ಬಾಹ್ಯಾಕಾಶ ಲೋಕದ ಅಚ್ಚರಿ..! ಮಂಗಳ ಗ್ರಹಕ್ಕಿಂತ ಶುಕ್ರಗ್ರಹ ವಯಸ್ಸಿನಲ್ಲಿ ಚಿಕ್ಕದು..!
ಭೂಮಿ ಬಿಟ್ಟರೆ ಮನುಷ್ಯರು ಬೇರೆಲ್ಲಿ ಬದುಕಲು ಆಗುತ್ತೆ..? ಬಹುಶಃ ಈ ಪ್ರಶ್ನೆಯೇ ಬಾಹ್ಯಾಕಾಶ ಲೋಕ ಇಷ್ಟು ಎತ್ತರಕ್ಕೆ ಬೆಳೆಯೋದಕ್ಕೆ ಕಾರಣವಾಗಿದೆ. ಹೌದು, ಬಾಹ್ಯಾಕಾಶ ವಿಜ್ಞಾನಿಗಳು ಭೂಗ್ರಹವನ್ನ ಬಿಟ್ಟರೆ ಬೇರೆಲ್ಲಾದರೂ ಜೀವಿಗಳು ಇವೆಯಾ ಅಂತಾ ಹುಡುಕುತ್ತಿದ್ದಾರೆ. ಹೀಗೆ ನಮ್ಮ ಪಕ್ಕದಲ್ಲೇ ಇರುವ, ಭೂಮಿ ಜೊತೆ ತುಂಬಾ ಹೋಲಿಕೆ ಇರುವ ಶುಕ್ರಗ್ರಹದ ಮೇಲೆ ವಿಜ್ಞಾನಿಗಳು ಸದಾ ಒಂದು ಕಣ್ಣಿಟ್ಟಿರುತ್ತಾರೆ.
ಅಲ್ಲಿನ ವಾತಾವರಣ, ಶುಕ್ರಗ್ರಹದ ಗಾತ್ರ ಎಲ್ಲವೂ ವಿಜ್ಞಾನಿಗಳನ್ನ ಸೆಳೆಯುತ್ತದೆ. ಈಗಲೂ ಅಂತಹದ್ದೇ ಸುದ್ದಿಯನ್ನ ಬಾಹ್ಯಾಕಾಶ ಸಂಶೋಧಕರು ಹೊತ್ತು ತಂದಿದ್ದಾರೆ. ಇಟಲಿ, ಸ್ಪೇನ್ ಹಾಗೂ ರಷ್ಯಾ ಸಹಯೋದಲ್ಲಿ ನಡೆದ ಅಧ್ಯಯನ ಅಚ್ಚರಿ ವಿಚಾರ ಹೊರಹಾಕಿದೆ. ಅದೇನೆಂದರೆ ಶುಕ್ರಗ್ರಹ ವಯಸ್ಸಿನಲ್ಲಿ ಮಂಗಳ ಗ್ರಹಕ್ಕಿಂತ ಸ್ವಲ್ಪ ಚಿಕ್ಕದು ಎಂಬುದನ್ನ. ಶುಕ್ರಗ್ರಹದ 'ಟೆಕ್ಟಾನಿಕ್ ಪ್ಲೇಟ್'ಗಳ ಅಧ್ಯಯನ ಸ್ಫೋಟಕ ಮಾಹಿತಿ ಹೊರಹಾಕಿದೆ.
ಸುಮಾರು 500 ಮಿಲಿಯನ್ ವರ್ಷಗಳ ಹಿಂದೆ ಶುಕ್ರಗ್ರಹದ ಮೇಲೆ 'ಟೆಕ್ಟಾನಿಕ್ ಪ್ಲೇಟ್'ಗಳ ಕ್ರಿಯೆ ಶುರು ಆಗಿರಬಹುದು ಎನ್ನಲಾಗಿದೆ. ಇದು ಮಂಗಳ ಗ್ರಹಕ್ಕಿಂತ ಶುಕ್ರ ವಯಸ್ಸಿನಲ್ಲಿ ಚಿಕ್ಕದು ಎಂಬುದನ್ನ ಕನ್ಫರ್ಮ್ ಮಾಡಿದೆ. ಹಾಗೇ ಟೆಕ್ಟಾನಿಕ್ ಪ್ಲೇಟ್‌ಗಳು ಸೂರ್ಯನ ಅಕ್ಕಪಕ್ಕ ಭೂಮಿ, ಶುಕ್ರನನ್ನು ಬಿಟ್ಟರೆ ಬೇರೆ ಯಾವ ಗ್ರಹದಲ್ಲೂ ಕಂಡು ಬರುವುದಿಲ್ಲ.

ಅದು ಮಾಯಾ ಜಗತ್ತು..!
'ಟೆಕ್ಟಾನಿಕ್ ಪ್ಲೇಟ್' ಎಲ್ಲವನ್ನೂ ಬದಲಾಯಿಸಬಲ್ಲದು, ಭೂಮಿ ಮೇಲೆ ಭೂಕಂಪನ ಸೇರಿದಂತೆ ಖಂಡಗಳು ಅದಲು-ಬದಲಾಗಿ ಹೋಗಿದ್ದು. ಜ್ವಾಲಾಮುಖಿ ಸ್ಫೋಟಕ್ಕೂ ಕೆಲವೊಮ್ಮೆ ಇದೇ 'ಟೆಕ್ಟಾನಿಕ್ ಪ್ಲೇಟ್' ಕಾರಣ. ವಿಚಿತ್ರ ಎಂದರೆ ಸೌರಮಂಡಲದಲ್ಲಿ ಈವರೆಗೂ ಭೂಮಿ ಗ್ರಹ ಮಾತ್ರ 'ಟೆಕ್ಟಾನಿಕ್ ಪ್ಲೇಟ್'ಗಳನ್ನು ಹೊಂದಿದೆ ಎಂದು ನಂಬಲಾಗಿತ್ತು. ಆದ್ರೆ ಶುಕ್ರ ಗ್ರಹದ ಮ್ಯಾಪ್ ಪರಿಶೀಲನೆ ನಡೆಸುವಾಗ, 'ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್' ಸಂಶೋಧಕರಿಗೆ ಡೌಟ್ ಬಂದಿದೆ. ಶುಕ್ರ ಗ್ರಹದ ಕೆಲ ಪ್ರದೇಶಗಳು ಒಂದಕ್ಕೊಂದು ಒತ್ತುತ್ತಿರುವುದು ಹಾಗೂ ಬದಲಾವಣೆ ಸಂಭವಿಸಿದ್ದು ಕಂಡಿದೆ. ತಡ ಮಾಡದೆ ಕೂಡಲೇ ಹೆಚ್ಚಿನ ಅಧ್ಯಯನ ನಡೆಸಿದ್ದು, ಶುಕ್ರ ಗ್ರಹದಲ್ಲೂ 'ಟೆಕ್ಟಾನಿಕ್ ಪ್ಲೇಟ್'ಗಳು ಬದುಕಿರುವುದು ಗೊತ್ತಾಗಿದೆ. ಇಷ್ಟೆಲ್ಲದರ ನಡುವೆ ಇಡೀ ಜಗತ್ತು ಶುಕ್ರ ಗ್ರಹದ ಅಧ್ಯಯನಕ್ಕೆ ಸಿಕ್ಕಾಪಟ್ಟೆ ಒತ್ತು ನೀಡುತ್ತಿದ್ದು, ನಾಸಾ ಮತ್ತೆ ಮುಂಚೂಣಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಮಂಗಳ ಗ್ರಹದ ರೀತಿ ಶುಕ್ರ ಗ್ರಹವೂ ಮಾನವರ ಬಾಹ್ಯಾಕಾಶ ಅಧ್ಯಯನದ ಕೇಂದ್ರ ಬಿಂದುವಾಗಿದೆ.

2 ನೌಕೆಗಳು ಹಾರಲಿವೆ..!
ಶುಕ್ರ ಗ್ರಹದ ಅಧ್ಯಯನಕ್ಕಾಗಿ ನಾಸಾ ಈಗ ಸಿದ್ಧಪಡಿಸಿರುವ ಯೋಜನೆ ಪ್ರಕಾರ ಒಟ್ಟು 2 ನೌಕೆಗಳು ಶುಕ್ರನ ಕಕ್ಷೆಗೆ ಹಾರಲಿವೆ. ಅದರಲ್ಲಿ ಮೊದಲ ನೌಕೆ 2028ಕ್ಕೆ ಉಡಾವಣೆಯಾಗಲಿದೆ. 2030ಕ್ಕೆ 'ನಾಸಾ' ಮತ್ತೊಂದು ನೌಕೆಯನ್ನ ಉಡಾವಣೆ ಮಾಡಲಿದೆ. ಈ ಎರಡೂ ಯೋಜನೆಗಳು ಶುಕ್ರ ಗ್ರಹದ ಅಧ್ಯಯನ ನಡೆಸುವುದಲ್ಲದೆ ಶುಕ್ರನ ಮೇಲೆ ಜೀವಿಗಳ ಕುರುಹು ಸಿಗುತ್ತಾ ಎಂದು ತಡಕಾಡಲಿವೆ. ಅಕಸ್ಮಾತ್ ಶುಕ್ರನಲ್ಲಿ ಜೀವಿಗಳ ಕುರುಹು ಪತ್ತೆ ಹಚ್ಚಿದ್ದೇ ಆದರೆ, ನಾಸಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಹೀಗಾಗಿ 30 ವರ್ಷಗಳ ಬಳಿಕ ಮಹತ್ವದ ಘೋಷಣೆ ಹೊರಡಿಸಿದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ.

ಶುಕ್ರ ಗ್ರಹ ಬಿಸಿ ಬಿಸಿ..!
ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.

ಜೀವಿಗಳ ಬಗ್ಗೆ ಸುಳಿವು..?
ಅಷ್ಟಕ್ಕೂ ಭೂಮಿಯಲ್ಲಿರುವ ಫಾಸ್ಫೈನ್ ಗ್ಯಾಸ್‌ನ ಗುಣಗಳನ್ನು ಗಮನಿಸಿದರೆ ಶುಕ್ರ ಗ್ರಹದಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಗುತ್ತದೆ. ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್ಫೈನ್ ಅನಿಲ ಸೃಷ್ಟಿಯಾಗುತ್ತದೆ. ಈಗ ಶುಕ್ರನ ಮೋಡಗಳಲ್ಲೂ ಕೂಡ ಈ ಫಾಸ್ಫೈನ್ ಗ್ಯಾಸ್ ಕಂಡುಬಂದಿದೆ. ಹೀಗಾದರೆ ಶುಕ್ರ ಗ್ರಹದಲ್ಲೂ ಸೂಕ್ಷ್ಮಜೀವಿಗಳು ಬದುಕುತ್ತಿರಬಹುದು ಎಂಬ ಆಶಯ ವಿಜ್ಞಾನಿಗಳಲ್ಲಿ ಮೂಡಿದೆ. 3 ಹ್ರೈಡ್ರೋಜನ್ ಅಣುಗಳ ಜೊತೆ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಫಾಸ್ಫೈನ್ ಉತ್ಪತ್ತಿಯಾಗುತ್ತದೆ. ಆದರೆ ಮಾನವರಿಗೆ ತುಂಬಾ ವಿಷಕಾರಿಯಾಗಿರುತ್ತದೆ. ಶುಕ್ರನ ಮೇಲೆ ಕೆಲ ತಿಂಗಳ ಹಿಂದೆ ಫಾಸ್ಫೈನ್ ಅನಿಲ ಕಂಡುಬಂದಿತ್ತು. ಇದಾದ ಬಳಿಕ ಇಡೀ ಜಗತ್ತು ಶುಕ್ರಗ್ರಹದ ಮೇಲೆ ತನ್ನ ದೃಷ್ಟಿ ನೆಟ್ಟಿದೆ.

ಭೂಮಿಗೆ ಅತ್ಯಂತ ಸಮೀಪದ ಗ್ರಹ
ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. ಭೂಮಿಯಿಂದ ಶುಕ್ರ ಗ್ರಹ ಸುಮಾರು 140 ಮಿಲಿಯನ್ ಕಿಲೋಮೀಟರ್ ಅಂದರೆ 14 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಅಂತರ ಭಾರಿ ಎನಿಸಿದರೂ, ಸೌರಮಂಡಲದಲ್ಲಿ ಬೇರೆ ಯಾವುದೇ ಗ್ರಹವೂ ಭೂಮಿಗೆ ಇಷ್ಟು ಹತ್ತಿರದಲ್ಲಿ ಇಲ್ಲ. ರಾತ್ರಿ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವಷ್ಟು ಶುಕ್ರ ಗ್ರಹ ಭೂಮಿಗೆ ಹತ್ತಿರದಲ್ಲಿದೆ. ಹೀಗಾಗಿ ಪ್ರಸಕ್ತ ಸಂಶೋಧನಾ ವರದಿ ಖಗೋಳ ವಿಜ್ಞಾನದಲ್ಲೇ ದೊಡ್ಡ ತಿರುವು ಎನ್ನಬಹುದಾಗಿದೆ. ಅಕಸ್ಮಾತ್ ಮಾನವನೂ ಕೂಡ ಶುಕ್ರಗ್ರಹದಲ್ಲಿ ಬದುಕಲು ಸಾಧ್ಯವಾದರೆ, ಭವಿಷ್ಯದಲ್ಲಿ ದೊಡ್ಡ ಜಾದೂ ನಡೆದುಹೋಗಲಿದೆ.

ಜೀವಿಗಳು ಇದ್ದು ನಾಶವಾಗಿ ಹೋದವಾ..?
ಶುಕ್ರನಲ್ಲಿ ಜೀವಿಗಳು ಬದುಕಿದ್ದರೆ ಯಾವ ಆಧಾರದಲ್ಲಿ ಅಸ್ತಿತ್ವದಲ್ಲಿದ್ದಿರಬಹುದು ಎಂಬ ಪ್ರಶ್ನೆ ಸಂಶೋಧಕರನ್ನು ಕಾಡುತ್ತಿದೆ. ಈ ಮಧ್ಯೆ ಶುಕ್ರನ ಮೇಲ್ಮೈನಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ ಎಂದು ಬಹುತೇಕರು ಈಗಲೂ ಪ್ರತಿಪಾದಿಸುತ್ತಿದ್ದಾರೆ. ಆದರೆ, ಲಕ್ಷಾಂತರ ವರ್ಷಗಳ ಹಿಂದೆ ಶುಕ್ರ ಗ್ರಹದಲ್ಲಿಯೂ ಜೀವ ಜಗತ್ತು ಇದ್ದಿರಬಹುದು. ಆದರೆ 'ಗ್ರೀನ್ ಹೌಸ್ ಎಫೆಕ್ಟ್' ಅಥವಾ ಹಸಿರುಮನೆ ಅನಿಲಗಳ ಪರಿಣಾಮದಿಂದಾಗಿ ಶುಕ್ರ ಗ್ರಹದಲ್ಲಿದ್ದ ಜೀವಜಗತ್ತು ನಾಶವಾಗಿರಬಹುದು ಎಂಬ ಪ್ರತಿಪಾದನೆ ಕೂಡ ವಿಜ್ಞಾನಿಗಳದ್ದಾಗಿದೆ. ಇದಕ್ಕೆಲ್ಲಾ ಉತ್ತರ ಸಿಗಲು ಶುಕ್ರ ಗ್ರಹದ ಮೇಲೆ ಮತ್ತಷ್ಟು ಅಧ್ಯಯನಗಳು ನಡೆಯಬೇಕಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications