Health Tips: ಭಾನುವಾರದಿಂದ ನಿಮ್ಮ ದಿನಚರಿ ಹೀಗಿರಲಿ..!
ಆಧುನಿಕ ಜೀವನ ಶೈಲಿಯು ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಮಾಡಬಲ್ಲದು. ಅದನ್ನು ಗಮನಿಸಿಕೊಳ್ಳುವಷ್ಟು ಪುರುಸೊತ್ತು ಇರುವುದಿಲ್ಲ.ಒತ್ತಡದ ಜೀವನ ಶೈಲಿಯಿಂದಾಗಿ ಆರೋಗ್ಯ ಹದಗೆಡುತ್ತದೆ. ಅದರಲ್ಲೂ ಸಾಫ್ಟ್‌ವೇರ್, ಬ್ಯಾಂಕಿಗ್ ಹಾಗೂ ಕ್ರಿಯೇಟಿವಿಟಿ ಕ್ಷೇತ್ರದಲ್ಲಿ ತೊಡಗುವವರು ಸದಾ ಒತ್ತಡದಲ್ಲಿರುತ್ತಾರೆ. ಅಂತವರು ವಾರಕ್ಕೆ ತಮಗಾಗಿ ಸ್ವಲ್ಪ ಸಮಯ ಮೀಸಲಿಟ್ಟರು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಸೋಮವಾರ ಬೆಳಗ್ಗೆ ಹಾಸಿಗೆಯಿಂದ ಎದ್ದೇಳುತ್ತಿದ್ದಂತೆ ಕೆಲಸಗಳ ಪಟ್ಟಿ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಅದರ ನಡುವೆ ಮಕ್ಕಳನ್ನು ಸ್ಕೂಲ್‌ಗೆ ರೆಡಿ ಮಾಡಿ ಸ್ಕೂಲ್ ವ್ಯಾನ್ ಬರುವಷ್ಟರಲ್ಲಿ ಗೇಟಿನಲ್ಲಿ ನಿಂತಿರಬೇಕು. ಹೀಗೆ ಬೆಳಗ್ಗೆಯಿಂದಲೇ ಬಿಡುವಿಲ್ಲದ ಕೆಲಸ. ಅದರ ನಡುವೆ ತಾವು ಕೆಲಸಕ್ಕೆ ರೆಡಿ ಆಗಬೇಕು. ಹೀಗೆಯೇ ಸೋಮವಾರದಿಂದ ಶನಿವಾರದ ವರೆಗೆ ಪ್ರತಿ ನಿಮಿಷವು ಒಂದಲ್ಲ ಒಂದು ರೀತಿಯ ಒತ್ತಡಗಳು ನಮ್ಮನ್ನು ಆವರಿಸಿಕೊಂಡಿರುತ್ತವೆ. ಈ ಒತ್ತಡದಿಂದ ಸ್ವಲ್ಪ ಸುಧಾರಿಸಿಕೊಳ್ಳಲು ಭಾನುವಾರ ಯಾವಾಗ ಬರುತ್ತದಪ್ಪಾ ಅಂತ ಕಾಯುತ್ತಿರುತ್ತೇವೆ.

ಭಾನುವಾರ ನಮಗಾಗಿ ಇರಲಿ
ಸೋಮವಾರದಿಂದ ಶನಿವಾರದವರೆಗೆ ಕೆಲಸದ ಒತ್ತಡಗಳು ನಮ್ಮನ್ನು ಹಿಂಡಿಹಿಪ್ಪೆ ಮಾಡಿರುತ್ತದೆ. ನಮಗಾಗಿ ಇರುವ ಒಂದೇ ದಿನ ಅದು ಭಾನುವಾರ ಮಾತ್ರ. ಆ ದಿನವೂ ಹತ್ತಾರು ಕಾರ್ಯಕ್ರಮ ಇರುತ್ತೆ. ಇವೆಲ್ಲಾ ಕಾರ್ಯಕ್ರಮಗಳಿಗಿಂತ ನಮ್ಮ ರಿಲ್ಯಾಕ್ಸ್ ಮುಖ್ಯ ಎಂಬುದನ್ನು ಮರೆಯಬಾರದು. ಅದಕ್ಕಾಗಿ ನಾವು ಒಂದಷ್ಟು ಪ್ಲ್ಯಾನ್ ಮಾಡಿಕೊಳ್ಳಬೇಕಾಗುತ್ತದೆ.
ಮುಂಜಾವನ್ನು ಖುಷಿಯಾಗಿ ಆರಂಭಿಸಿ
ಕೆಲಸದ ಒತ್ತಡದಿಂದ ಬಳಲುವವರಿಗೆ ಭಾನುವಾರದ ಒಂದು ದಿನ ರಜೆ ಸಾಕಷ್ಟು ರಿಲ್ಯಾಕ್ಸ್ ತಂದುಕೊಡುತ್ತದೆ. ಇದರ ನಡುವೆಯೂ ಸಂಬಂಧಿಕರ ಕಾರ್ಯಕ್ರಮಗಳಿಗೆ ಭಾಗವಹಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ನಮಗೆ ಖುಷಿನೂ ಆಗಬಹುದು, ಬೇಸರವೂ ಆಗಬಹುದು.
ಹೀಗಾಗಿ ಭಾನುವಾರ ಬೆಳಗ್ಗಿನ ಮುಂಜಾವನ್ನು ನಮಗಾಗಿ ಎತ್ತಿಟ್ಟುಕೊಳ್ಳಬೇಕು. ಭಾನುವಾರದ ಮುಂಜಾವನ್ನು ಕಣ್ತುಂಬಿಸಿಕೊಂಡರೆ, ಹಕ್ಕಿಗಳ ಗಾನವನ್ನು ಕಿವಿತುಂಬಿಸಿಕೊಂಡರೆ, ಮುಂಜಾವಿನ ಗಾಳಿಯನ್ನು ಧೀರ್ಘವಾಗಿ ಎಳೆದುಕೊಂಡರೆ, ಕೆಲಸದ ಎಲ್ಲ ಒತ್ತಡಗಳು ಕಡಿಮೆಯಾಗಿ ನಮ್ಮೊಳಗೆ ಹೊಸ ಚೈತನ್ಯ, ಹುರುಪು ಹೆಚ್ಚುತ್ತದೆ.
ಸೈಕ್ಲಿಂಗ್, ಸ್ವಿಮ್ಮಿಂಗ್ ಜೊತೆಗಿರಲಿ
ಭಾನುವಾರದ ಬೆಳಗನ್ನು ಸಾಧ್ಯವಾಗವಷ್ಟು ನಮಗಾಗಿ ಮೀಸಲಿಟ್ಟಿಕೊಳ್ಳಬೇಕು. ಅದಕ್ಕಾಗಿ ಕೆಲವೊಂದು ಕಟ್ಟುನಿಟ್ಟಿನ ಯೋಜನೆ ಮಾಡಿಕೊಳ್ಳಬೇಕು. ಈ ಯೋಜನೆಗಳನ್ನು ಒಬ್ಬರೆ ಮಾಡಿಕೊಂಡರೆ ಮೈಮರೆಯುತ್ತೇವೆ. ಹೀಗಾಗಿ ಮನೆಯ ಅಕ್ಕಪಕ್ಕದ, ಅಪಾರ್ಟ್ಮೆಂಟ್‌ನ ಸ್ನೇಹಿತರೊಂದಿಗೆ ಪ್ಲ್ಯಾನ್ ಮಾಡಿಕೊಂಡರೆ ನಾವು ಅಂದುಕೊಂಡಿದ್ದು ಯಶಸ್ಸು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಐದಾರು ಮಂದಿ ಸೇರಿಕೊಂಡು ಸೈಕ್ಲಿಂಗ್ ಮಾಡುವುದು ಉತ್ತಮವಾದ ಹವ್ಯಾಸವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಭಾನುವಾರದ ಬೆಳಗ್ಗೆ ಒಂದೆರಡು ಗಂಟೆ ಸೈಕ್ಲಿಂಗ್ ಮಾಡುವುದು ಒಂದು ಫ್ಯಾಷನ್ ಆಗಿದೆ. ಇದನ್ನು ಕೇವಲ ಫ್ಯಾಷನ್‌ಗೆ ಮಾತ್ರ ಮಾಡುತ್ತಿಲ್ಲ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲಿದೆ. ಅದಕ್ಕಾಗಿಯೇ ಹೆಚ್ಚು ಹೆಚ್ಚು ಮಂದು ಸೈಕ್ಲಿಂಗ್ ಮಾಡುವುದರತ್ತ ಆಕರ್ಷಿತರಾಗುತ್ತಿದ್ದಾರೆ.
ಸೈಕ್ಲಿಂಗ್ ರೀತಿಯಲ್ಲಿಯೇ ಸ್ವಿಮ್ಮಿಂಗ್ ಕೂಡ ಒಳ್ಳೆಯ ಹವ್ಯಾಸವಾಗಿದೆ. ಅರ್ಧ ಗಂಟೆ ಮಾಡಿದರೂ ಇಡೀ ನಮ್ಮ ದೇಹ ಸಂಪೂರ್ಣವಾಗಿ ರಿಲ್ಯಾಕ್ಸ್ ಆಗುತ್ತದೆ. ದೇಹದ ರಕ್ತ ಸಂಚಾರ, ಬೊಜ್ಜು ಕರಗಲು, ಉಸಿರಾಟದ ಸಮಸ್ಯೆ, ನರ ದೌರ್ಬಲ್ಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ರಾಮಬಾಣ ಆಗಲಿದೆ. ಇಂತಹ ಆರೋಗ್ಯಕರವಾದ ಹವ್ಯಾಸಗಳಿಗಾಗಿ ಭಾನುವಾರ ನಮಗಾಗಿ ಇರಲಿ.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
ಕಣ್ಣು ಸಮಸ್ಯೆಗಳು ಹೆಚ್ಚುತ್ತಿವೆಯೇ? ಈ ಆಹಾರಗಳು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತವೆ -
Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ -
ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ -
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ












Click it and Unblock the Notifications