ದುಬಾರಿಯಾದ ಟೊಮೆಟೊ ಬೆಳೆಯುವುದನ್ನು ಹೇಳಿಕೊಟ್ಟ ರಾಖಿ ಸಾವಂತ್!

ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ ಸಲಹೆಯೊಂದನು ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ. ಆ ಸಲಹೆ ಏನಪ್ಪ ಅಂದರೆ, ಟೊಮೆಟೊ ಬೆಳೆಯುವು. ಕೇವಲ 15 ದಿನಗಳಲ್ಲಿ ಟೊಮೆಟೊ ಬೆಳೆಯುವ ಸಲಹೆಯನ್ನು ವಿವಾದಾತ್ಮಕ ನಟಿ ರಾಖಿ ಸಾವಂತ್ ನೀಡಿದ್ದಾರೆ. ಸದ್ಯ ಈ ಐಡಿಯಾ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಇತ್ತೀಚೆಗೆ ಟೊಮೆಟೊ ಬೆಲೆ ಗಗನಕ್ಕೇರಿಕೆಯಾಗಿದ್ದು ಗ್ರಾಹಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಒಂದು ಬಾರಿ ಮಾರುಕಟ್ಟೆಗೆ ಹೋದರೆ ಎಲ್ಲಾ ತರಕಾರಿಯನ್ನು ತರುವ ಹಣದಲ್ಲಿ ಸದ್ಯ ಟೊಮೆಟೊ ಮಾತ್ರ ಖರೀದಿಬೇಕಾದ ಪರಿಸ್ಥಿತಿ ಉಂಟಾಗಿದೆ. ಸೇಬಿನ ಹಣ್ಣಿಗಿಂತಲೂ ಟೊಮೆಟೊ ಬೆಲೆ ಅಧಿಕವಾಗಿದ್ದು, ಗ್ರಾಹಕರು ಚಿಂತೆಗೀಡಾಗಿದ್ದಾರೆ.

Rakhi Sawant taught how to grow an expensive tomato!

ನಿತ್ಯ ಟೊಮೆಟೊ ಇಲ್ಲದೆ ಯಾವುದೇ ಅಡುಗೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಟೊಮೆಟೊ ನಿತ್ಯದ ಅಡುಗೆ ಬೇಕೇ ಬೇಕು. ಸದ್ಯ ಅದರ ಬೆಲೆ ನೋಡಿ ಗ್ರಾಹಕರು ಟೊಮೆಟೊ ಖರೀದಿ ಹೇಗಪ್ಪ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ರಾಖಿ ಸಾವಂತ್ ಸಲಹೆಯನ್ನು ನೀಡಿದ್ದಾಳೆ. ಈ ಮೂಲಕ ಆಕೆ ಮತ್ತೊಮ್ಮೆ ಗಮನ ಸೆಳೆದಿದ್ದಾಳೆ.

ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಇನ್ಸ್ಟಾಗ್ರಾಮ್ನಲ್ಲಿ ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. "ಸ್ನೇಹಿತರೇ, ನಾನು ಟೊಮೆಟೊ ಬೆಳೆಯುತ್ತಿದ್ದೇನೆ, ಒಮ್ಮೆ ನೋಡಿ" ಎಂದು ರಾಖಿ ಹೇಳುವ ಮೂಲಕ ವೀಡಿಯೊ ಆರಂಭವಾಗುತ್ತದೆ.

ಇದೇ ವಿಡಿಯೋದಲ್ಲಿ "ಇದು ಅದ್ಭುತವಾಗಿದೆ" ಎಂದು ವರದಿಗಾರರೊಬ್ಬರು ಹೇಳುವುದು ಕೇಳುತ್ತದೆ. "ಟೊಮೆಟೊ ಬೆಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?" ಎಂದು ಇನ್ನೊಬ್ಬ ವರದಿಗಾರ ರಾಖಿ ಅವರನ್ನು ಕೇಳುತ್ತಾರೆ. ಆಗ ರಾಖಿ ಸಾವಂತ್ ಸಸಿ ಹದಿನೈದು ದಿನಗಳಲ್ಲಿ ತಾಜಾ ಹಣ್ಣುಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ. ವೀಡಿಯೊದಲ್ಲಿ, ರಾಖಿಯ ಉದ್ಯೋಗಿಯೊಬ್ಬರು ಅವರಿಗೆ ಸಹಾಯ ಮಾಡುವುದನ್ನು ಕಾಣಬಹುದು.

Rakhi Sawant taught how to grow an expensive tomato!

ಭಯಾನಿ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, "ಟೊಮ್ಯಾಟೊ ಈಗ ನಮ್ಮ ಜೀವನಕ್ಕಿಂತ ಹೆಚ್ಚು ಅಮೂಲ್ಯವಾಗಿದೆ. ರಾಖಿ ಟೊಮೆಟೊ ಬೆಳೆಯುತ್ತಿದ್ದಾರೆ" ಎಂದು ಬರೆದಿದ್ದಾರೆ. ಈ ವೀಡಿಯೊ 9,79,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕಾರ್ಯಕ್ಕೆ ಖುಷಿಯಾಗಿದ್ದಾರೆ. ಜೊತೆಗೆ ಸಾಕಷ್ಟು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಎಜೆ ಬಾಲಿವುಡ್ ಅಪ್‌ಲೋಡ್ ಮಾಡಿದ ಮತ್ತೊಂದು ಕ್ಲಿಪ್‌ನಲ್ಲಿ, ರಾಖಿ ತರಕಾರಿಗಳು, ವಿಶೇಷವಾಗಿ ಟೊಮೆಟೊಗಳ ಗಗನಕ್ಕೇರುತ್ತಿರುವ ಬೆಲೆಗಳ ಬಗ್ಗೆ ತಮ್ಮ ಆಕ್ರೋಶವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಆಕೆ ತನ್ನ ತಲೆಯನ್ನು ಗೋಡೆಗೆ ಹೊಡೆದಂತೆ ನಟಿಸಿದಳು. ನಂತರ ಸುದ್ದಿಗಾರರಿಗೆ ಅದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದಳು. ಆಲೂಗಡ್ಡೆ, ಟೊಮೆಟೊ, ಈರುಳ್ಳಿಯಂತಹ ತರಕಾರಿಗಳ ಬೆಲೆ ದುಬಾರಿಯಾಗಿದೆ ಎಂದು ರಾಖಿ ಹೇಳಿದರು. ಟೊಮ್ಯಾಟೊ ಕಿಲೋಗೆ 120 ರೂ.ಗೆ ಮಾರಾಟವಾಗುತ್ತಿದೆ ಎಂದು ತಿಳಿಸಿದರು. ಹಸಿಮೆಣಸಿನಕಾಯಿ ಕೂಡ ದುಬಾರಿಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+