ಏಳು ಆಸನಗಳ ಸೌರಶಕ್ತಿ ಚಾಲಿತ ವಾಹನ ತಯಾರಿಸಿದ ಯುವಕ: ಹರ್ಷ್ ಗೋಯೆಂಕಾ ಮೆಚ್ಚುಗೆ
ದಿನನಿತ್ಯದ ಕಾರ್ಯಗಳನ್ನು ಸರಳಗೊಳಿಸಲು ಜಗತ್ತಿನಾದ್ಯಂತ ಜನರು ಹೇಗೆ ನವೀನ ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ತೋರಿಸುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಉದ್ಯಮಿ ಹರ್ಷ್ ಗೋಯೆಂಕಾ ಹೆಸರುವಾಸಿಯಾಗಿದ್ದಾರೆ. ಅವರ ಇತ್ತೀಚಿನ ಟ್ವೀಟ್ ಇಂತಹ ಒಂದು ಹೊಸತನವನ್ನು ಬಹಿರಂಗಪಡಿಸಿದೆ. ಗೋಯೆಂಕಾ ಅವರು ಇತ್ತೀಚೆಗೆ ವಿಶಿಷ್ಟವಾದ ಸೌರಶಕ್ತಿ ಚಾಲಿತ ವಾಹನದ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದು ನೋಡುಗರನ್ನು ಬೆರಗಾಗಿಸಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ, ಏಳು ಆಸನಗಳ ಆಟೋಮೊಬೈಲ್ ಅನ್ನು ಯುವಕನೊಬ್ಬ ಚಲಾಯಿಸುತ್ತಿರುವುದನ್ನು ತೋರಿಸುತ್ತದೆ. ವಾಹನವು ಸ್ಕೂಟರ್ ಅನ್ನು ಹೋಲುತ್ತದೆ ಮತ್ತು ಸೌರ ಫಲಕಗಳನ್ನು ಅಳವಡಿಸಲಾಗಿರುವ ನೆರಳು ತರಹದ ಚೌಕಟ್ಟನ್ನು ಹೊಂದಿದೆ. ಈ ವಾಹನವನ್ನು ಹೇಗೆ ನಿರ್ಮಿಸಲಾಯಿತು ಎಂದು ಬಾಲಕ ವಿವರಿಸುತ್ತಾನೆ. ಈ ವಾಹನ ಹಲವಾರು ವಿಶೇಷತೆಗಳನ್ನು ಹೊಂದಿದೆ.

ಈ ವಾಹನ ಪರಿಸರ ಸ್ನೇಹಿ ಮಾತ್ರವಲ್ಲ, ಬಿಸಿ ದಿನಗಳಲ್ಲಿ ಪ್ರಯಾಣಿಕರಿಗೆ ನೆರಳು ಕೂಡ ನೀಡುತ್ತದೆ. ಇದರಲ್ಲಿ 200 ಕಿಲೋಮೀಟರ್‌ಗಿಂತ ಹೆಚ್ಚು ಪ್ರಯಾಣಿಸಬಹುದು. ಬಿಸಿಲು ಹೆಚ್ಚಾಗಿದ್ದರೆ ಇನ್ನೂ ಮುಂದೆ ಪ್ರಯಾಣಿಸಬಹುದು ಎಂದು ಸ್ಕೂಟರ್ ಓಡಿಸುವ ಯುವಕ ಹೇಳಿಕೊಂಡಿದ್ದಾನೆ. ಅವರ ಪ್ರಕಾರ, ವಾಹನದ ಒಟ್ಟಾರೆ ತಯಾರಿಕಾ ವೆಚ್ಚ 8,000 ರಿಂದ 10,000 ರೂ. ಮಾತ್ರ.
"ಈ ವಾಹನ ವಿಶೇಷ ಆಮಾರ್ಥ್ಯ, ಏಳು ಆಸನ, ಸೌರ ಶಕ್ತಿ ಮತ್ತು ಸೂರ್ಯನ ಖಾಕದಿಂದ ನಿರ್ಮಿತವಾಗಿದೆ. ಈ ರೀತಿಯ ಮಿತವ್ಯಯದ ಆವಿಷ್ಕಾರಗಳು ನಮ್ಮ ಭಾರತದ ಬಗ್ಗೆ ನನಗೆ ಹೆಮ್ಮೆ ತಂದುಕೊಡುತ್ತವೆ' ಎಂದು ಗೋಯೆಂಕಾ ಟ್ವೀಟ್ ಮಾಡಿದ್ದಾರೆ.
So much sustainable innovation in one product - produced from scrap, seven seater vehicle, solar energy and shade from the sun! Frugal innovations like this make me proud of our India! pic.twitter.com/rwx1GQBNVW
— Harsh Goenka (@hvgoenka) April 29, 2023
ನಿನ್ನೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಳಿಕ ಈ ವೀಡಿಯೊ 60,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. 2,800 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ವಾಹನಗಳ ತಯಾರಿಕೆಗೆ ವಿದೇಶದ ಕಂಪನಿಗಳ ಮೊರೆ ಹೋಗುವ ದೇಶಿಗರು ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಸಂಸ್ಥೆಗಳು ಜನರನ್ನು ನೇಮಿಸಿಕೊಳ್ಳಬೇಕೆಂದು ಅನೇಕ ಜನರು ಸಲಹೆ ನೀಡಿದ್ದಾರೆ.
ಬಳಕೆದಾರರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಇಲ್ಲಿದೆ:
"ತಾಂತ್ರಿಕ ಪ್ರಗತಿಗೆ ಭಾರತದ ಸುವರ್ಣ ಯುಗ! ಶ್ರೀಮಂತರಿಂದ ಬಡವರವರೆಗೆ, ಯುವಕರಿಂದ ಹಿರಿಯರವರೆಗೆ ನವೀನ ಸೃಷ್ಟಿಗಳು ಎಲ್ಲೆಡೆ ಕಂಡುಬರುತ್ತವೆ'' ಎಂದು ನೆಟ್ಟಗರೊಬ್ಬರು ಈ ವೀಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
"ಗ್ರೇಟ್ ಇಂಡಿಯಾ, ರಚನಾತ್ಮಕವಾಗಿ ಈ ವಾಹನದ ತಯಾರಿಕೆಗೆ ನೀವು ಅರ್ಹರಿದ್ದೀರಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

"ಸೂರ್ಯ ಅಥವಾ ವಿದ್ಯುತ್ ನಿಂದ ಚಾರ್ಜ್ ಆಗುವ ಬ್ಯಾಟರಿ ಇರಬೇಕು. ಸೂರ್ಯನಿಂದ ಚಾರ್ಜ್ ಮಾಡುವುದು ಸುಲಭಸಾಧ್ಯವಲ್ಲ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ"ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಯುವಕನ ಈ ರಚನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ವೀಡಿಯೋ ಅತೀ ಹೆಚ್ಚು ವೈರಲ್ ಆಗುತ್ತಿದ್ದು ನೋಡುಗರು ಇದನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ. ಒಟ್ಟಿನಲ್ಲಿ ಉದ್ಯಮಿ ಹರ್ಷ್ ಗೋಯೆಂಕಾ ಹಂಚಿಕೊಂಡ ಈ ವಿಡಿಯೋದಲ್ಲಿ ಕಂಡು ಬಂದ ರಚನೆಯಂತೆ ಇನ್ನಷ್ಟು ಅವಿಷ್ಕಾರಗಳನ್ನು ದೇಶದಲ್ಲಿ ಕಾಣಲು ಜನ ಇಷ್ಟಪಟ್ಟಿದ್ದಾರೆ.












Click it and Unblock the Notifications