ಮಾಲ್ಗುಡಿ ಡೇಸ್ ಕನ್ನಡದಲ್ಲೇ ಲಭ್ಯ, ಅಮೆಜಾನ್ ನಲ್ಲಿ ನೋಡಿ ಆನಂದಿಸಿ
ಕಳೆದ ಹತ್ತು ವರುಷಗಳಿಂದ ಬನವಾಸಿ ಬಳಗ, ಕನ್ನಡ ಗ್ರಾಹಕ ಕೂಟ ಹಾಗೂ ಇನ್ನಿತರ ಕನ್ನಡಪರ ಮನಸ್ಸುಗಳ ಅವಿರತವಾದ ಕಾನೂನು ಹೋರಾಟ, ಚಿತ್ರರಂಗದ ಮೇಲೆ ಒತ್ತಡ, ಸಮೂಹ ಮಾಧ್ಯಮಗಳ ಮುಖೇನ ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಫಲ ಸಿಕ್ಕಿದೆ.
ಒಂದೆಡೆ ಅಜಿತ್ , ರಾಮ್ ಚರಣ್, ಪ್ರಭಾಸ್ ಅಭಿನಯದ ಚಿತ್ರಗಳು ಡಬ್ ಆಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದರೆ ಇನ್ನೊಂದೆಡೆ ಟಿವಿ ಹಾಗೂ ವಿಡಿಯೋ ಅಪ್ಲಿಕೇಷನ್ ಗಳಲ್ಲೂ ಕನ್ನಡಕ್ಕೆ ಡಬ್ ಆದ ಸಿನಿಮಾ, ಟಿವಿ ಸರಣಿ, ಧಾರಾವಾಹಿಗಳು ಹೆಚ್ಚಾಗುತ್ತಿವೆ. ಡಿಸ್ಕವರಿ ವಾಹಿನಿ ಕನ್ನಡ ಆಡಿಯೋ ಫೀಡ್ ಲಭ್ಯವಾದ ಬಳಿಕ, ಬಹುಕಾಲದ ಬೇಡಿಕೆಯಾದ ಕನ್ನಡಲ್ಲಿ ಮಾಲ್ಗುಡಿ ಡೇಸ್ ನೋಡುವ ಕನಸು ಇದೀಗ ನನಸಾಗಿದೆ.
ನಟ, ನಿರ್ದೇಶಕ ಶಂಕರ್ ನಾಗ್ ನಿರ್ದೇಶನದ ಆರ್ ಕೆ ನಾರಾಯಣ್ ಅವರ ಮಹೋನ್ನತ ಕೃತಿಯನ್ನು ಕನ್ನಡದಲ್ಲಿ ಇಂದಿನ ಪೀಳಿಗೆ ತಮ್ಮ ಭಾಷೆಯಲ್ಲೇ ನೋಡಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಭಾರತದ ಟಿವಿ ವಾಹಿನಿಯಲ್ಲಿ ಬಂದ ಅತೀ ಯಶಸ್ಸಿನ ಟೆಲಿಸರಣಿಗಳಲ್ಲಿ ಮಾಲ್ಗುಡಿ ಡೇಸ್ ಮುಂಚೂಣಿಯಲ್ಲಿ ಬರುತ್ತದೆ. ಅದೇ ಕಾರಣಕ್ಕಾಗಿ ಭಾರತದ 6 ಸೇರಿದಂತೆ ಪ್ರಪಂಚದ ಇತರ 5ಕ್ಕೂ ಭಾಷೆಗಳಲ್ಲಿ ಡಬ್ ಆಗಿ ಮಕ್ಕಳಿಗೆ ಖುಷಿಕೊಡುವ, ದೊಡ್ಡವರಿಗೆ ನೀತಿಭೋಧನೆಯ ಪಾಠ ಎನಿಸುವ, 25 ನಿಮಿಷದ ಚಿಕ್ಕ-ಚೊಕ್ಕ ಕತೆಗಳಾಗಿ ಎಲ್ಲ ಕಾಲಕ್ಕೂ ಸೈ ಎನಿಸಿಕೊಂಡಿದೆ.

ಆರ್.ಕೆ. ನಾರಾಯಣ್ ಅವರ ಕೃತಿ
ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡದ ಜನಪ್ರಿಯ ನಿರ್ದೇಶಕ, ನಟ ಶಂಕರ್ ನಾಗ್ ನಿರ್ದೇಶಿಸಿದ್ದರು. 36 ಕಂತುಗಳಲ್ಲಿ ಪ್ರಸಾರವಾದ ಧಾರಾವಾಹಿಯಿದು. ಜನಪ್ರಿಯ ಲೇಖಕ ಆರ್.ಕೆ. ನಾರಾಯಣ್ ಅವರ ಪುಟ್ಟ ಕಥೆಗಳನ್ನಾಧರಿಸಿ ತಗೆಯಲಾಗಿದ್ದ ಈ ಧಾರಾವಾಹಿ ಸಾಕಷ್ಟು ಖ್ಯಾತಿ ಪಡೆಯಿತು. 'ಸ್ವಾಮಿ ಆ್ಯಂಡ್ ಹಿಸ್ ಫ್ರೆಂಡ್ಸ್' ಅದರ ಅತ್ಯಂತ ಜನಪ್ರಿಯ ಕಥೆ. ಇದರಲ್ಲಿ ವಿಷ್ಣುವರ್ಧನ್, ಅನಂತನಾಗ್, ದಿವಂಗತ ಹಾಸ್ಯ ನಟ ಕಾಶಿ, ಮಾಸ್ಟರ್ ಮಂಜುನಾಥ್ ಸೇರಿದಂತೆ ಕನ್ನಡದ ಹಲವಾರು ನಟರು, ತಂತ್ರಜ್ಞರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದು, ಹಿಂದಿ, ಮರಾಠಿ ಹಾಗೂ ಕನ್ನಡ ಕಲಾವಿದರ ಸಂಗಮ.

ಡಬ್ಬಿಂಗ್ ಆಯ್ಕೆ, ಪ್ರೇಕ್ಷಕರ ಪ್ರತಿಕ್ರಿಯೆ
ಭಾರಿ ಬಜೆಟ್ ಚಿತ್ರ ಉದಾ: ಬಾಹುಬಲಿ ಅಥವಾ ಕನ್ನಡ ಚಿತ್ರರಂಗದಿಂದ ಮಾಡಲು ಸಾಧ್ಯವೇ ಇಲ್ಲ ಎಂಬಂಥ ಚಿತ್ರಕ್ಕೆ ಡಬ್ಬಿಂಗ್ ಅವಕಾಶ ನೀಡಲಿ.
* ಗುಣಮಟ್ಟ ಸರಿ ಇಲ್ಲದಿದ್ದರೆ ಜನರೇ ತಿರಸ್ಕರಿಸುತ್ತಾರೆ. ಇಲ್ಲದಿದ್ದರೆ ಗಾಡ್ ಚಾನೆಲ್ ನಲ್ಲಿ ಬರುವ ಲೈವ್ ಟ್ರಾನ್ಸ್ ಲೇಷನ್ ರೀತಿ ಕಾಮಿಡಿಯಾಗುತ್ತದೆ ಅಷ್ಟೇ.
* ಶೈಕ್ಷಣಿಕ ಕಾರ್ಯಕ್ರಮ, ಡಿಸ್ಕವರಿ, ಎನ್ ಜಿಸಿ ಚಾನೆಲ್ ಪೋಗ್ರಾಂಗೆ ಅಡ್ಡಿ ಬೇಡ.
* ಪೋಗೋ, ಚಿಂಟು ಈಗಾಗಲೇ ಓಡುತ್ತಿವೆ.
|
ಆಡಿಯೋ 2 ಸೆಕೆಂಡುಗಳ ವಿಳಂಬ
ಮಾಲ್ಗುಡಿ ಡೇಸ್ ಕನ್ನಡಕ್ಕೆ ಬಂದಿರುವುದು ಒಳ್ಳೆಯ ಸಂಗತಿ ಆದರೆ, ಗುಣಮಟ್ಟದಲ್ಲೂ ರಾಜಿಯಾಗುವುದು ಬೇಡ. ಸಾಹೋ ಕನ್ನಡ ಚಿತ್ರ ಹಾಗೂ ಮಾಲ್ಗುಡಿ ಡೇಸ್ ಕನ್ನಡ ಎರಡೂ ಕೂಡಾ 2 ಸೆಕೆಂಡುಗಳ ಆಡಿಯೋ ವಿಳಂಬ ತೋರುತ್ತಿದೆ. ಇದನ್ನು ಸರಿಪಡಿಸಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
| Array |
ಆಡಿಯೋ ಗುಣಮಟ್ಟ ಹೇಗಿದೆ?
ಮಾಲ್ಗುಡಿ ಡೇಸ್ ಸದ್ಯ ಅಮೆಜಾನ್ ಪ್ರೈಮ್ ನಲ್ಲಿ ನಾಲ್ಕು ಆವೃತ್ತಿಯಲ್ಲಿದೆ. ನಾಲ್ಕು ಸೀಸನ್ ಪೈಕಿ ನಾಲ್ಕನೇ ಸೀಸನ್ ನ ಎಪಿಸೋಡ್ ಗಳು ಈಗ ಕನ್ನಡದಲ್ಲಿ ಡಬ್ ಆಗಿವೆ. ಅನಂತ್ ನಾಗ್ ಅಭಿನಯದ ಮಿಠಾಯಿವಾಲ(Vendors of Sweets) ಕನ್ನಡ ಭಾಷೆಯಲ್ಲಿ ಲಭ್ಯವಿದೆ. ಆಡಿಯೋ ಗುಣಮಟ್ಟ ಹೇಗಿದೆ?












Click it and Unblock the Notifications