ಭಾರತದಲ್ಲಿ ಲಾಂಚ್ ಆಗಿದೆ ರಿಯಲ್‌ಮಿ ಕಂಪನಿಯ ಎರಡು ಮೊಬೈಲ್
ಭಾರತದಲ್ಲಿ ಸದ್ದಿಲ್ಲದೆ ರಿಯಲ್‌ಮಿ 13 ಪ್ರೊ ಹಾಗೂ ರಿಯಲ್‌ಮಿ 13 ಪ್ರೊ ಪ್ಲಸ್ 5ಜಿಯನ್ನು ಬಿಡುಗಡೆ ಮಾಡಿದೆ. ಇದು ಮಿಡ್‌ರೆಂಜ್‌ನಲ್ಲಿ ಲಾಂಚ್ ಆಗಿದ್ದು, ಗ್ರಾಹಕರನ್ನು ಎರಡೂ ಕೈಗಳಿಂದ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ಬ್ಯಾಂಕ್ ಆಫರ್‌ಗಳು ಸಹ ಲಭ್ಯ ಇವೆ.
ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್ಸ್‌ಗಳನ್ನು ಹೊಂದಿರುವ ಫೋನ್ ಲಾಂಚ್ ಮಾಡಿದ ರಿಯಲ್‌ಮಿ ಮಾರುಕಟ್ಟೆಯಲ್ಲಿ ಹವಾ ಕ್ರಿಯೆಟ್ ಮಾಡಿದೆ. ಈ ಫೋನಿನಲ್ಲಿ ಎಐ ಫೀಚರ್ ಗಳನ್ನು ನೀಡಲಾಗಿದೆ. ಈ ಫೋನಿನಲ್ಲಿ ಪ್ರೈಮರಿ ಕ್ಯಾಮೆರಾ ನೀಡಲಾಗುತ್ತಿದ್ದು, 5,200mAh ಬ್ಯಾಟರಿ ನೀಡಲಿದೆ. ಕಂಪನಿ ಈ ಫೋನ್‌ಗಳ ಜೊತೆ Realme Watch S2 ಮತ್ತು Realme Buds T310 ಅನ್ನು ಸಹ ಬಿಡುಗಡೆ ಮಾಡಿದೆ.

ಡಿಸ್‌ಪ್ಲೇ ಹೇಗಿದೆ?
ಈ ಎರಡೂ ಫೋನ್‌ಗಳು 6.7 ಇಂಚಿನ ಕರ್ವಡ್ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೇಶ್ ದರವನ್ನು ಹೊಂದಿರಲಿದೆ. ಈ ಫೋನ್‌ಗಳಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 7ಎಸ್ ಜನರೇಷನ್ ಪ್ರೊಸೆಸರ್ ಹೊಂದಿರಲಿವೆ. ಇದರೊಂದಿಗೆ 12ಜಿಬಿ ರ್ಯಾಮ್ ಮತ್ತು 512ಜಿಬಿ ವರೆಗಿನ ಇಂಟರ್ನಲ್ ಸ್ಟೋರೇಜ್ ಲಭ್ಯ.
Realme 13 Pro+ 5,200mAh ಬ್ಯಾಟರಿಯನ್ನು ಬೆಂಬಲಿಸಲಿದ್ದು, 80W ಸೂಪರ್ ಓಕ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಪ್ರೊ ಮೊಬೈಲ್‌ನಲ್ಲಿ 45W ಸೂಪರ್ ಓಕ್ ಫಾಸ್ಟ್ ಚಾರ್ಜಿಂಗ್ ನೀಡಲಾಗುತ್ತದೆ.
ಈ ಎರಡೂ ಫೋನ್‌ನಲ್ಲಿ ಸುಧಾರಿತ ಆಂಡ್ರಾಯ್ಡ್ 14 ಸಾಫ್ಟವೇರ್ ಲಭ್ಯ. ಪ್ರೊ ಪ್ಲಸ್ ಹಿಂಭಾಗದಲ್ಲಿ ಟ್ರಿಪ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಎಂಪಿ, 50MP ಸೆಕೆಂಡರಿ ಪೆರಿಸ್ಕೋಪ್ ಕ್ಯಾಮೆರಾ ಲಭ್ಯವಿದೆ. ಮೂರನೇ ಕ್ಯಾಮೆರಾ 8MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಮುಂಭಾಗದಲ್ಲಿ 32MP ಕ್ಯಾಮೆರಾ ಇದೆ.
Realme 13 Pro ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, ಪ್ರೈಮರಿ ಕ್ಯಾಮೆರಾ 50MP, ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿರಲಿದೆ. ಈ ಫೋನ್ ಮುಂಭಾಗದಲ್ಲಿ 32MP ಕ್ಯಾಮೆರಾವನ್ನು ಸಹ ಹೊಂದಿದೆ.
ಬೆಲೆ ಎಷ್ಟು?
Realme 13 Pro ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಿದೆ. 8ಜಿಬಿ ರ್ಯಾಮ್ + 128ಜಿಬಿ, 8ಜಿಬಿ ರ್ಯಾಮ್ + 256ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು 12ಜಿಬಿ ರ್ಯಾಮ್ + 512ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದ್ದು, ಇದರ ಆರಂಭಿಕ ಬೆಲೆ 23,999 ರೂ. ಆಗಿದ್ದು, ಉಳಿದ ಎರಡು ರೂಪಾಂತರಗಳು ಕ್ರಮವಾಗಿ ರೂ 25,999 ಮತ್ತು ರೂ 28,999.
Realme 13 Pro+ ಫೋನ್‌ನ್ನು ಕಂಪನಿ ಇದೇ ರೀತಿ ಮೂರು ರೂಪಾಂತರಗಳಲ್ಲಿ ಲಾಂಚ್ ಮಾಡಲಿದೆ. 8ಜಿಬಿ ರ್ಯಾಮ್ + 256ಜಿಬಿ ಇಂಟರ್ನಲ್ ಸ್ಟೋರೇಜ್, 12ಜಿಬಿ ರ್ಯಾಮ್ + 256 ಜಿಬಿ ಇಂಟರ್ನಲ್ ಸ್ಟೋರೇಜ್, 12ಜಿಬಿ ರ್ಯಾಮ್ + 512ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದ್ದು, ಈ ಫೋನಿನ ಆರಂಭಿಕ ಬೆಲೆ 29,999 ರೂ. ಆಗಿದ್ದು, ಉಳಿದ ಫೋನ್‌ಗಳ ಬೆಲೆ ಕ್ರಮವಾಗಿ ರೂ 31,999 ಮತ್ತು ರೂ 33,999 ಆಗಿರಲಿದೆ. ಉಳಿದಂತೆ ಈ ಫೋನ್‌ಗಳ ಜೊತೆ Realme Watch S2 ನ ಬೆಲೆ 4,499 ರೂ. ಆಗಿರಲಿದೆ. Realme Buds T310 ಬೆಲೆ 2,199 ರೂ.












Click it and Unblock the Notifications