ರಾಜಸ್ಥಾನ: ನಾಯಿಯನ್ನು ಕಿಡ್ನ್ಯಾಪ್ ಮಾಡಿದ ಕೋತಿ: ವಿಡಿಯೋ
ಕೋತಿಯೊಂದು ನಾಯಿ ಮರಿಯನ್ನು ತನ್ನೊಂದಿಗೆ ಹೊತ್ತೊಯ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಜೈಪುರ ನಗರದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಗಂಗೌರ್ ಮಾರುಕಟ್ಟೆ ಪ್ರದೇಶದಲ್ಲಿ ಕೋತಿಯೊಂದು ನಾಯಿ ಮರಿಯನ್ನು ತನ್ನೊಂದಿಗೆ ಹೊತ್ತೊಯ್ದಿದೆ. ಬೀದಿ ನಾಯಿಯನ್ನು ಕೋತಿ ಅಪಹರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಪ್ರಾಣಿಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುವುದರಿಂದ ಹಲವರು ಪ್ರಾಣಿಗಳ ವಿವಿಧ ಚಲನವಲನಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಈ ವಿಡಿಯೊಗಳಲ್ಲಿ ನಾವು ಪ್ರಾಣಿಗಳ ವಿವಿಧ ಗುಣಗಳನ್ನು ನೋಡುತ್ತೇವೆ. ಕೆಲವೊಮ್ಮೆ ಅವುಗಳ ಭಯಾನಕ ಕೃತ್ಯಗಳ ವಿಡಿಯೊಗಳು ಮತ್ತು ಕೆಲವೊಮ್ಮೆ ಆಘಾತಕಾರಿ ಘಟನೆಗಳು ಸಹ ಕಂಡುಬರುತ್ತವೆ.

ಕೆಲವು ದಿನಗಳ ಹಿಂದೆ, ಕೋತಿಗಳು ನಾಯಿಗಳನ್ನು ಎತ್ತಿಕೊಂಡು ಮರಗಳು ಮತ್ತು ಛಾವಣಿಗಳ ಮೇಲೆ ಎಸೆಯುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದನ್ನು ನೋಡಿ ಅನೇಕ ಜನರು ಆಘಾತಕ್ಕೊಳಗಾಗಿದ್ದರು. ಇದಲ್ಲದೆ, ಅನೇಕ ಜನರು ಮಂಗಗಳನ್ನು ಓಡಿಸಲು ಒತ್ತಾಯಿಸಿದ್ದರು. ಕೋತಿಯ ಮತ್ತೊಂದು ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕೋತಿಯೊಂದು ನಾಯಿಮರಿಯನ್ನು ಕಟ್ಟಡದ ಮೇಲ್ಛಾವಣಿಯ ಮೇಲೆ ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು.
ಈ ಘಟನೆ ರಾಜಸ್ಥಾನದ ಜೈಪುರದ ಗಂಗೌರಿ ಬಜಾರ್‌ನಲ್ಲಿ ನಡೆದಿದೆ ಎನ್ನಲಾಗಿದೆ. ವಿಡಿಯೊದಲ್ಲಿ, ಅಂಗಡಿಯೊಂದರ ಛಾವಣಿಯ ಮೇಲೆ ಕುಳಿತಿರುವ ಮಂಗ ಚಿಕ್ಕ ನಾಯಿಮರಿಯನ್ನು ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಂಗಡಿಯ ಮುಂದೆ ಜನರು ನಿಂತಿರುವ ಶಬ್ದ ಕೇಳಿದ ತಕ್ಷಣ, ಈ ಕೋತಿ ಅಲ್ಲಿಂದ ಎದ್ದು ನಾಯಿಮರಿಯನ್ನು ಹಿಡಿದುಕೊಂಡು ಕಟ್ಟಡ ಮೇಲಕ್ಕೆ ಹಾರಿದೆ. ನಾಯಿ ಮರಿಯನ್ನು ಕಿತ್ತುಕೊಂಡು ಹೋಗುವಾಗ ನಾಯಿ ಮರಿಯೂ ಹೆದರಿದಂತೆ ಕಾಣುತ್ತದೆ.

ಈ ವಿಡಿಯೊವನ್ನು @HasnaZarooriHai ಹೆಸರಿನ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಟ್ವೀಟ್‌ನ ಶೀರ್ಷಿಕೆಯಲ್ಲಿ, 'ಜೈಪುರದ ಗಂಗೌರಿ ಮಾರುಕಟ್ಟೆಯಲ್ಲಿ ಮಂಗ ನಾಯಿಮರಿಯನ್ನು ಎತ್ತುಕೊಂಡು ಹೋಗಿದೆ ಎಂದು ಬರೆಯಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಹಲವರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ನಾಯಿ ಮತ್ತು ಕೋತಿಗಳ ನಡುವಿನ ಗ್ಯಾಂಗ್ ವಾರ್ ಮುಂದುವರೆದಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಕೆಲವು ನೆಟಿಜನ್‌ಗಳು, ದಯವಿಟ್ಟು ನಾಯಿಮರಿಯನ್ನು ಉಳಿಸಿ ಎಂದು ಕೂಡ ಬರೆದಿದ್ದಾರೆ.
ಮತ್ತೊಂದು ಘಟನೆ:-
ವೈರಲ್ ವಿಡಿಯೋದಲ್ಲಿ ಮಂಗವೊಂದು ಮನುಷ್ಯನಂತೆ ಚಾಕುವನ್ನು ಹರಿತಗೊಳಿಸುತ್ತಿರುವುದು ಕಂಡು ಬಂದಿದೆ. ಇದನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋ ಶೇರ್ ಆದ ತಕ್ಷಣ ವೈರಲ್ ಆಗಿದ್ದು, ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಕೋತಿ ಚಾಕು ಹರಿತಗೊಳಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿದ ತಕ್ಷಣ ಸಾವಿರಾರು ಲೈಕ್‌ಗಳು ಬಂದಿದ್ದು, ಈ ಮಂಗನ ಚೇಷ್ಟೆ ನೋಡಿ ಜನರು ಕೋತಿಗೆ ಸಂಬಂಧಿಸಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಅನುಭವವಿರುವಂತೆ ಚಾಕು ಹರಿತಗೊಳಿಸಿದ ಕೋತಿ
ಈ ಹಿಂದೆ ಕೋತಿ ಇಂತಹ ಕೃತ್ಯವನ್ನು ಮಾಡುವುದನ್ನು ನೀವು ನೋಡಿರಲು ಸಾಧ್ಯವಿಲ್ಲ. ಈ ವಿಡಿಯೋದಲ್ಲಿ ಕೋತಿಯು ಅನುಭವವಿರುವಂತೆ ಕೈಯಲ್ಲಿ ಚಾಕುವನ್ನು ಹರಿತಗೊಳಿಸುತ್ತಿರುವುದು ಕಂಡುಬಂದಿದೆ. ಚಾಕುವನ್ನು ಹರಿತವಾಗುವಂತೆ ತೀಕ್ಷ್ಣಗೊಳಿಸುತ್ತದೆ. ಚಾಕುವನ್ನು ಹರಿತಗೊಳಿಸುವಾಗ, ಕೋತಿ ನೀರು ಹಾಕುವುದು ಸಹ ಕಂಡುಬಂದಿದೆ.











Click it and Unblock the Notifications