Samsung: ಭರ್ಜರಿ ಡಿಸ್ಕೌಂಟ್, ಒಳ್ಳೆಯ ಫೀಚರ್ಸ್ ಸ್ಮಾರ್ಟ್‌ಫೋನ್ ಕೈಗೆಟಕುವ ದರದಲ್ಲಿ ಲಭ್ಯ
ಈಗ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಕಂಪನಿಗಳು ಹಲವು ಆಫರ್‌ಗಳನ್ನು ನೀಡುತ್ತಿವೆ. ಈ ಆಫರ್‌ಗಳು ಬೆಲೆ ಕಡಿಮೆಯದ್ದಾಗಿರಬಹುದು, ಉಚಿತ ವಸ್ತುಗಳದ್ದಾಗಿರಬಹುದು, ಹೀಗೆ ನಾನಾ ಆಫರ್‌ಗಳನ್ನು ನೀಡಿ, ಗ್ರಾಹರಕನ್ನು ಸೆಳೆಯುತ್ತಿವೆ. ಇದೇ ಸಾಲಿಗೆ ಈಗ ಮತ್ತೊಂದು ಕಂಪನಿ ಸೇರ್ಪಡೆ ಗೊಂಡಿದ್ದು, ಈ ಕಂಪನಿ ಕಳೆದ ವರ್ಷ ಲಾಂಚ್ ಮಾಡಿದ ಪೋನ್ ಮೇಲೆ ಭಾರೀ ರಿಯಾಯತಿ ನೀಡುತ್ತಿದೆ.
ಭಾರತೀಯ ಮಾರುಕಟ್ಟೆಗೆ ಕಳೆದ ವರ್ಷ ಲಾಂಚ್ ಆಗಿದ್ದ, Samsung Galaxy M34 5G ಮೊಬೈಲ್ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. ನೀವು ಬೆಸ್ಟ್ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಲು ಬಯಸಿದ್ದರೆ ಇದು ನಿಮಗೆ ಉತ್ತಮ ಆಯ್ಕೆ. ಈ ಫೋನ್ ಹಲವು ರೂಪಾಂತರಗಳಲ್ಲಿ ಗ್ರಾಹಕರನ್ನು ಸೆಳಯುತ್ತಿದ್ದು, ದರವನ್ನು ಕಡಿತಗೊಳಿಸಲಾಗಿದೆ. ಕಡಿಮೆ ಬೆಲೆ ಸ್ಯಾಮ್‌ಸಾಂಗ್ ಗ್ಯಾಲಕ್ಸಿ ಎಂ 34 ಸ್ಮಾರ್ಟ್‌ಫೋನ್‌ನ್ನು ಗ್ರಾಹರ ಸ್ಯಾಮ್‌ಸಾಂಗ್ ವೆಬ್ ಸೈಟ್ ಹಾಗೂ ಇ ಕಾಮರ್ಸ್ ವೆಬ್ ಸೈಟ್ ಅಮೆಜಾನ್‌ನಲ್ಲಿ ಪಡೆಯಬಹುದು.

ಈ ಮೊಬೈಲ್ ಬೆಲೆ ಎಷ್ಟು?
ಅಮೆಜಾನ್ ಪ್ರಕಾರ, ಈ ಸ್ಯಾಮ್‌ಸಂಗ್ ಫೋನ್ ಅನ್ನು ರೂ 12,999 ಬೆಲೆ ಆಗಿದೆ. ಈ ಫೋನ್ 6GB RAM + 128GB ಇಂಟರ್ನಲ್ ಸ್ಟೋರೆಜ್ ಹೊಂದಿದೆ. ಈ ಫೋನ್ ಖರೀದಿಯ ಮೇಲೆ 1,299 ರೂಗಳ ತ್ವರಿತ ಬ್ಯಾಂಕ್ ರಿಯಾಯಿತಿ ಲಭ್ಯವಿದೆ. Galaxy M34 5G ಅನ್ನು ರೂ 16,999 ರ ಆರಂಭಿಕ ಬೆಲೆಗೆ ಲಾಂಚ್ ಮಾಡಲಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಪ್ರೈಸ್‌ಗಿಂತಲೂ 4000 ರೂಪಾಯಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಬ್ಯಾಂಕ್ ರಿಯಾಯಿತಿಗಳ ನಂತರ ಗ್ರಾಹಕ ಈ Galaxy M34 5G ಫೋನ್‌ನ್ನು 11,700 ಖರೀದಿಸಬಹುದು. ಇದರ ಹೊರತಾಗಿ, ಆಕರ್ಷಕ ಇಎಂಐ ಫೆಸಿಲಿಟಿ ಸಹ ನೀಡಲಾಗುತ್ತದೆ.
ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ
ಸ್ಯಾಮ್‌ಸಂಗ್‌ನ ಈ ಮಿಡ್ ರೇಂಜ್ ಫೋನ್ 6.6-ಇಂಚಿನ ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿದ್ದು, 120 Hz ಹೆಚ್ಚಿನ ರಿಫ್ರೆಶ್ ದರ ಮತ್ತು ಫುಲ್ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ. ಇದರ ಗರಿಷ್ಠ ಹೊಳಪು 1,000 ನಿಟ್‌ಗಳವರೆಗೆ ಇರುತ್ತದೆ. ಈ ಫೋನಿನಲ್ಲಿ Exynos 1280 ಪ್ರೊಸೆಸರ್ ಇದೆ. ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಮತ್ತು 25W USB ಟೈಪ್ C ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕ್ಯಾಮೆರಾ ಸೆಟಪ್ ಹೇಗಿದೆ?
ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50MP ಮುಖ್ಯ OIS ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 13MP ಕ್ಯಾಮೆರಾವನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್‌ನ ಇನ್ನೊಂದು ರೂಪಾಂತರ 8 ಜಿಬಿ ರ್ಯಾಮ್, 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಮೊಬೈಲ್ ರಿಯಾಯಿತಿಯ ದರದಲ್ಲಿ 14999 ರೂಪಾಯಿಗಳಿಗೆ ಲಭ್ಯ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications