Samsung: ಇದನ್ನು ಕಟ್ಟಿದರೆ ಬರೀ ಸಮಯವಷ್ಟೇ ಅಲ್ಲ: ನಿಮ್ಮ ಆರೋಗ್ಯದ ಕಾಳಜಿ ವಹಿಸುತ್ತದೆ
ಈಗ ಡಿಜಿಟಲ್ ಯುಗ ಎಲ್ಲ ರಂಗದಲ್ಲೂ ಡಿಜಿಟಲ್ ಕಾಂತ್ರಿ ಬಹುವಾಗಿ ಆಗುತ್ತಿದೆ. ಈ ಕ್ರಾಂತಿಗೆ ಹಲವು ಸಾಕ್ಷ್ಯಗಳು ನಮ್ಮ ಕಣ್ಣು ಮುಂದೆ ಬರುತ್ತವೆ. ಇದರಲ್ಲಿ ಒಂದು ಸ್ಮಾರ್ಟ್‌ವಾಚ್. ಅನ್‌ಲಾಗ್ ಸಿಸ್ಟಮ್ ವಾಚ್‌ಗಳು ಆರಂಭದಲ್ಲಿ ಎಲ್ಲರೂ ಬಳಸುತ್ತಿದ್ದರು. ಆದರೆ ಈಗ ಇದರಲ್ಲೂ ಹೊಸತನವು ಬಂದು ವರ್ಷಗಟ್ಟಲೇ ಕಳೆದಿವೆ. ಕೈಯಲ್ಲಿ ಕಟ್ಟುವ ವಾಚ್ ಸಹ ಸ್ಮಾರ್ಟ್ ಆಗಿದೆ.
ಸ್ಮಾರ್ಟ್ ವಾಚ್‌ಗಳು ಮಾರುಕಟ್ಟೆಯಲ್ಲಿ ಆವರಿಸಿಕೊಂಡು ಬಿಟ್ಟಿವೆ. ಈ ಕ್ಷೇತ್ರದಲ್ಲೂ ಚೀನಿ ಕಂಪನಿಗಳು ಮುಂದಿವೆ. ಆದರೆ ಅತಿ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿರುವ ಬ್ರ್ಯಾಂಡ್‌ಗಳಲ್ಲಿ ಕೊರಿಯಾ ಮೂಲದ ಸ್ಯಾಮ್‌ಸಂಗ್ ಸಹ ಒಂದು. ಈ ಕಂಪನಿಯ ವಸ್ತುಗಳನ್ನು ಕೊಳ್ಳುವ ಒಂದು ವರ್ಗವೇ ಇದೆ. ಈ ವರ್ಗ ಈ ಕಂಪನಿಯ ವಸ್ತುಗಳ ಮೇಲೆ ಒಂದು ಕಣ್ಣು ನೆಟ್ಟಿರುತ್ತದೆ.

ಯಾವಾಗ ಲಾಂಚ್?
ಇನ್ನೇನು ಕೆಲವೇ ದಿನಗಳಲ್ಲಿ Galaxy Unpacked ಈವೆಂಟ್ ಶೀಘ್ರದಲ್ಲೇ ನಡೆಯಲಿದೆ. ದಿ ಚೊಸೆನ್ ಡೈಲಿ ವರದಿಯ ಪ್ರಕಾರ, ಈ ಬಾರಿ ಜುಲೈ 10 ರಂದು Galaxy Unpacked ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಈವೆಂಟ್‌ನಲ್ಲಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಸರಣಿಯಲ್ಲಿ AI-ಚಾಲಿತ ಆರೋಗ್ಯ-ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಪರಿಚಯಿಸಲು ಕಂಪನಿಯು ತಯಾರಿ ನಡೆಸುತ್ತಿದೆ. ಇದರ ಹೊರತಾಗಿ ಕಂಪನಿಯು ಇದೇ ಕಾರ್ಯಕ್ರಮದಲ್ಲಿ Galaxy Z ಫ್ಲಿಪ್ 6 ಮತ್ತು Galaxy Z Fold 6 ಲಾಂಚ್ ಸಹ ಮಾಡಬಹುದು.
ಏನೆಲ್ಲಾ ಫೀಚರ್ಸ್ ಹೊಂದಿದೆ?
ಜುಲೈ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಈ ವಾಚ್ ರಿವೀಲ್ ಮಾಡಬಹುದು. ಆದರೆ ಸೋರಿಕೆ ಆದ ಮಾಹಿತಿಯ ಪ್ರಕಾರ ಈ ವಾಚ್ ವೇಗದ ಚಾರ್ಜಿಂಗ್ ವೈಶಿಷ್ಠ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಅನೇಕ ಹೊಸ ಫೀಚರ್ಸ್ ಇದ್ದು, ಎಐ ಟ್ರ್ಯಾಕಿಂಗ್ ವೈಶಿಷ್ಟ್ಯವೂ ಇರಲಿದೆ.

ಎಐ ವೈಶಿಷ್ಟ್ಯಗಳೇನು?
AI ಸಹಾಯದಿಂದ, ಸ್ಲೀಪ್ ಟ್ರ್ಯಾಕಿಂಗ್ ಅಲ್ಗಾರಿದಮ್ ಅನ್ನು ಸಹ ಸುಧಾರಿಸಲಾಗುವುದು ಎಂದು Samsung ಘೋಷಿಸಿದೆ. ಸೈಕ್ಲಿಸ್ಟ್‌ಗಳು ಮತ್ತು ಕ್ರೀಡಾಪಟುಗಳಿಗೆ ಒಳ್ಳೆಯ ಸುದ್ದಿ ಏನೆಂದರೆ ಮುಂಬರುವ ಗ್ಯಾಲಕ್ಸಿ ಹೊಸ ವಾಚ್ ವೈಯಕ್ತಿಕ ಆರೋಗ್ಯ ದರ ಮತ್ತು ಕ್ರಿಯಾತ್ಮಕ ಥ್ರೆಶೋಲ್ಡ್ ಪವರ್ ಮ್ಯಾಟ್ರಿಕ್ಸ್ ಅನ್ನು ಹೊಂದಿರಲಿದೆ. ಇದು ಬಳಕೆದಾರರಿಗೆ ವೃತ್ತಿಪರರಂತೆ ತರಬೇತಿ ನೀಡಲು ಸಹಾಯ ಮಾಡುತ್ತದೆ.
ಸಾಮಾನ್ಯ ವಾಚ್‌ಗಳಂತೆ ಈ ವಾಚ್ ಸಹ ನಿದ್ರೆ, ಹೃದಯ ಮತ್ತು ಚಟುವಟಿಕೆ ಡೇಟಾವನ್ನು ಬಳಕೆದಾರರಿಗೆ ನೀಡುತ್ತದೆ. ಅಲ್ಲದೆ ಅತ್ಯಂತ ಆಸಕ್ತಿದಾಯಕ ಅಪ್‌ಗ್ರೇಡ್‌ಗಳಲ್ಲಿ ಒಂದಾದ ಎನರ್ಜಿ ಸ್ಕೋರ್, ವೈಯಕ್ತಿಕ ಆರೋಗ್ಯ ಮೆಟ್ರಿಕ್‌ಗಳನ್ನು ಹೊಂದಿದ್ದು, ರೋಟಿನ್ ಚೆನ್ನಾಗಿಟ್ಟುಕೊಳ್ಳಲು ಸಹಾಯ.
ಈ ವಾಚ್ ನಿಮ್ಮ ನಿದ್ರೆ ಹೇಗೆ ಆಗಿದೆ. ಹಾಗೂ ಎಷ್ಟು ಸಮಯ ಮಲಗಿದ್ದೀರಿ ಎಂಬ ಮಾಹಿತಿಯನ್ನು ಸಹ ನೀಡುತ್ತದೆ. ಇದರ ಇನ್ನೊಂದು ವಿಶೇಷತೆ ಅಂದರೆ, ಎನರ್ಜಿ ಸ್ಕೋರ್ ನಿದ್ರೆಯ ಸಮಯದಲ್ಲಿ ಹೃದಯ ಬಡಿತವನ್ನು ಸಹ ದಾಖಲಿಸುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಈ ವೈಶಿಷ್ಟ್ಯವು ಬಹಳಷ್ಟು ಸಹಾಯ ಮಾಡುತ್ತದೆ.












Click it and Unblock the Notifications