Smartphone: ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ನೀಡಲಿದೆ ರಿಯಲ್‌ಮಿ P ಸರಣಿ; ಈ ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆ?

Realme ಭಾರತದಲ್ಲಿ ಬಿಡುಗಡೆ ಮಾಡಲಿರುವ ತನ್ನ ಹೊಸ ಸ್ಮಾರ್ಟ್‌ಫೋನ್ ಸರಣಿಯನ್ನು ಘೋಷಿಸಿದೆ. ರಿಯಲ್‌ಮಿ ಹೊಸ P ಸರಣಿಯು ಭಾರತದಲ್ಲಿ ಅಷ್ಟೇ ಬಿಡುಗಡೆ ಆಗಲಿವೆ. ಇದಕ್ಕಾಗಿ ಕಂಪನಿ ಬ್ರ್ಯಾಂಡ್ ಫ್ಲಿಪ್‌ ಕಾರ್ಟ್‌ನೊಂದಿಗೆ ಕೈ ಜೋಡಿಸಿದೆ. ಈ ಸ್ಮಾರ್ಟ್‌ ಫೋನ್‌ಗಳನ್ನು ಗ್ರಾಹಕ ಇ-ಕಾಮರ್ಸ್‌ ವೆಬ್‌ಸೈಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಪಡೆಯಬಹುದು.

ರಿಯಲ್‌ಮಿ ತನ್ನ ಹೊಸ ಫೋನ್‌ನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಕಂಪನಿಯ ಉಪಾಧ್ಯಕ್ಷ ಚೇಸ್ ಕ್ಸು ಅವರು ಘೋಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಮೊಬೈಲ್‌ ಭಾರತದಲ್ಲಿ 5ಜಿ ಯೊಂದಿಗೆ ಮಾತ್ರ ಬಿಡುಗಡೆ ಆಗಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಯಾವಾಗ ಗ್ರಾಹಕರ ಕೈ ಸೇರಲಿದೆ ಎಂಬ ಬಗ್ಗೆಯೂ ಕಂಪನಿಯು ಮಾಹಿತಿ ನೀಡಿದೆ.

Smartphone Realme P series to enter the market When will this smartphone be released

ರಿಯಲ್‌ಮಿ ಪ್ರಸ್ತುತ ಭಾರತದಲ್ಲಿ C ಸರಣಿ, ನಾರ್ಜೋ ಸರಣಿ, Number ಸರಣಿ ಮತ್ತು GT ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ರಿಯಲ್‌ಮಿ C ಸರಣಿಯ ಸ್ಮಾರ್ಟ್‌ಫೋನ್‌ಗಳು ಅಲ್ಟ್ರಾ ಬಜೆಟ್ ವಿಭಾಗದಲ್ಲಿ ಬರುತ್ತವೆ. ನಾರ್ಜೊ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಿಡ್‌ ರೆಂಜ್‌ ಮತ್ತು ಬಜೆಟ್ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ Number ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ವಿಶೇಷವಾಗಿ ಮಧ್ಯ ಶ್ರೇಣಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ತನ್ನ ವಿಭಿನ್ನ ಹಾಗೂ ವಿಶಿಷ್ಠ ಸ್ಮಾರ್ಟ್‌ಫೋನ್‌ಗಳಿಂದಲೇ ಗ್ರಾಹಕರನ್ನು ಸೆಳೆದಿರುವ ರಿಯಲ್‌ಮಿ ಭಾರತದಲ್ಲಿ ತನ್ನ ಬೇರುಗಳನ್ನು ಬಿಟ್ಟಿದೆ. ತಂತ್ರಜ್ಞಾನ ಬದಲಾದಂತೆ ಕಂಪನಿ ಹೊಸ ಹೊಸ ಅಪ್‌ಡೇಟ್‌ ಹಾಗೂ ಹೊಸ ವಿನ್ಯಾಸದೊಂದಿಗೆ ಗ್ರಾಹಕರ ಮುಂದೆ ಬಂದಿದೆ. ಈಗ ರಿಯಲ್‌ಮಿ ಮತ್ತೊಂದು ಸರಣಿಯ ಫೋನ್‌ ಭಾರತದಲ್ಲಿ ಇದೇ ತಿಂಗಳು ರಿಲೀಸ್‌ ಆಗಲಿದೆ.

ಹೊಸ ಫೋನ್‌ ಯಾವಾಗ ಬಿಡುಗಡೆ?

ರಿಯಲ್‌ಮಿ ಈ ಹಿಂದೆ ಸಹ ನೋಟ್ ಸರಣಿಯನ್ನು ಘೋಷಿಸಿತ್ತು. ಈ ಸರಣಿಯ ಅಡಿಯಲ್ಲಿ ರಿಯಲ್‌ಮಿ ನೋಟ್‌ 50 ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿತ್ತು. ಅದೇ ರೀತಿ ಈ ನೂತನ ಫೋನ್‌ ಟೀಸರ್ ವೀಡಿಯೊದಲ್ಲಿ ಶಕ್ತಿಯುತ ಸ್ಮಾರ್ಟ್‌ ಫೋನ್‌ ಹಾಗೂ ಭಾರತದಲ್ಲಿ ಮಾತ್ರ ಬಿಡುಗಡೆ ಆಗಲಿದೆ ಎಂದು ಘೋಷಿಸಿದೆ.

ರಿಯಲ್‌ ಮಿ 'ಪಿ' ಸರಣಿಯ ಮೊದಲ ಸ್ಮಾರ್ಟ್‌ಫೋನ್ ಈ ತಿಂಗಳು ಏಪ್ರಿಲ್ 15 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಕಂಪನಿ ತನ್ನ ವೆಬ್‌ ಸೈಟ್‌ನಲ್ಲಿ ಕೆಲವು ಮಾಹಿತಿಯನ್ನು ಸಹ ಹಂಚಿಕೊಂಡಿದೆ. ಈ ಫೋನ್‌ ಮಾಹಿತಿ ಕೆಲವು ದಿನಗಳ ಹಿಂದೆ ಅಷ್ಟೇ ಸೋರಿಕೆ ಆಗಿತ್ತು.

ಹೊಸ ಫೋನ್‌ ಬೆಲೆ ಎಷ್ಟು?

ರಿಯಲ್‌ಮಿ ಪಿ ಸರಣಿಯ ಮೊದಲ ಸ್ಮಾರ್ಟ್‌ಫೋನ್ ಅನ್ನು 15,000 ರಿಂದ 25,000 ರೂಪಾಯಿಗಳ ನಡುವೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ಈ ಸರಣಿಯ ಮೊದಲ ಸ್ಮಾರ್ಟ್‌ಫೋನ್ ಬಗ್ಗೆ ಬ್ರ್ಯಾಂಡ್ ಯಾವುದೇ ಮಾಹಿತಿಯನ್ನು ನೀಡಿಲ್ಲ.

ರಿಯಲ್‌ಮಿ ನ ಈ ಸ್ಮಾರ್ಟ್‌ಫೋನ್ ಕರ್ವ್ ಅಮ್ಲೋಡ್‌ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಅನ್ನು ಹೊಂದಿರುತ್ತದೆ. ಇದನ್ನು ನಾರ್ಜೊ 60 ಪ್ರೊ ಮತ್ತು ನಾರ್ಜೊ 70 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗಿದೆ. ಇದಲ್ಲದೆ, ರಿಯಲ್‌ಮಿ ಹೊಸ ಫೋನ್ 5,000mAh ಬ್ಯಾಟರಿಯೊಂದಿಗೆ 45W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿರಲಿದೆ. ಫೋನ್ 8GB RAM ಮತ್ತು 256GB ವರೆಗೆ ಇಂಟರ್ನಲ್‌ ಸ್ಟೋರೇಜ್‌ ಹೊಂದಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+