ಮದುವೆ ಮನೆಯಲ್ಲಿ ನೋಟಿನ ಸುರಿಮಳೆ: ಹಣ ಆರಿಸಿಕೊಳ್ಳಲು ಮುಗಿಬಿದ್ದ ಜನ- ವಿಡಿಯೋ

ಮದುವೆ ಮನೆಯಲ್ಲಿ ಹಣದ ಸುರಿಮಳೆಗೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅದ್ಧೂರಿ ಮದುವೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಮದುವೆಗೆ ಬರುವ ಅತಿಥಿಗಳು ಕಣ್ತುಂಬಿಕೊಂಡು ವಾವ್ಹಾ... ಎಂಥ ಮದುವೆ ಇದು ಅಂದರೆ ಸಾಕು. ವಧು-ವರನ ಕುಟುಂಬಸ್ಥರು ಸಂತೃಪ್ತರಾಗಿಬಿಡುತ್ತಾರೆ. ಇತ್ತೀಚೆಗಷ್ಟೇ ಇಂತಹ ಅದ್ಧೂರಿ ಮದುವೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ಆದ ಮದುವೆ ಕಾರ್ಯಕ್ರಮವೊಂದರ ವಿಡಿಯೋ ನೋಡುಗರಿಗೆ ಅಚ್ಚರಿ ಮೂಡಿಸಿದೆ.

ಈ ಮದುವೆಯ ಸಂದರ್ಭದಲ್ಲಿ ಹಣದ ಸುರಿಮಳೆಗೈದಿರುವುದು ಕಂಡುಬಂದಿದೆ. ಆ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕೆಕ್ರಿ ತಹಸಿಲ್‌ನ ಅಗೋಲ್ ಗ್ರಾಮದಲ್ಲಿ ನಡೆದ ವಿವಾಹ ಕಾರ್ಯಕ್ರಮದ ವೇಳೆ ಮಾಜಿ ಸರಪಂಚರೊಬ್ಬರು ತಮ್ಮ ಮನೆಯ ಮೇಲಿಂದ ಹಣ ಸುರಿಸಿರುವ ವಿಡಿಯೋ ವೈರಲ್ ಆಗಿದೆ.

ವರದಿಗಳ ಪ್ರಕಾರ, ಮಾಜಿ ಸರಪಂಚ್ ಆಗೋಲ್ ಸರಪಂಚ್ ಕರೀಂ ಯಾದವ್ ಅವರು ತಮ್ಮ ಸೋದರಳಿಯ ರಜಾಕ್ ಅವರ ಮದುವೆಯ ಸಂಭ್ರಮಾಚರಣೆಯ ಭಾಗವಾಗಿ ಹಣದ ಸುರಿಮಳೆಗೈದರು. ಯಾದವ್ ಮತ್ತು ಅವರ ಕೆಲವು ಕುಟುಂಬ ಸದಸ್ಯರು ನೋಟುಗಳನ್ನು ಸುರಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

Shower of money in the marriage house: video

ನಗದನ್ನು ಸಂಗ್ರಹಿಸಲು ಮನೆಯ ಮುಂದೆ ಭಾರೀ ಜನಸಮೂಹವೇ ಜಮಾಯಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅವರು 100 ಮತ್ತು 500 ರೂಪಾಯಿ ನೋಟುಗಳನ್ನು ಸುರಿದಿದ್ದಾರೆ ಎಂದು ವರದಿಯಾಗಿದೆ.

Shower of money in the marriage house: video

ವೈರಲ್ ವಿಡಿಯೊವನ್ನು ಇಲ್ಲಿ ನೋಡಬಹುದು:

ರಜಾಕ್ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿದ್ದಾಗ ಮಾಜಿ ಸರಪಂಚ್ ಮತ್ತು ಅವರ ಕುಟುಂಬ ಸದಸ್ಯರು ಮಾಳಿಗೆಗೆ ಹೋಗಿ ಆಚರಣೆಗಳನ್ನು ವೀಕ್ಷಿಸಲು ನೆರೆದಿದ್ದ ಜನರ ಮೇಲೆ ಹಣದ ಸುರಿಮಳೆಗೈದರು. ಜನರು ತಮ್ಮ ಮೇಲೆ ಬೀಳುವ ನೋಟುಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಿಡಿಯೋ ಹಿನ್ನೆಲೆಯಲ್ಲಿ ಜೋಧಾ ಅಕ್ಬರ್‌ನ ಬಾಲಿವುಡ್ ಹಾಡು 'ಅಜೀಮ್-ಒ-ಶಾನ್ ಶೆಹೆನ್‌ಶಾ' ಹಾಡು ಪ್ಲೇ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+