Realme: ಜುಲೈ 30 ರಂದು ಭರ್ಜರಿ ಕ್ಯಾಮೆರಾ ಫೀಚರ್ಸ್ ಹೊಂದಿರುವ ರಿಯಲ್‌ಮಿ ಫೋನ್ ಲಾಂಚ್
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಹಿಡಿತವನ್ನು ಹೊಂದಿರುವ ಚೀನಾ ಮೂಲದ ರಿಯಲ್‌ಮಿ ಕಂಪನಿ ಇದೇ ತಿಂಗಳಲ್ಲಿ ಮತ್ತೊಂದು ಭರ್ಜರಿ ಫೀಚರ್ಸ್ ಹೊಂದಿರುವ ಫೋನ್ ಲಾಂಚ್ ಮಾಡಲಿದೆ. Realme ನ ಈ ಫೋನ್ NEXT AI ಮತ್ತು ಅಲ್ಟ್ರಾ ಕ್ಲಿಯರ್ ಕ್ಯಾಮೆರಾದಂತಹ ವಿಶೇಷ ಸೌಲಭ್ಯವನ್ನು ಹೊಂದಿದೆ.
Realme 13 Pro ಸರಣಿಯ ಈ ನೂತನ ಫೋನ್‌ನಲ್ಲಿ 120x ಸೂಪರ್ ಜೂಮ್ ಹೊಂದಿರುವ ಅತ್ಯಾಧುನಿಕ ಕ್ಯಾಮೆರಾ ನೀಡುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೆ ರಿಯಲ್‌ಮಿ ಈ ಭರ್ಜರಿ ಫೋನ್ ಬಿಡುಗಡೆ ಮಾಡುವ ದಿನಾಂಕವನ್ನು ಖಚಿತಪಡಿಸಿದೆ. ಈ ಫೋನ್ ಹಿಂಭಾಗದಲ್ಲಿ ಸರ್ಕಲ್‌ನಲ್ಲಿ ಕ್ಯಾಮೆರಾಗಳನ್ನು ನೀಡಲಾಗಿದೆ.

ಈ ಮೊಬೈಲ್ ಡಿಸ್‌ಪ್ಲೇ ಹೇಗಿರಲಿದೆ?
ರಿಯಲ್‌ಮಿ 13 ಪ್ರೋ ಸರಣಿಯ ಫೋನ್ 6.67 ಇಂಚಿನ 3D ಕರ್ವ್‌ಡ AMOLED ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಈ ಸರಣಿಯ ಫೋನ್‌ಗಳು 120Hz ಹೆಚ್ಚಿನ ರಿಫ್ರೆಶ್ ದರದೊಂದಿಗೆ ಮಾರುಕಟ್ಟೆಗೆ ಬರಲಿವೆ. ಈ ಮೊಬೈಲ್‌ನಲ್ಲಿ ಕ್ವಾಲಕಂ ಸ್ನ್ಯಾಪ್ ಡ್ರ್ಯಾಗನ್ 7ಎಸ್ ಜನರೇಷನ್ 3 ಪ್ರೊಸೇಸರ್ ಹೊಂದಿರುವ ಸಾಧ್ಯತೆ ಇದೆ.
ಈ ಮೊಬೈಲ್ ಎರಡು ರೂಪಾಂತರಗಳಲ್ಲಿ ಬರುವ ಸಾಧ್ಯತೆ ಇದೆ. 8GB ರ್ಯಾಮ್ ಹಾಗೂ 128GB ಇಂಟರ್ನಲ್ ಸ್ಟೋರೇಜ್, 8GB ರ್ಯಾಮ್ ಹಾಗೂ 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸಂಭವ ಇದೆ.

ಕ್ಯಾಮೆರಾ ಹೇಗಿದೆ?
ಈ ಕ್ಯಾಮೆರಾ ಹಿಂಬಾಗದಲ್ಲಿ ವೃತ್ತಾಕಾರದ ಆಕಾರದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಕ್ಯಾಮೆರಾ Sony LYT-701 ಹೊಂದಿರಲಿದೆ. ಇದು 3x ಆಪ್ಟಿಕಲ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತದೆ.
ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್‌ನಲ್ಲಿ 32MP ಕ್ಯಾಮೆರಾವನ್ನು ಕಾಣಬಹುದು. ಈ ಫೋನ್‌ನಲ್ಲಿ 5000mAh ಬ್ಯಾಟರಿ ಮತ್ತು 80W ಸೂಪರ್ ವೋಕ್ ವೇಗದ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.
ಇದರಲ್ಲಿ ಇರುವ ವಿಶೇಷತೆ ಏನು?
ಈ ಫೋನ್ ಹಲವು ವಿಶೇಷತೆಗಳನ್ನು ಹೊಂದಿವೆ. ಈ ಫೋನ್‌ನಲ್ಲಿ ಆಧುನಿಕ Sony LYT 701 ಕ್ಯಾಮೆರಾ ಸಂವೇದಕವನ್ನು ಬಳಸಲಾಗಿದೆ. ಅಲ್ಲದೆ ಸೋನಿ LYT 600 ಪೆರಿಸ್ಕೋಪ್ ಕ್ಯಾಮೆರಾ ಸಹ ಲಭ್ಯವಿರುತ್ತದೆ. ಇದು AI ಕ್ಯಾಮೆರಾ ಸಿಸ್ಟಂ ಹೈಪರ್‌ಇಮೇಜ್ + ವೈಶಿಷ್ಟ್ಯದೊಂದಿಗೆ ಒದಗಿಸಲ್ಪಡುತ್ತದೆ.

ಮೊಬೈಲ್ ಬಿಡುಗಡೆ ಮಾಡುವುದು ಯಾವಾಗ?
ರಿಯಲ್‌ಮಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ Realme 13 Pro ಫೋನ್ ದಿನಾಂಕವನ್ನು ತಿಳಿಸಿದ್ದು, ಜುಲೈ 30 ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಈ ವೇಳೆ 13 ಪ್ರೋ ಸರಣಿಯಲ್ಲಿ ಎರಡು ಮೊಬೈಲ್ ಬಿಡುಗಡೆ ಮಾಡಲಿದೆ. ರಿಯಲ್‌ಮಿ 13 ಪ್ರೋ ಹಾಗೂ ರಿಯಲ್‌ಮಿ 13 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್ ರಿಲೀಸ್ ಮಾಡಲಿದೆ.
ಈ ಮೊಬೈಲ್‌ಗಳನ್ನು ತನ್ನ ಕಂಪನಿಯ ವೆಬ್ ಸೈಟ್ ಹಾಗೂ ಫ್ಲಿಪ್ ಕಾರ್ಟ್‌ನಲ್ಲಿ ಪಡೆಯಬಹುದು. ಈ ಫೋನ್ ಮೊನೆಟ್ ಗೋಲ್ಡ್ ಮತ್ತು ಮೊನೆಟ್ ಪರ್ಪಲ್ ಬಣ್ಣಗಳಲ್ಲಿ ಗ್ರಾಹಕರ ಗಮನ ಸೆಳೆಯಲಿದೆ.
ಭರ್ಜರಿ ಫೀಚರ್ಸ್‌ಗಳನ್ನು ಹೊಂದಿರುವ ಪೋನ್ ಕೊಳ್ಳಲು ಗ್ರಾಹಕರು ಸಹ ಕಾಯುತ್ತಿದ್ದಾರೆ. ಈ ಫೋನ್‌ನ ಬೆಲೆ ಇನ್ನು ಬಹಿರಂಗವಾಗಿಲ್ಲ.












Click it and Unblock the Notifications