ವಿಶ್ವದಲ್ಲೇ Redmi Note 13 ಭಾರೀ ಮಾರಾಟ; ಗ್ರಾಹಕರಿಗೆ ಬಂಪರ್ ಆಫರ್‌ ನೀಡಿರುವ ಕಂಪನಿ

ಎಲ್ಲಾ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಪಾಲನ್ನು ಹೊಂದಿವೆ. ರೆಡ್‌ಮಿ ಮೊಬೈಲ್‌ ಪ್ರಪಂಚಾದಾದ್ಯಂತ ತನ್ನ ಗ್ರಾಹರಿಗೆ ಮತ್ತಷ್ಟು ಹತ್ತಿರವಾಗಿದೆ. ಇತ್ತೀಚಿಗೆ ಈ ಚೀನಿ ಕಂಪನಿ ರೆಡ್‌ಮಿ ನೋಟ್ 13 ಸೀರಿಸ್‌ ವಿಶ್ವದ ಮಾರುಕಟ್ಟೆಗೆ ರಿಲೀಸ್ ಮಾಡಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಫೋನ್‌ ಅತಿ ಹೆಚ್ಚು ಗ್ರಾಹಕರು ಕೊಂಡ ಫೋನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೆಡ್ಮಿ ಇಂಡಿಯಾ ಜಾಗತಿಕವಾಗಿ 15 ಮಿಲಿಯನ್ ಯುನಿಟ್ 'ರೆಡ್ಮಿ ನೋಟ್ 13 5 ಜಿ' ಸರಣಿಯನ್ನು ಮಾರಾಟ ಮಾಡಿದೆ ಎಂದು ಹೇಳಿಕೊಂಡಿದೆ. ಇದರೊಂದಿಗೆ ಕಂಪನಿಯು Redmi Note 13 ಸರಣಿಯ ಮೇಲೆ ರಿಯಾಯಿತಿಯನ್ನು ಸಹ ನೀಡಿದೆ. ಭಾರತದಲ್ಲಿ, 'Redmi 13' ಸ್ಮಾರ್ಟ್‌ಫೋನ್‌ಗಳನ್ನು ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ವರ್ಷದ ಜನವರಿಯಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಶ್ರೇಣಿಯು Redmi Note 13 5G, Note 13 Pro 5G ಮತ್ತು Note 13 Pro+ 5G ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.

Redmi Note 13 Series Sets New Sales Record 150 Million Units Sold Globally

ರೆಡ್‌ಮಿ ನೋಟ್ 13 ರ ದಾಖಲೆಯ ಮಾರಾಟದ ಕುರಿತು, ಕಂಪನಿಯು ಖರೀದಿದಾರರಿಗೆ ಧನ್ಯವಾದಗಳನ್ನು ಅರ್ಪಿಸಿದೆ ಮತ್ತು ಕಂಪನಿಯು ಅವರಿಗೆ ಧನ್ಯವಾದ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. 20 ಸಾವಿರದ ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ. ಮಧ್ಯಮ ಶ್ರೇಣಿಯ ವಿಭಾಗದಲ್ಲಿ ನೀವು ಶಕ್ತಿಯುತ ಫೋನ್ ಬಯಸಿದರೆ, ಇದು ನಿಮಗೆ ಉತ್ತಮ ಆಯ್ಕೆಗಳಲ್ಲಿ ಒಂದು ಫೋನ್ ಎಂದು ಹೇಳಬಹುದು.

ರೆಡ್‌ಮಿ ನೋಟ್‌ 13 ಫೋನಿನ ವೈಶಿಷ್ಠ್ಯತೆ

ರೆಡ್‌ಮಿ ನೋಟ್‌ 13 ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಈ ಫೋನ್‌ನಲ್ಲಿ ಮಿಡಿಯಾಟೆಕ್‌ ಡೈಮೆನ್ಸಿಟಿ 9200ಪ್ಲಸ್‌ ಪ್ರೊಸೆಸರ್ ಹೊಂದಿದೆ. ಈ ಫೋನ್‌ ಆಂಡರ್ಯಡ್‌ 13ಗೆ ಸಪೋರ್ಟ್‌ ಮಾಡುತ್ತದೆ. ಅಲ್ಲದೆ 5000 ಎಂಎಎಚ್‌ ಬ್ಯಾಟರಿಯನ್ನು ಹೊಂದಿದೆ. ಹಿಂಭಾಗದಲ್ಲಿ 108 ಮೆಗಾಪಿಕ್ಸಲ್‌ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಅಲ್ಲದೆ 8 ಮೆಗಾ ಪಿಕ್ಸಲ್‌ ಸೆಕಂಡರಿ ಕ್ಯಾಮೆರವನ್ನು ಈ ಫೋನ್ ಹೊಂದಿದ್ದು, 2 ಮೆಗಾ ಪಿಕ್ಸಲ್‌ ಮೂರನೇ ಕ್ಯಾಮೆರಾ ಇದೆ. ಇನ್ನು 13 ಮೆಗಾ ಪಿಕ್ಸಲ್‌ ನೊಂದಿಗಿನ ಫ್ರಂಟ್‌ ಕ್ಯಾಮೆರಾ ಒಳ್ಳೆಯ ಸೆಲ್ಫಿ ಹಾಗೂ ಕಾಲ್‌ ರೆಕಾರ್ಡಿಂಗ್‌ಗೆ ಅನುಕೂಲಕರವಾಗಿದೆ.

ಬಂಪರ್‌ ಆಫರ್‌

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮಾರಾಟದಲ್ಲಿ Redmi Note 13 ನಲ್ಲಿ ಬಂಪರ್ ರಿಯಾಯಿತಿಯನ್ನು ನೀಡುತ್ತಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 20,999 ನಲ್ಲಿ ಮಾರಾಟಕ್ಕಿದೆ. ಆದರೆ ಪ್ರಸ್ತುತ ಅದರ ಮೇಲೆ ಶೇಕಡಾ 19ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಮಾರಾಟದ ಕೊಡುಗೆಯಲ್ಲಿ, ನೀವು ಈ ಶಕ್ತಿಯುತ ಫೋನ್‌ನ್ನು ಕೇವಲ 16,999 ರೂ.ಗೆ ಖರೀದಿಸಬಹುದು. ಕಂಪನಿಯು ಗ್ರಾಹಕರಿಗೆ 15,750 ರೂ.ವರೆಗೆ ಭರ್ಜರಿ ಎಕ್ಸ್‌ಚೆಂಜ್‌ ಕೊಡುಗೆಯನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದಾಗ ನೀವು 5% ಕ್ಯಾಶ್‌ಬ್ಯಾಕ್‌ನ ಕೊಡುಗೆಯನ್ನು ಸಹ ಪಡೆಯುತ್ತೀರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+