ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ನೀಡಲಿದೆ Realme Narzo N65
ದಿನವೂ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ಸಾಲಿನಲ್ಲಿ ಚೀನಾ ಕಂಪನಿಯ ಫೋನ್‌ಗಳ ಸಂಖ್ಯೆ ಹೆಚ್ಚು. ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ನೀಡಲು ರಿಯಲ್‌ಮಿ ಸಕಲ ಸಿದ್ಧತೆ ಮಾಡಿಕೊಂಡಿದೆ. ತನ್ನ ಹಳೆಯ ರಿಯಲ್‌ಮಿ ನಾರ್ಜೊ ಎನ್55 ಫೋನ್‌ನ್ನೇ ಅಪ್‌ಗ್ರೇಡ್ ಮಾಡಿ ಈ ಸ್ಮಾರ್ಟ್‌ಫೋನ್ ಲಾಂಚ್ ಮಾಡಗಲಾಗುತ್ತಿದೆ. ಇದು ಚೀನಾ ಕಂಪನಿಯ ಮೊದಲ ಎನ್ ಸೀರಿಸ್ ಫೋನ್ ಆಗಿರಲಿದೆ. ಈ ಫೋನ್ 5ಜಿ ಸಂಪರ್ಕವನ್ನು ಹೊಂದಿರಲಿದೆ. ಕಳೆದ ವರ್ಷ ಈ ಸರಣಿಯಲ್ಲಿ ಬಿಡುಗಡೆಯಾದ ಎಲ್ಲ ಸ್ಮಾರ್ಟ್‌ಫೋನ್‌ಗಳು 4ಜಿ ಎಲ್‌ಟಿಇ ಬೆಂಬವನ್ನು ಹೊಂದಿದ್ದವು.
Realme Narzo N65 ಅಗ್ಗದ ಸ್ಮಾರ್ಟ್‌ಫೋನ್ ಕೆಟಗರಿಯಲ್ಲಿ ಕಾಣಿಸಿಕೊಳ್ಳಲಿದೆ. ಈ ಫೋನಿನ ಆರಂಭಿಕ ಬೆಲೆ 11,499 ರೂಪಾಯಿ ಆಗಿರಲಿದೆ. ಅಲ್ಲದೆ ಈ ಫೋನ್‌ನ್ನು ನೀವು ಕೂಪನ್ ಬಳಸಿ ಪಡೆದಿದ್ದೇ ಆದಲ್ಲಿ 1000 ರೂಗಳ ಡಿಸ್ಕೌಂಟ್ ಪಡೆಯಬಹುದು. ಈ ಫೋನ್ ಇ-ಕಾಮರ್ಸ್ ವೆಬ್‌ಸೈಟ್ Amazon ಮತ್ತು Realme ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮೇ 31 ರಂದು ಮಧ್ಯಾಹ್ನ 12 ಗಂಟೆಗೆ ಲಭ್ಯ.. ಈ ಫೋನಿಗೆ ನೀಡುತ್ತಿರುವ ಆಫರ್ ಜೂನ್ 4ರಂದು ಕೊನೆಗಳ್ಳಲಿದೆ.

Realme ಬಜೆಟ್ ಫ್ರೆಂಡ್ಲಿ 5G ಸ್ಮಾರ್ಟ್‌ಫೋನ್ 6.67 ಇಂಚಿನ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಫೋನ್‌ನ ಡಿಸ್‌ಪ್ಲೇಯು ಐಫೋನ್‌ನಂತಹ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವು ಲಭ್ಯವಿರುತ್ತದೆ. ಇದರ ಗರಿಷ್ಠ ಹೊಳಪು 625 ನಿಟ್ ಆಗಿದೆ. ಇದು ಎರಡು ರೂಪಾಂತರಗಳಲ್ಲಿ ಬರಲಿದೆ.
ಪ್ರೊಸೆಸರ್ ಯಾವುದು?
ಈ ಫೋನ್ 5000mAh ಬ್ಯಾಟರಿ ಮತ್ತು 15ವ್ಯಾಟ್ ಯುಎಸ್‌ಬಿ ಟೈಪ್ C ಚಾರ್ಜಿಂಗ್ ಬೆಂಬಲಿಸುತ್ತದೆ. ಈ ಫೋನ್ Android 14 ಆಧಾರಿತ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮಿಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ನಲ್ಲಿ Realme Narzo N65 ಕಾರ್ಯನಿರ್ವಹಿಸುತ್ತದೆ. ಫೋನ್‌ನಲ್ಲಿ 6GB RAM ವರೆಗೆ ಬೆಂಬಲಿತವಾಗಿದೆ. ಇದಲ್ಲದೆ, ಫೋನ್ 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೂ ವಿಸ್ತರಿಸಬಹುದು.
ಕ್ಯಾಮೆರಾ ಹೇಗಿದೆ?
Realme Narzo N65 5G ಬ್ಯಾಕ್ ಸೈಡ್‌ನಲ್ಲಿ ರೌಂಡ್ ಶೇಪ್ ಕ್ಯಾಮೆರಾ ವಿನ್ಯಾಸ ಹೊಂದಿದೆ. ಇದರಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದ್ದು, ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸಲ್ ಹಾಗೂ ಸೆಕಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಹೊಂದಿದೆ. ಇನ್ನು ಈ ಫೋನಿನಲ್ಲಿ ಸೆಲ್ಫಿ ಹಾಗೂ ವೀಡಿಯೋ ಕರೆಗಾಗಿ 8 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ಸೈಡ್ ಮೌಂಟೆಡ್ ಫಿಜಿಕಲ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
4ಜಿಬಿ +128ಜಿಬಿ ಇಂರ್ಟನಲ್ ಸ್ಟೋರೇಜ್ ಇರುವ ಫೋನ್ 11,499 ರೂಗೆ ಲಭ್ಯ. ಇನ್ನು 6ಜಿಬಿ +128ಜಿಬಿ ಇಂರ್ಟನಲ್ ಸ್ಟೋರೇಜ್ ಇರುವ ಫೋನ್ 12,499 ರೂ. ಗಳಿಗೆ ಲಭ್ಯವಾಗಲಿದೆ.












Click it and Unblock the Notifications