿರಳೆ ಸಿಕ್ಕಿತು. ಇದು ನನಗೆ ಬೇಸರ ತಂದಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಅನೈರ್ಮಲ್ಯವಾಗಿದೆ. ತಕ್ಷಣದ ಪರಿಹಾರದ ಅಗತ್ಯವಿದೆ'' ಎಂದು ಬರೆದಿದ್ದಾರೆ.
@deepigoyal @jagograhakjago @zomato
— Harshitha (@Harshit99115881) December 12, 2023
I orderd chicken fried rice in zomato from restaurent "TAPRI BY THE CORNER". I got cockroach in my food.
Absolutely disgusted with my order! This is completely unacceptable and unhygienic. Need an immediate resolution. #Zomato #FoodSafety" pic.twitter.com/f0JEqpKNSJ
ಜೊಮಾಟೊ ಕ್ಷಮೆಯಾಚಿಸುತ್ತಾ, "ಇದು ನಿಜವಾಗಿಯೂ ಅನಿರೀಕ್ಷಿತ, ಹರ್ಷಿತಾ. ನೀವು ಹೇಗೆ ಭಾವಿಸುತ್ತೀರಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಖಾಸಗಿ ಸಂದೇಶದ ಮೂಲಕ ನಿಮ್ಮ ನೋಂದಾಯಿತ ಸಂಪರ್ಕ ಸಂಖ್ಯೆ/ಆರ್ಡರ್ ಐಡಿಯೊಂದಿಗೆ ದಯವಿಟ್ಟು ನಮಗೆ ಸಹಾಯ ಮಾಡಿ, ಇದರಿಂದ ನಾವು ಇದನ್ನು ತಕ್ಷಣ ಪರಿಶೀಲಿಸಬಹುದು'' ಎಂದಿದೆ. ಈ ಘಟನೆಗಳ ಬಗ್ಗೆ ನೆಟ್ಟಿಗರು ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.











Click it and Unblock the Notifications