ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವರದಿ: ಗೂಳಿಹಟ್ಟಿ ಶೇಖರ್ ತಾಯಿಯ ಕೈಸ್ತ ಧರ್ಮ ಪಾಲನೆ, ಅಸಲಿಯತ್ತೇನು?

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 24: ರಾಜ್ಯದಲ್ಲಿ ಮತಾಂತರ ಪಿಡುಗು ಬಾರಿ ಸದ್ದು ಮಾಡುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಸಹ ಮತಾಂತರ ಕಾಯ್ದೆ ಜಾರಿಗೆ ತರಬೇಕು ಎಂದು ಆಡಳಿತ ಪಕ್ಷವಿದ್ದರೆ, ಮತ್ತೊಂದು ಕಡೆ ವಿರೋಧ ಪಕ್ಷಗಳು ಮತಾಂತರ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಪುಟ್ಟಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ರಾಜ್ಯದೆಲ್ಲೆಡೆ ಹಬ್ಬಿತ್ತು. ಪುತ್ರ ತಿಪ್ಪೇಸ್ವಾಮಿ ಸಾವಿನ ಬಳಿಕ ಪುಟ್ಟಮ್ಮ ಹಿಂದೂ ದೇವರ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿತ್ತು. ಗೂಳಿಹಟ್ಟಿ ಗ್ರಾಮದಲ್ಲಿ ವಾಸವಾಗಿರುವ ಶಾಸಕರ ತಾಯಿ ಪುಟ್ಟಮ್ಮ ಹೊಸದುರ್ಗ ಪಟ್ಟಣದ ಹಿರಿಯೂರು ರಸ್ತೆಯಲ್ಲಿರುವ ಚರ್ಚ್‌ಗೆ ಪ್ರತಿದಿನ ಪ್ರಾರ್ಥನೆಗೆ ತೆರಳಿ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು ಎಂದು ತಿಳಿದು ಬಂದಿತ್ತು.

ಪುಟ್ಟಮ್ಮನವರಿಗೆ ಮೂವರು ಮಕ್ಕಳು. ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಮೊದಲ ಮಗ ತಿಪ್ಪೇಸ್ವಾಮಿ ಏಳು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದ ಬೇಸರಗೊಂಡ ತಾಯಿ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಗಳನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದರು.

 ಹಿಂದೂ ಧರ್ಮದ ದೇವರ ಮೇಲೆ ಪುಟ್ಟಮ್ಮ ಬೇಸರ

ಹಿಂದೂ ಧರ್ಮದ ದೇವರ ಮೇಲೆ ಪುಟ್ಟಮ್ಮ ಬೇಸರ

ಗೂಳಿಹಟ್ಟಿ ಗ್ರಾಮದಲ್ಲಿ ಪುಟ್ಟಮ್ಮ ಇರುವ ಮನೆ 2018ರ ಮಳೆಗಾಲದಲ್ಲಿ ಬಿದ್ದು ಹೋಗಿತ್ತು. ಶಾಸಕರು ತಾಯಿಗಾಗಿ ಹೊಸ ಮನೆಯನ್ನು ಕಟ್ಟಿಸಿಕೊಟ್ಟಿದ್ದರು. ಮನೆ ಗೃಹ ಪ್ರವೇಶದ ಸಂದರ್ಭದಲ್ಲಿ ಹಿಂದೂ ದೇವರುಗಳ ಫೋಟೋಗಳಿಗೆ ಪೂಜೆ ಸಲ್ಲಿಸಿದ್ದರು. ಆದ್ದರಿಂದ ಪುಟ್ಟಮ್ಮ ಆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಬದಲಿಗೆ ಹೊಸದುರ್ಗ ಪಟ್ಟಣದ ಗೊರವಿನಕಲ್ಲು ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಪತಿ ದಿವಾಕರಪ್ಪ ಮತ್ತು ಪುತ್ರ ತಿಪ್ಪೇಸ್ವಾಮಿ ಸಾವಿನ ಬಳಿಕ ಹಿಂದೂ ಧರ್ಮದ ದೇವರ ಮೇಲೆ ಪುಟ್ಟಮ್ಮ ಬೇಸರ ವ್ಯಕ್ತಪಡಿಸುತ್ತಿದ್ದರು ಎಂಬ ಮಾಹಿತಿ ಇದೆ. ಶೇಖರ್ ಹಿಂದೂ ಧರ್ಮ ಹಾಗೂ ದೇವರುಗಳ ಭಕ್ತರಾಗಿದ್ದರು. ಪುಟ್ಟಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ? ಎಂಬ ಬಗ್ಗೆ ಅಧಿಕೃತವಾಗಿ ಯಾರೂ ಸಹ ಮಾಹಿತಿ ನೀಡಿರಲಿಲ್ಲ.

 ಸದನದಲ್ಲಿ ಧ್ವನಿ ಎತ್ತಿದ್ದ ಗೂಳಿಹಟ್ಟಿ

ಸದನದಲ್ಲಿ ಧ್ವನಿ ಎತ್ತಿದ್ದ ಗೂಳಿಹಟ್ಟಿ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ನನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ನನ್ನ ಮತಕ್ಷೇತ್ರದ ಜನರಿಗೆ ಆಸೆ ಆಮಿಷಗಳನ್ನು ಒಡ್ಡಿ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಕೊಂಡಿದ್ದಾರೆ ಎಂದು ಮತಾಂತರ ಪಿಡುಗು ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಆಕ್ರೋಶ ವ್ಯಕ್ತಪಡಿಸಿ ಎಲ್ಲರ ಗಮನ ಸೆಳೆದಿದ್ದರು.

 ವರದಿಯಲ್ಲಿ ಏನಿದೆ

ವರದಿಯಲ್ಲಿ ಏನಿದೆ

ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಪುಟ್ಟಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಭಾರೀ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸಿದ್ದರು. ಪುಟ್ಟಮ್ಮ ಬಲವಂತದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ, ಯಾವುದೇ ದಾಖಲೆಗಳಿಲ್ಲ ಎಂದು ಪೊಲೀಸರ ತನಿಖಾ ವರದಿ ಹೇಳಿದೆ. ಪುಟ್ಟಮ್ಮನವರು ಕ್ರಿಶ್ಚಿಯನ್ ಧರ್ಮದ ಆಚರಣೆಗಳನ್ನು ಮಾಡುತ್ತಿರುವುದು ಖಚಿತವಾಗಿದೆ.

ಬಲವಂತದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಆರೋಪ ಮೂರು ತಿಂಗಳ ಹಿಂದೆ ಕೇಳಿ ಬಂದಿತ್ತು. ಆದ್ದರಿಂದ, ಪೊಲೀಸರು ಸ್ವಯಂ ಪ್ರೇರಿತವಾಗಿ ತನಿಖೆಯನ್ನು ಕೈಗೊಂಡಿದ್ದರು. ಬಲವಂತದ ಮತಾಂತರ ಸಾಬೀತಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರು.

ಪುಟ್ಟಮ್ಮ ಹೊಸದುರ್ಗ ಪಟ್ಟಣದ ಹಿರಿಯೂರು ರಸ್ತೆಯಲ್ಲಿರುವ ಚರ್ಚ್‌ಗೆ ಪ್ರತಿ ಭಾನುವಾರ ಪ್ರಾರ್ಥನೆಗೆ ತೆರಳುತ್ತಾರೆ. ಚರ್ಚ್‌ನ ಸಿಬ್ಬಂದಿಗಳು ಸಹ ಇದನ್ನು ಒಪ್ಪಿಕೊಂಡಿದ್ದಾರೆ. ಸ್ವಯಂ ಪ್ರೇರಿತವಾಗಿ ಚರ್ಚ್‌ಗೆ ಹೋಗುತ್ತಿದ್ದೇನೆ ಎಂದು ಪುಟ್ಟಮ್ಮ ಪೊಲೀಸರಿಗೆ ಹೇಳಿಕೆಯನ್ನು ಸಹ ನೀಡಿದ್ದರು.

 ಶಾಸಕರ ತಾಯಿ ಮತಾಂತರ ಬಗ್ಗೆ ಎಸ್ಪಿ ಹೇಳಿಕೆ

ಶಾಸಕರ ತಾಯಿ ಮತಾಂತರ ಬಗ್ಗೆ ಎಸ್ಪಿ ಹೇಳಿಕೆ

ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಈ ಕುರಿತು ಮಾತನಾಡಿದ್ದು, "ಮತಾಂತರ ಆರೋಪದ ಕುರಿತು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಲಾಯಿತು. ಪುಟ್ಟಮ್ಮ ಅವರ ಹೇಳಿಕೆಯನ್ನು ಸಹ ಪಡೆಯಲಾಗಿದೆ. ಸ್ವಯಂ ಪ್ರೇರಿತವಾಗಿ ಚರ್ಚ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಬಲವಂತದ ಮತಾಂತರ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ,'' ಎಂದು ತಿಳಿಸಿದ್ದರು.

 ಪತಿ, ಮಗನ ಸಾವು, ಚರ್ಚ್‌ನಲ್ಲಿ ನೆಮ್ಮದಿ ಸಿಕ್ಕಿದೆ

ಪತಿ, ಮಗನ ಸಾವು, ಚರ್ಚ್‌ನಲ್ಲಿ ನೆಮ್ಮದಿ ಸಿಕ್ಕಿದೆ

ಪೊಲೀಸ್ ಅಧಿಕಾರಿಗಳ ತಂಡ ಹೊಸದುರ್ಗದ ಎಲ್ಲಾ ಚರ್ಚ್‌ಗಳ ಧಾರ್ಮಿಕ ಮುಖಂಡರು, ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿರುವ ಹಲವರ ಹೇಳಿಕೆಗಳನ್ನು ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಬಲವಂತದ ಮತಾಂತರ ನಡೆದಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಪುಟ್ಟಮ್ಮ ಪತಿ ದಿವಾಕರಪ್ಪ ಮತ್ತು ಪುತ್ರ ತಿಪ್ಪೇಸ್ವಾಮಿ ಸಾವಿನ ಬಳಿಕ ಹಿಂದೂ ಧರ್ಮದ ದೇವರ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದರು. ಚರ್ಚ್‌ಗೆ ಹೋಗಲು ಪ್ರಾರಂಭಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. "ಮಗನ ಸಾವಿನ ಬಳಿಕ ದೇವರ ಮೇಲಿನ ನಂಬಿಕೆ ಹೋಗಿದೆ. ದೇವರ ಪೂಜೆ ಮಾಡುವುದು ಬಿಟ್ಟಿದ್ದೇನೆ. ಚರ್ಚ್‌ಗೆ ಹೋಗಿ- ಬರಲು ಪ್ರಾರಂಭಿಸಿದ ಮೇಲೆ ನೆಮ್ಮದಿ ಸಿಕ್ಕಿದೆ,'' ಎಂದು ಪುಟ್ಟಮ್ಮ ತಿಳಿಸಿದ್ದರು.

"ಚರ್ಚ್‌ಗೆ ಬಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಮತಾಂತರವಾಗುವುದಿಲ್ಲ. ಶಾಸಕರ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ," ಎಂದು ಹೊಸದುರ್ಗದ ಹಿರಿಯೂರು ರಸ್ತೆಯಲ್ಲಿರುವ ಚರ್ಚ್‌ನ ಫಾದರ್ ಜಾರ್ಜ್ ಸ್ಟೀವನ್ ಡಿಸೋಜ ಪ್ರತಿಕ್ರಿಯಿಸಿದ್ದರು.

 ಪ್ರಾರ್ಥನೆ ಚರ್ಚ್‌ಗೆ ಬಂದವರನ್ನು ಪ್ರಶ್ನಿಸಿದ ಶಾಸಕ

ಪ್ರಾರ್ಥನೆ ಚರ್ಚ್‌ಗೆ ಬಂದವರನ್ನು ಪ್ರಶ್ನಿಸಿದ ಶಾಸಕ

ಹೊಸದುರ್ಗ ಪಟ್ಟಣದ ಶಾಂತಿ ನಗರದಲ್ಲಿ ಚರ್ಚ್‌ಗೆ ಬಂದವರನ್ನು ಶಾಸಕರು ಪ್ರಶ್ನಿಸಿದ್ದ ವಿಡಿಯೋ ವೈರಲ್ ಆಗಿತ್ತು. ಕಳೆದ ಭಾನುವಾರ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಂಡಿದ್ದರು. ಚರ್ಚ್‌ನಲ್ಲಿ ಪ್ರಾರ್ಥನೆ ಜನರು ಮುಗಿಸಿ ಹೊರ ಬಂದಾಗ ಅದೇ ಸಮಯಕ್ಕೆ ಶಾಸಕರು ಕಾರಿನಲ್ಲಿ ಬೇರೆಡೆ ತೆರಳುವಾಗ ಚರ್ಚ್ ಬಳಿ ಕಾರು ನಿಲ್ಲಿಸಿ ಪ್ರಶ್ನೆ ಮಾಡಲಾಗಿದೆ. ಆಗ ಶಾಸಕರು, "ಯಾವ ಊರು? ಯಾವ ಸಮುದಾಯ? ಮತಾಂತರ ಆಗಿದ್ದಿರಾ? ಎಷ್ಟು ವರ್ಷಗಳಿಂದ ಮತಾಂತರ ಆಗಿದ್ದೀರಾ? ಹೀಗೆ ಹಲವು ಪ್ರಶ್ನೆ ಮಾಡಿದ್ದಾರೆ. ಪ್ರಾರ್ಥನೆಗೆ ಬಂದವರು ಶಾಸಕರ ಮಾತಿಗೆ ಪ್ರತಿಕ್ರಿಯಿಸಿರುವ ಅವರು ನಾವು ಹಲವು ವರ್ಷಗಳಿಂದ ಮತಾಂತರಗೊಂಡಿದ್ದೇವೆ. ಚರ್ಚ್‌ಗೆ ನಡೆದುಕೊಳ್ಳುತ್ತಿವಿ. ಚರ್ಚ್‌ಗೆ ಬಂದಿದ್ದಕ್ಕೆ ನಮಗೆ ಆರೋಗ್ಯ ಸುಧಾರಣೆಯಾಗಿದೆ," ಎಂದು ಅಲ್ಲಿದ್ದವರು ಶಾಸಕರಿಗೆ ಉತ್ತರಿಸಿದ್ದಾರೆ.

 ಹಿಂದೂ ಧರ್ಮಕ್ಕೆ ವಾಪಸ್

ಹಿಂದೂ ಧರ್ಮಕ್ಕೆ ವಾಪಸ್

ಸುಮಾರು ಎರಡು ವರ್ಷಗಳ ಹಿಂದೆ ಆಸೆ, ಆಮಿಷಗಳಿಗೆ ಒಳಗಾಗಿ ನಾಲ್ಕು ಕುಟುಂಬಗಳು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದವು. ಕಳೆದ ಅಕ್ಟೋಬರ್ 11ರಂದು ಶಾಸಕ ಗೂಳಿಹಟ್ಟಿ ಶೇಖರ್‌ರವರ ತಾಯಿ ಹಾಗೂ ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿ ಕರೆ ತಂದಿದ್ದರು. ಹೊಸದುರ್ಗ ತಾಲ್ಲೂಕಿನ ಹಾಲು ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೇಸರಿ ಶಾಲು ಹಾಕಿ, ತೀರ್ಥ- ಪ್ರಸಾದ, ಮಂಜುನಾಥ ಸ್ವಾಮಿಯ ಫೋಟೋ ನೀಡಿ ಸ್ವಾಗತಿಸುವ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಬರಮಾಡಿಕೊಂಡಿದ್ದರು.

ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದ ನಾಲ್ಕು ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದವು. ಹಿಂದೂ ಧರ್ಮಕ್ಕೆ ಶಾಸಕ ಶೇಖರ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ವಾಪಸ್ ಬಂದಿದ್ದರು.

 ಹೊಸದುರ್ಗ ತಹಶೀಲ್ದಾರ ವರ್ಗಾವಣೆ

ಹೊಸದುರ್ಗ ತಹಶೀಲ್ದಾರ ವರ್ಗಾವಣೆ

ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಶಾಸಕರ ಆರೋಪವನ್ನು ತಳ್ಳಿಹಾಕುವಂತಹ ವರದಿಯನ್ನು ನೀಡಿದ್ದರಿಂದ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರನ್ನು ಬೇರೆಡೆಗೆ ವರ್ಗಾವಣೆಗೊಳಿಸಲಾಗಿದೆ. ಹೊಸದುರ್ಗ ತಾಲೂಕಿನ ಮಾರುತಿ ನಗರ, ಶಾಂತಿ ನಗರದಲ್ಲಿ ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಯುತ್ತಿದೆ ಎಂದು ಶಾಸಕರು ಆರೋಪಿಸಿದ್ದರು. ಈ ಕುರಿತು ಸರ್ಕಾರ ವರದಿ ಸಲ್ಲಿಸುವಂತೆ ತಹಶೀಲ್ದಾರ ಅವರಿಗೆ ಸೂಚಿಸಿತ್ತು. ನವೆಂಬರ್ 30ರಂದು ಜಿಲ್ಲಾಧಿಕಾರಿಗಳ ಮೂಲಕ ಹೊಸದುರ್ಗ ತಹಶೀಲ್ದಾರ ತಿಪ್ಪೇಸ್ವಾಮಿ ವರದಿಯನ್ನು ನೀಡಿದ್ದರು.

English summary
Here is the of real story behind BJP MLA Goolihatti Shekhar Mother Religion Conversion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X