ಶಾರ್ಕ್ ಜೊತೆ ಸರಸ: ಮುಂದೇನಾಯ್ತು ನೋಡಿ ಭಯಾನಕ ವಿಡಿಯೋ....

ಶಾರ್ಕ್‌ವೊಂದು ವ್ಯಕ್ತಿಯ ಕೈ ಕಚ್ಚುವ ಹಾಗೂ ಆತನನ್ನು ನೀರಿನೊಳಗೆ ಎಳೆಯುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರೊಳಗಿನ ಪ್ರಪಂಚವು ನಿಜವಾಗಿಯೂ ತುಂಬಾ ನಿಗೂಢವಾಗಿದೆ. ಕೆಲವೊಮ್ಮೆ ಬೃಹತ್ ಜೀವಿಗಳು ನೀರಿನಿಂದ ಮೇಲೆ ಬಂದು ಮಾನವರ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲದೆ ಅವು ಏಕಾಏಕಿ ದಾಳಿ ಮಾಡಲು ಹಿಂಜರಿಯುವುದಿಲ್ಲ. ಅಂತಹ ಒಂದು ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ದೋಣಿಯಲ್ಲಿ ನಿಂತ ವ್ಯಕ್ತಿ ನೀರಿನಲ್ಲಿ ಕೈ ತೊಳೆಯುತ್ತಾನೆ. ಮತ್ತೆ ನೀರಿನಲ್ಲಿ ಕೈ ಇಡುತ್ತಾನೆ. ಈ ವೇಳೆ ಏಕಾಏಕಿ ಶಾರ್ಕ್ ಆತನ ಕೈ ಕಚ್ಚುತ್ತದೆ. ಕಚ್ಚುವುದು ಮಾತ್ರವಲ್ಲದೆ ಆತನನ್ನು ನೀರಿನೊಳಗೆ ಎಳೆಯುತ್ತದೆ. ಗಾಬರಿಗೊಂಡ ವ್ಯಕ್ತಿ ತಕ್ಷಣ ದೋಣಿಯೊಳಗೆ ಆಗಮಿಸುತ್ತಾನೆ. ಈ ದೃಶ್ಯವನ್ನು ದೋಣಿಯೊಳಗೆ ಇದ್ದ ಮತ್ತೊಬ್ಬ ವ್ಯಕ್ತಿ ಸೆರೆ ಹಿಡಿದಿದ್ದಾನೆ.

Shark Bites Hand

ಶಾರ್ಕ್ ತನ್ನ ಸ್ನೇಹಿತನನ್ನು ನೀರಿನೊಳಗೆ ಎಳೆಯುತ್ತಿದ್ದಂತೆ ವಿಡಿಯೋ ಮಾಡುವ ವ್ಯಕ್ತಿ ತನ್ನ ಸ್ನೇಹಿತನನ್ನು ಮೇಲಕ್ಕೆ ಬರುವಂತೆ ಕರೆಯುತ್ತಾನೆ. ಆತ ಮೇಲಕ್ಕೆ ಬರುತ್ತಿದ್ದಂತೆ ಶಾರ್ಕ್ ಕಣ್ಮರೆಯಾಗಿದೆ. ಈ ಶಾರ್ಕ್ ಆಸ್ಟ್ರೇಲಿಯಾದ ಆಳ ಸಮುದ್ರದಲ್ಲಿ ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

"ಇಂದು ನನಗೆ ಅತ್ಯಂತ ಭಯಾನಕ ದಿನಗಳಲ್ಲಿ ಒಂದಾಗಿದೆ. ನೀರಿನ ಮೇಲೆ ನಮ್ಮ ಪ್ರಯಾಣ ಉತ್ತಮವಾಗಿ ಪ್ರಾರಂಭವಾಯಿತು. ನಾವು ಮೀನುಗಳನ್ನು ಹಿಡಿಯುತ್ತಿದ್ದೆವು. ಆದರೆ ಶಾರ್ಕ್‌ವೊಂದು ನಾವು ಹಿಡಿದ ಮೀನುಗಳನ್ನು ತಿನ್ನುತ್ತಿತ್ತು. ಎಲಾರ್ಜನ್ ನೀರಿನಲ್ಲಿ ತನ್ನ ಕೈಗಳನ್ನು ತೊಳೆದನು. ತಕ್ಷಣವೇ ಬುಲ್ ಶಾರ್ಕ್ ಆತನ ಕೈ ಕಚ್ಚಿತು. ತಕ್ಷಣ ಆತನ ಆತನನ್ನು ನೀರಿನೊಳಗೆ ಎಳೆಯಿತು. ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೊಂದು ಭಯಾನಕ ಅನುಭವ'' ಎಂದು ವಿಡಿಯೋದೊಂದಿಗೆ ಬರೆಯಲಾಗಿದೆ.

ಶಾರ್ಕ್‌ ಎಷ್ಟು ಭಯಾನಕವಾಗಿವೆ ಎನ್ನುವುದನ್ನು ತೋರಿಸುವ ಸಿನಿಮಾಗಳು ಸಾಕಷ್ಟು ಇವೆ. ಈ ಸಿನಿಮಾಗಳ ಮೂಲಕ ಶಾರ್ಕ್ ಆಕ್ರಮಣಕಾರಿ ದಾಳಿಯ ಬಗ್ಗೆ ಕಲ್ಪನೆ ಮಾಡಿಕೊಳ್ಳಬಹುದು. ಆದರೆ ಇಂದಿಗೂ ಈ ಶಾರ್ಕ್‌ಗಳ ದಾಳಿಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.

ವನ್ಯಜೀವಿಗಳು ಮತ್ತು ಸಮುದ್ರ ಜೀವಿಗಳ ಹಕ್ಕನ್ನು ನಾವು ಗೌರವಿಸುವ ಸಮಯ ಮತ್ತು ಈ ಗ್ರಹವು ಮನುಷ್ಯರಿಗೆ ಮಾತ್ರವಲ್ಲದೆ ಪ್ರತಿಯೊಂದು ಜೀವಿಗಳಿಗೂ ಸೇರಿದೆ ಎಂದು ಒಪ್ಪಿಕೊಳ್ಳಬೇಕು.

ಇತ್ತೀಚೆಗೆ ಇಂತಹದ್ದೇ ಘಟನೆ

ಇತ್ತೀಚೆಗೆ ಈಜಿಪ್ಟ್ ನ ಪ್ರಸಿದ್ಧ ರೆಸಾರ್ಟ್ ನಲ್ಲಿ ಅತ್ಯಂತ ನೋವಿನ ಘಟನೆಯೊಂದು ಬೆಳಕಿಗೆ ಬಂದಿತ್ತು. 23 ವರ್ಷದ ರಷ್ಯಾದ ಪ್ರವಾಸಿಗನನ್ನು ತನ್ನ ತಂದೆಯ ಮುಂದೆ ಈಜಿಪ್ಟ್ ನ ರೆಡ್ ಬೀಚ್ ರೆಸಾರ್ಟ್‌ನಲ್ಲಿ ಶಾರ್ಕ್ ವೊಂದು ಕೊಂದು ತಿಂದಿತ್ತು. ವೈರಲ್ ವೀಡಿಯೋದಲ್ಲಿನ ಭಯಾನಕ ದೃಶ್ಯವನ್ನು ನೋಡಿದ ಪ್ರವಾಸಿಗರು ಬೆಚ್ಚಿಬಿದ್ದಿದ್ದರು.

ಈ ದೃಶ್ಯ ಜನರಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ. ಮಗನನ್ನು ರಕ್ಷಿಸುವಂತೆ ತಂದೆ ಜೋರಾಗಿ ಕೂಗುತ್ತಿರುವುದು ವಿಡಿಯೋದಲ್ಲಿ ಕೇಳಿ ಬಂದಿದೆ. ಆದರೆ ಕ್ಷಣಾರ್ದದಲ್ಲಿ ಶಾರ್ಕ್ ಆತನನ್ನು ತನ್ನ ತುತ್ತಾಗಿ ಮಾಡಿಕೊಂಡಿದೆ. ಶಾರ್ಕ್ ಅವನನ್ನು ಪದೇ ಪದೇ ನೀರಿಗೆ ಎಸೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆತ ಈಜಲು ಪ್ರಾರಂಭಿಸಿದಾಗ ಆತನನ್ನು ಶಾರ್ಕ್ ತನ್ನ ಕಡೆಗೆ ಎಳೆಯುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಹೀಗೆ ದೃಶ್ಯದಲ್ಲಿ ಸ್ವಲ್ಪ ಸಮಯದಲ್ಲೇ ಶಾರ್ಕ್ ಆತನ ಮೇಲೆ ದಾಳಿ ಮಾಡಿದೆ. ಅದರ ನಂತರ ಶಾರ್ಕ್ ಅವನನ್ನು ಕೊಂದು ತಿಂದು ಕಾಲ್ಕಿತ್ತಿದೆ.

23 ವರ್ಷದ ವ್ಲಾದಿಮಿರ್ ಪೊಪೊವ್ ಕಳೆದ ತಿಂಗಳು ಈಜಲು ಹೋಗಿದ್ದರು. ಆಗ ಹುಲಿ ಶಾರ್ಕ್ ಅವನನ್ನು ನೀರಿನಲ್ಲಿ ಕೊಂದಿದೆ. ಅಷ್ಟರಲ್ಲಿ ಆತನ ಗೆಳತಿಯ ಪ್ರಾಣ ಉಳಿಸಲಾಗಿದೆ. ಆಕೆ ಪ್ರಾಣಾಪಾಯದಿಂದ ಪರಾರಿಯಾಗಿದ್ದಾಳೆ. ಪೊಪೊವ್ ಅವರ ತಂದೆ ಈ ಭೀಕರ ದಾಳಿಯನ್ನು ಬಹಳ ಹತ್ತಿರದಿಂದ ವೀಕ್ಷಿಸಿದ್ದಾರೆ. ಶಾರ್ಕ್ ಅವನನ್ನು ಹಿಡಿದಾಗ, ಅವರು ಕಿರುಚುತ್ತಾ ಅಳುತ್ತಾರೆ. ಆದರೆ ತಂದೆ ಕಣ್ಣ ಮುಂದೆ ಮಗನ ಪ್ರಾಣ ಹೋಗುತ್ತಿದ್ದರೂ ಕಾಪಾಡಲು ಸಾಧ್ಯವಾಗಲಿಲ್ಲ. ಮಗ ಸಾಯುತ್ತಿರುವುದನ್ನು ಕಂಡು ತಂದೆ ಕುಸಿದುಬಿದ್ದಿದ್ದಾರೆ. ಸ್ವಲ್ಪ ಸಮಯದಲ್ಲೇ ಸಮುದ್ರದ ನೀರಿನ ಬಣ್ಣ ಕೆಂಪಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+