Smartphone: 6000mAh ಬ್ಯಾಟರಿ ಹಾಗೂ ಪ್ರೊಸೆಸರ್‌ನಿಂದಲೇ ಸದ್ದು ಮಾಡುತ್ತಿದೆ ಮೊಟೊ ಮೊಬೈಲ್; ರಿಲೀಸ್ ಯಾವಾಗ?
ಈಗಾಗಗಲೇ ಮಾರುಕಟ್ಟೆಯಲ್ಲಿ ಇರುವ ಸ್ಮಾರ್ಟ್‌ಫೋನ್‌ಗಳ ಹವಾಳಿ ಹೆಚ್ಚಾಗಿದೆ. ಅಲ್ಲದೆ ಕಂಪನಿಗಳು ತಮ್ಮ ಹೊಸ ಪ್ರಡಕ್ಟ್‌ನ್ನು ಬಿಡುಗಡೆ ಮಾಡುತ್ತಲ್ಲೇ ಇರುತ್ತವೆ. ಇತ್ತೀಚಿಗೆ ತನ್ನ ಮೊಟೊರೊಲಾ ಎಡ್ಜ್ 50 ಪ್ಲಸ್ ಮೊಬೈಲ್ ಬಿಡುಗಡೆ ಮಾಡಿದ್ದ ಕಂಪನಿ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ರಿಲೀಸ್ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಧೂಳೆಬಿಸಲ್ಲಿದೆ.
ಬೇರೆ ಕಂಪನಿಗಳ ಮೊಬೈಲ್‌ಗಳ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಮೊಬೈಲ್ ಅಪ್‌ಡೇಟ್ ಮಾಡುತ್ತಲ್ಲೇ ಇರುತ್ತವೆ. ಈಗ ಮೊಟೊರೊಲಾ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿದೆ. ಇಷ್ಟೇ ಅಲ್ಲದೆ ಮೊಟೊರೊಲಾ ಕಂಪನಿ ಮುಂಬರುವ ತನ್ನ ಮೊಬೈಲ್ ವಿಶೇಷಗಳನ್ನು ಸಹ ಬಹಿರಂಗ ಪಡಿಸಿದೆ.

ಮೊಟೊರೊಲಾ ಇಂಡಿಯಾದ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7025 5 ಜಿ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾದ ವಿಶ್ವದ ಮೊದಲ ಫೋನ್ ಎಂಬ ಹೆಗ್ಗಳಿಕೆಯನ್ನು ಹೊಂದಲಿದೆ. ಅಲ್ಲದೆ ಶಕ್ತಿಶಾಲಿ 6000 ಎಂಎಎಚ್ ಬ್ಯಾಟರಿ ಹೊಂದಿರುವುದಾಗಿ ಕಂಪನಿ ತಿಳಿಸಿದೆ. ಮೊಟೊರೊಲಾ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ Moto G64 5G ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ.
ಮೊಟೊರೊಲಾ ಬಜೆಟ್ ಸ್ಮಾರ್ಟ್‌ಫೋನ್ ಭಾರತದಲ್ಲಿ 16 ಏಪ್ರಿಲ್ 2024 ರಂದು ಬಿಡುಗಡೆ ಮಾಡಲಿದೆ. ಫೋನ್ 12GB RAM + 256GB ಇಂಟರ್ನಲ್ ಸ್ಟೋರೆಜ್ ಹೊಂದಿದ್ದು, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ.
ವೈಶಿಷ್ಟ್ಯಗಳು ಏನು?
ಫೋನ್ 6.5 ಇಂಚಿನ LCD ಡಿಸ್ಪ್ಲೇ ಪ್ಯಾನೆಲ್ ಹೊಂದಿರಲಿದೆ. ಫೋನ್‌ನ ಡಿಸ್‌ಪ್ಲೇ ಪೂರ್ಣ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ, ಇದು 120Hz ರಿಫ್ರೆಶ್ ರೇಟ್ ಹೊಂದಿರಲಿದೆ. ಫೋನ್‌ನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಈ ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 13MP ಕ್ಯಾಮೆರಾವನ್ನು ಹೊಂದಿರುತ್ತದೆ.

Moto G54 5G ಫೋನ್ 6000mAh ಬ್ಯಾಟರಿಯೊಂದಿಗೆ ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಈ ಫೋನ್‌ನ ಡಿಸ್‌ಪ್ಲೇಯನ್ನು ರಕ್ಷಿಸಲು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು IP52 ರೇಟಿಂಗ್ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ, ಫೋನ್‌ನಲ್ಲಿ ಡಾಲ್ಬಿ ವ್ಯವಸ್ಥೆಯನ್ನು ಸಹ ನೀಡಲಾಗಿದೆ.
Moto G64 5G ಅನ್ನು ಮೂರು ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುವ ಸಾಧ್ಯತೆ ಇದೆ. ನೀಲಿ, ಹಸಿರು ಮತ್ತು ನೇರಳೆ ಸ್ಮಾರ್ಟ್‌ಫೋನ್ ಲಭ್ಯವಾಗುವ ಸಂಭವವಿದೆ. ಫೋನ್‌ನ ವಿನ್ಯಾಸವು ಅದರ ಹಿಂದಿನ ಮಾದರಿಯ Moto G54 5G ಅನ್ನು ಹೋಲುತ್ತದೆ. ಇದು ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ, ಇದು LED ಫ್ಲ್ಯಾಷ್ ಘಟಕದೊಂದಿಗೆ ಎರಡು ಕ್ಯಾಮೆರಾವನ್ನು ಹೊಂದಿದೆ. ಸ್ಪ್ಲಿಟ್ ವಾಲ್ಯೂಮ್ ಕೀಗಳು ಮತ್ತು ಪವರ್ ಬಟನ್ ಅನ್ನು ಹ್ಯಾಂಡ್‌ಸೆಟ್‌ನ ಬಲ ಅಂಚಿನಲ್ಲಿ ಇರಿಸಲಾಗಿದೆ.

ಈಗಾಗಲೇ ಈ ಕಂಪನಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿವೆ. ಈ ಸಾಲಿಗೆ ಇನ್ನೊಂದು ಫೋನ್ ಲಾಂಚ್ ಆಗಲು ತಯಾರಿ ನಡೆಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊರೊಲಾದ ಮೊಟೊ ಎಡ್ಜ್ 50 ಹಾಗೂ ಮೊಟೊ ಎಡ್ಜ್ 40ಗಳು ಗ್ರಾಕರನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿವೆ. ಈಗ ಈ ಸರಣಿಗೆ ಮತ್ತೊಂದು ಫೋನ್ ಸೇರ್ಪಡೆ ಆಗುವ ಸಾಧ್ಯತೆ ಇದೆ.












Click it and Unblock the Notifications