ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಕಿಯಿಂದ ಬದುಕು ಕತ್ತಲಾಗದಿರಲಿ... ಪಟಾಕಿ ಸಿಡಿಸುವಾಗ ಹುಷಾರ್!

By ಬಿಎಂ ಲವಕುಮಾರ್
|
Google Oneindia Kannada News

ದೀಪಾವಳಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಪಟಾಕಿಯ ಭಾರಿ ಶಬ್ದ, ಬಾಣ ಬಿರುಸಿನ ಚಿತ್ತಾರಗಳು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚೆಗಿನ ವರ್ಷಗಳಲ್ಲಿ ಭಾರಿ ಶಬ್ದದ ಮತ್ತು ಅನಾಹುತಕಾರಿ ಪಟಾಕಿಗಳನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಪರಿಸರ ಸ್ನೇಹಿ ಪಟಾಕಿಗಳತ್ತ ಒತ್ತು ನೀಡಲಾಗುತ್ತಿದೆ.

ಬಹಳಷ್ಟು ಕಡೆಗಳಲ್ಲಿ ಮಕ್ಕಳಿಂದಲೇ ಪಟಾಕಿಯಿಂದಾಗುವ ಅನಾಹುತ ಕುರಿತಂತೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಮೊದಲಿನಷ್ಟು ಪಟಾಕಿಗಳ ಬಳಕೆಯಾಗುತ್ತಿಲ್ಲ ಎನ್ನುವುದು ಗಮನಾರ್ಹ ಸಂಗತಿ. ತಲಾಂತರದಿಂದಲೂ ದೀಪಾವಳಿ ಜತೆಗೆ ಪಟಾಕಿ ಮಿಳಿತಗೊಂಡು ಆಚರಣೆಯ ಸಂಭ್ರಮಕ್ಕೆ ಸೇತುವೆಯಾಗಿ ಬಂದಿದೆ. ಪಟಾಕಿಯಿಲ್ಲದೆ ದೀಪಾವಳಿಯನ್ನು ಊಹಿಸುವುದು ಕಷ್ಟವೇ. ಆದರೂ ಪಟಾಕಿ ಬೇಡವೇ ಬೇಡ ಎಂಬ ವಾದಗಳು ಇತ್ತೀಚೆಗಿನ ದಿನಗಳಲ್ಲಿ ಪ್ರಬಲವಾಗಿ ಕೇಳಿ ಬರುತ್ತಿವೆ. ಜೊತೆಗೆ ಪಟಾಕಿಯಿಂದಾಗುವ ಅನಾಹುತಗಳ ದೊಡ್ಡ ಪಟ್ಟಿಯನ್ನೇ ಪರಿಸರ ಪ್ರೇಮಿಗಳು ತೆರೆದಿಡುತ್ತಿದ್ದಾರೆ.

Happy Deepavali Wishes : ಶುಭವ ತರಲಿ ದೀಪಾವಳಿ : ಇಲ್ಲಿದೆ ಪ್ರೀತಿಪಾತ್ರರಿಗೆ ಕಳುಹಿಸುವಂತಹ ಶುಭಾಶಯ, ಸಂದೇಶಗಳುHappy Deepavali Wishes : ಶುಭವ ತರಲಿ ದೀಪಾವಳಿ : ಇಲ್ಲಿದೆ ಪ್ರೀತಿಪಾತ್ರರಿಗೆ ಕಳುಹಿಸುವಂತಹ ಶುಭಾಶಯ, ಸಂದೇಶಗಳು

ಇನ್ನು ಪಟಾಕಿ ಕುರಿತಂತೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಪಟಾಕಿ ಬೆಲೆ ಗಗನಕ್ಕೇರಿದ ಪರಿಣಾಮ ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮೊದಲಿನಂತೆ ಪಟಾಕಿ ಅಂಗಡಿಗಳು ಎಲ್ಲೆಂದರಲ್ಲಿ ಕಂಡು ಬರುತ್ತಿಲ್ಲ. ಮಳೆಯ ಹೊಡೆತವೂ ಪಟಾಕಿ ಮೇಲೆ ಪರಿಣಾಮ ಬೀರುತ್ತಿದೆ. ಪಟಾಕಿ ಹಚ್ಚಲೇ ಬೇಡಿ ಎನ್ನುವುದರ ನಡುವೆಯೂ ಜಾಗೃತರಾಗಿರಿ ಎಂಬ ಕಿವಿಮಾತನ್ನು ಹೇಳುವ ಅಗತ್ಯವಿದೆ.

ಎಚ್ಚರ ತಪ್ಪಿದರೆ ದೇಹಕ್ಕೆ, ಜೀವಕ್ಕೆ ಆಪತ್ತು

ಎಚ್ಚರ ತಪ್ಪಿದರೆ ದೇಹಕ್ಕೆ, ಜೀವಕ್ಕೆ ಆಪತ್ತು

ಏಕೆಂದರೆ ಪಟಾಕಿ ಸಿಡಿಸದೆ ಹಬ್ಬ ಆಚರಿಸಿ ಎನ್ನುವುದು ಕೂಡ ಸಾಧ್ಯವಾಗದ ಮಾತು. ಆದರೆ ಪರಿಸರ ಸ್ನೇಹಿ ಪಟಾಕಿಯನ್ನು ಸಿಡಿಸಿ ಎನ್ನಬಹುದು. ಹಬ್ಬದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಯನ್ನು ಬೆಂಕಿಯಲ್ಲಿ ಸುಡುವುದು ಎಷ್ಟರ ಮಟ್ಟಿಗೆ ಸರಿ?. ಪಟಾಕಿ ಸಿಡಿಸುವುದರಿಂದ ಹಣ ವ್ಯಯ, ಪರಿಸರ ಮಾಲಿನ್ಯ ಜತೆಗೆ ಎಚ್ಚರ ತಪ್ಪಿದರೆ ದೇಹಕ್ಕೆ, ಜೀವಕ್ಕೆ ಕುತ್ತು ಬರುವುದಂತು ಖಚಿತ. ಆದುದರಿಂದ ಪಟಾಕಿ ಸಿಡಿಸುವುದರಿಂದ ಆಗುವ ಅನಾನುಕೂಲ ಮತ್ತು ದುರಂತದ ಬಗ್ಗೆ ಈ ಹಿಂದಿನಿಂದಲೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದು, ಮುಂದುವರೆದಿದೆ. ದೀಪಾವಳಿ ಕತ್ತಲಿನಿಂದ ಬೆಳಕಿಗೆ ಕೊಂಡೊಯ್ಯುವ ಹಬ್ಬವಾಗಿರುವುದರಿಂದ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹಚ್ಚುವಾಗ ಎಚ್ಚರ ತಪ್ಪಿ ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬಾರದು. ಹೀಗಾಗಿ ಪಟಾಕಿ ಸಿಡಿಸುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಜೊತೆಗಿದ್ದರೆ ಒಳಿತು. ಹಾಗಾದರೆ ಏನು ಮಾಡಬೇಕು?

ಪಟಾಕಿ ಸಿಡಿಸುವವರ ಗಮನಕ್ಕೆ ಇಲ್ಲಿದೆ ಮಾಹಿತಿ..!

ಪಟಾಕಿ ಸಿಡಿಸುವವರ ಗಮನಕ್ಕೆ ಇಲ್ಲಿದೆ ಮಾಹಿತಿ..!

ಗುಣಮಟ್ಟದ ಹಾಗೂ ಪರವಾನಗಿ ಹೊಂದಿದವರಿಂದಲೇ ಪಟಾಕಿ ಖರೀದಿಸಿ. ಪಟಾಕಿ ಸಿಡಿಸಲು ಹೊರಡುವವರು ಹತ್ತಿ ಬಟ್ಟೆಯನ್ನು ಧರಿಸಿಕೊಳ್ಳುವುದು ಉತ್ತಮ. ಜೊತೆಗೆ ಹಬ್ಬದ ಜೋಶ್‌ನಲ್ಲಿ ಪಟಾಕಿಯನ್ನು ಕೈಯ್ಯಲ್ಲಿಡಿದು ಬೆಂಕಿ ಹಚ್ಚುವ, ಬೇರೆಯವರ ಮೇಲೆ ಎಸೆಯುವ ಪ್ರಯತ್ನ ಮಾಡಬೇಡಿ. ಪಟಾಕಿ ಸಿಡಿಯಲಿಲ್ಲವೆಂದು ಅದನ್ನು ಕೈಯ್ಯಲ್ಲಿಡಿದು ಮೇಲಿನ ಪೇಪರ್ ಸುಲಿದು ಬೆಂಕಿ ಹಚ್ಚುವ ಯತ್ನ ಮಾಡಬೇಡಿ. ಕೆಲವೊಮ್ಮೆ ತಡವಾಗಿ ಸಿಡಿಯುವ ಸಾಧ್ಯತೆಯೂ ಇರುತ್ತದೆ. ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ ಹಾಗೂ ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ ಇಲ್ಲಾಂದ್ರೆ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೆಲ್ಲದರ ನಡುವೆ ಪಟಾಕಿ ಸಿಡಿಸುವಾಗ ಕಣ್ಣಿಗೆ ಕನ್ನಡಕ ಧರಿಸುವುದು ಒಳ್ಳೆಯದು.

ದೀಪಾವಳಿ 2022: ಎಣ್ಣೆಯಿಂದಲ್ಲ ನೀರಿನಿಂದ ಉರಿಯುವ ದೀಪಗಳುದೀಪಾವಳಿ 2022: ಎಣ್ಣೆಯಿಂದಲ್ಲ ನೀರಿನಿಂದ ಉರಿಯುವ ದೀಪಗಳು

ಮಕ್ಕಳ ಬಗ್ಗೆ ಹಿರಿಯರು ನಿಗಾವಹಿಸಿ

ಮಕ್ಕಳ ಬಗ್ಗೆ ಹಿರಿಯರು ನಿಗಾವಹಿಸಿ

ಮನೆಯ ಹಿರಿಯರು ಮಕ್ಕಳನ್ನು ಅವರಿಷ್ಟದಂತೆ ಪಟಾಕಿ ಸಿಡಿಸಲು ಬಿಡಬೇಡಿ. ನೀವು ಕೂಡ ಜೊತೆಗಿದ್ದು ಅವರ ಬಗ್ಗೆ ನಿಗಾ ವಹಿಸಿ. ಜೊತೆಗೆ ಸಲಹೆ ನೀಡಿ. ಮಕ್ಕಳ ವಯಸ್ಸಿಗೆ ತಕ್ಕದಾದ ಪಟಾಕಿಗಳನ್ನೇ ಖರೀದಿಸಿ ತನ್ನಿ. ಭಾರಿ ಶಬ್ದ ಬರುವ ಪಟಾಕಿಗಳನ್ನು ನೀಡಬೇಡಿ. ಹೂಕುಂಡ(ಫ್ಲವರ್‌ಪಾಟ್)ಗಳಿಗೆ ಬೆಂಕಿ ಹಚ್ಚುವಾಗ ಅಂತರ ಕಾಪಾಡಿ. ಕೈಯ್ಯಿಂದ ಹಚ್ಚುವುದು ಒಳ್ಳೆಯದಲ್ಲ. ಹೂಕುಂಡಗಳು ಸಿಡಿದು ಕೈ, ಕಣ್ಣು ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ.

ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ

ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ

ಇನ್ನು ಎಲ್ಲೋ ಗಮನಹರಿಸುತ್ತಾ ಪಟಾಕಿಗೆ ಬೆಂಕಿ ಹಚ್ಚುವುದು ಅಪಾಯಕಾರಿ. ಫೋನ್‌ನಲ್ಲಿ ಮಾತನಾಡುತ್ತಲೋ, ಮತ್ತೇನೋ ಮಾಡುತ್ತಾ ಬೆಂಕಿ ಹಚ್ಚುವವರು ಇದ್ದಾರೆ. ಅಂತಹವರು ದಯವಿಟ್ಟು ಪಟಾಕಿಯತ್ತ ಗಮನವಿಟ್ಟು ಬೆಂಕಿ ಹಚ್ಚಿ. ರಾಕೆಟ್ ಬಿಡುವಾಗ ಬಾಟಲಿಯನ್ನು ಉಪಯೋಗಿಸಿ. ಅಷ್ಟೇ ಅಲ್ಲ ಆಕಾಶದ ಕಡೆಗೆ ಚಿಮ್ಮುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕೆಲವೊಮ್ಮೆ ತಮ್ಮತ್ತಲೋ, ಪಕ್ಕದ ಮನೆಗೋ ನುಗ್ಗುವ ಸಾಧ್ಯತೆಯಿರುತ್ತದೆ. ಇನ್ನು ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವ ವಿಕೃತ ಕೆಲಸವನ್ನು ದಯವಿಟ್ಟು ಮಾಡಬೇಡಿ. ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಪಟಾಕಿ ಹಚ್ಚಿದ ಕೈಯ್ಯನ್ನು ಚೆನ್ನಾಗಿ ತೊಳೆದು ಆಹಾರ ಸೇವಿಸಿ. ಒಟ್ಟಾರೆಯಾಗಿ ಹೇಳಬೇಕೆಂದರೆ ದೀಪಾವಳಿ ಬೆಳಕಿನ ಹಬ್ಬ ಆದ್ದರಿಂದ ಬಾಳಿನಲ್ಲಿ ಕತ್ತಲು ಸರಿದು ಬೆಳಕು ಮೂಡಬೇಕೇ ವಿನಃ ಪಟಾಕಿಯಿಂದಾಗಿ ಬದುಕು ಕತ್ತಲಾಗದಿರಲಿ.

English summary
Safety Tips: Do's and Don'ts while bursting crackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X