Republic Day: ಗಣರಾಜ್ಯೋತ್ಸವ ಪರೇಡ್‌ಗೆ ಹಾಜರಾಗುವುದು, ಟಿಕೆಟ್ ಖರೀದಿಸುವುದು ಹೇಗೆ; ವಿವರಗಳು ಇಲ್ಲಿವೆ
ಜನವರಿ 26 ರ ಗಣರಾಜ್ಯೋತ್ಸವದ ಪ್ರಮುಖ ಹೈಲೈಟ್ ಆಗಿರುವ ಪರೇಡ್‌ಗೆ ಹಾಜರಾಗಬೇಕಿದ್ದರೇ... ಮಾಹಿತಿ ಇಲ್ಲಿದೆ.
ನವದೆಹಲಿ, ಜನವರಿ. 25: ಗಣರಾಜ್ಯೋತ್ಸವ 2023ರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪರೇಡ್‌ಗೆ ಹಾಜರಾಗುವುದು ಹೇಗೆ, ಆನ್‌ಲೈನ್‌ನಲ್ಲಿ, ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಎಲ್ಲಿ ಖರೀದಿಸಬೇಕು ಎಂಬ ಮಾಹಿತಿ ಇಲ್ಲಿದೆ.
ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್ ಅನ್ನು ಮೊದಲು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಇದು ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಪ್ರಮುಖ ಹೈಲೈಟ್ ಕೂಡ. ಪರೇಡ್‌ನಲ್ಲಿ ಭಾರತೀಯ ರಕ್ಷಣಾ ಪಡೆಗಳ ಸಿಬ್ಬಂದಿಯಿಂದ ಮಾರ್ಚ್ ಪಾಸ್ಟ್, ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ, ಮಿಲಿಟರಿ ವಿಮಾನಗಳ ಕಾವಾಯತ್ತು ಸೇರಿ ಹಲವು ಕಾರ್ಯಕ್ರಮಗಳಿರಲಿವೆ.
*ಗಣರಾಜ್ಯೋತ್ಸವ 2023 ಪರೇಡ್‌ಗೆ ಹಾಜರಾಗುವುದು ಹೇಗೆ..?*
ರಕ್ಷಣಾ ಸಚಿವಾಲಯದ ಅಧಿಕೃತ ಸೈಟ್‌ನಿಂದ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಗಣರಾಜ್ಯೋತ್ಸವ ಪರೇಡ್‌ಗೆ ಜನರು ಹಾಜರಾಗಬಹುದು. ಈ ವರ್ಷ, ವಿವಿಧ ಕಾರ್ಯಕ್ರಮಗಳಿಗಾಗಿ ಸರ್ಕಾರದಿಂದ 32,000 ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.

*ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವುದು ಹೇಗೆ..?*
ಹಂತ 1: ಇನ್ವಿಟೇಷನ್ ಮ್ಯಾನೆಜ್‌ಮೆಂಟ್ ಸಿಸ್ಟಮ್ (IMS) ಅಥವಾ ರಕ್ಷಣಾ ಸಚಿವಾಲಯದ 'ಆಮಂತ್ರನ್' ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: ಪೋರ್ಟಲ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಬಳಿಕ ನಿಮ್ಮ ಮೊಬೈಲ್‌ಗೆ ಬಂಬ ಓಟಿಪಿಯನ್ನು ದಾಖಲಿಸಿ.
ಹಂತ 3: ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಕೋಡ್‌ನಂತಹ ಇತರ ವಿವರಗಳನ್ನು ಭರ್ತಿ ಮಾಡಿ ಮತ್ತು ನೋಂದಾಯಿಸಿ.
ಹಂತ 4: ಕಾರ್ಯಕ್ರಮದ ಪಟ್ಟಿಯಲ್ಲಿ "ಗಣರಾಜ್ಯೋತ್ಸವ ಪರೇಡ್" ಎಂಬುದನ್ನು ಆಯ್ಕೆಮಾಡಿ. ನಂತರ ಐಡಿ ಪ್ರಕಾರವನ್ನು ಆಯ್ಕೆಮಾಡಿ ನಿಮ್ಮ ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡಿ.
ಹಂತ 5: ಟಿಕೆಟ್‌ಗಾಗಿ ಆನ್‌ಲೈನ್ ಪಾವತಿ ಮಾಡಿ.

*ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ..?*
ಸೇನಾ ಭವನ, ಶಾಸ್ತ್ರಿ ಭವನ, ಜಂತರ್ ಮಂತರ್, ಪ್ರಗತಿ ಮೈದಾನ್ ಮತ್ತು ಸಂಸತ್ ಭವನದಲ್ಲಿ ಬೂತ್‌ಗಳು ಮತ್ತು ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವಾಗ ನೀವು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ನಂತಹ ಮೂಲ ಫೋಟೋ ಐಡಿ ಕಾರ್ಡ್ ಅನ್ನು ಒದಗಿಸಬೇಕಾಗುತ್ತದೆ.
*ಟಿಕೆಟ್ ಬೆಲೆಗಳು ಹೀಗಿವೆ*
ಗಣರಾಜ್ಯೋತ್ಸವ ಪರೇಡ್‌ನ ಟಿಕೆಟ್‌ಗಳು 20, 100 ಮತ್ತು 500 ರೂಪಾಯಿಗೆ ಲಭ್ಯವಿದ್ದು, ಜನವರಿ 28 ರಂದು ನಡೆಯಲಿರುವ ಬೀಟಿಂಗ್ ರಿಟ್ರೀಟ್ (ಫುಲ್ ಡೇ ರಿಹರ್ಸಲ್) ಟಿಕೆಟ್ ದರ 20 ರೂಪಾಯಿಯಿದೆ.
*ಸಮಯ*
ಗಣರಾಜ್ಯೋತ್ಸವ 2023 ರ ಪರೇಡ್ ಜನವರಿ 26 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ.
ಗಣರಾಜ್ಯೋತ್ಸವಕ್ಕೆ ಭದ್ರತಾ ವ್ಯವಸ್ಥೆಗಳ ಕಾರಣದಿಂದ ಸೆಂಟ್ರಲ್ ಸೆಕ್ರೆಟರಿಯೇಟ್, ಉದ್ಯೋಗ ಭವನ, ಪಟೇಲ್ ಚೌಕ್ ಮತ್ತು ಲೋಕ ಕಲ್ಯಾಣ್ ಮಾರ್ಗ್‌ನ ನಾಲ್ಕು ಮೆಟ್ರೋ ನಿಲ್ದಾಣಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.












Click it and Unblock the Notifications