ಹೆಬ್ಬಾವು Vs ಕೊಮೊಡೊ ಡ್ರ್ಯಾಗನ್: ಗೆದ್ದಿದ್ದು ಯಾರು ವಿಡಿಯೋ ನೋಡಿ....

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದು ಪ್ರಾಣಿಗಳ ವಿಡಿಯೋಗಳು ನೋಡಲು ಮನಸ್ಸಿಗೆ ಸಂತೋಷವನ್ನು ನೀಡಿದರೆ ಇನ್ನೂ ಕೆಲವು ಭೀತಿಯನ್ನು ಹುಟ್ಟಿಸುತ್ತವೆ. ಇಂಥಹ ಭಯ ಹುಟ್ಟಿಸುವ ವಿಡಿಯೋವೊಂದು ವೈರಲ್ ಆಗಿದೆ.

ಬೃಹತ್ ಪೈಥಾನ್‌ವೊಂದು ಕೊಮೊಡೊ ಡ್ರ್ಯಾಗನ್ ಜೊತೆ ಕಾದಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೃಹತ್ ಹೆಬ್ಬಾವು ಕೊಮೊಡೊ ಡ್ರ್ಯಾಗನ್ ಸುತ್ತ ಸುತ್ತಿಕೊಂಡಿದ್ದು ಎರಡು ಕೂಡ ಕಾದಾಡುತ್ತಿವೆ. ಒಮ್ಮೆ ಹೆಬ್ಬಾವು ಕೊಮೊಡೊ ಡ್ರ್ಯಾಗನ್ ಅನ್ನು ಕಚ್ಚಿದರೆ ಮತ್ತೊಮ್ಮೆ ಕೊಮೊಡೊ ಡ್ರ್ಯಾಗನ್ ಮೇಲೆ ಹೆಬ್ಬಾವು ದಾಳಿ ಮಾಡುತ್ತದೆ. ಈ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.

ವಿಡಿಯೊವನ್ನು ಇಲ್ಲಿ ವೀಕ್ಷಿಸಿ....

ಉಡಾಗಳ ಕಾದಾಟ

ಕಾಡುಪ್ರಾಣಿಗಳ ನಡುವಿನ ಘೋರ ಕಾದಾಟದ ವಿಡಿಯೋಗಳು ಅಂತರ್ಜಾಲದಲ್ಲಿ ಹೇರಳವಾಗಿವೆ. ಅಂತಹ ಒಂದು ದೃಶ್ಯವನ್ನು ಇತ್ತೀಚೆಗೆ ಕ್ಯಾಮರಾದಲ್ಲಿ ಸೆರೆಹಿಡಿದು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಎರಡು ಉಡಾಗಳು ಎದ್ದುನಿಂತು ಹೋರಾಡುತ್ತಿರುವುದನ್ನು ವಿಡಿಯೊ ಚಿತ್ರಿಸಲಾಗಿದೆ. ಆಕರ್ಷಕ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

python-vs-komodo-dragon-fight-video-goes-viral

ಐಐಎಂ ಕೋಲ್ಕತ್ತಾ ಕ್ಯಾಂಪಸ್‌ನಲ್ಲಿ ಎರಡು ಸರೀಸೃಪಗಳು ಕಾದಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. "IIM ಕೋಲ್ಕತ್ತಾದಿಂದ ಮುಂಜಾನೆಯ ದೃಶ್ಯ... " ಎಂದು IFS ಅಧಿಕಾರಿ ವಿಡಿಯೊ ಕ್ಲಿಪ್‌ಗೆ ಶೀರ್ಷಿಕೆ ನೀಡಿದ್ದಾರೆ. ವಿಡಿಯೊವನ್ನು Twitter ನಲ್ಲಿ ಹಂಚಿಕೊಂಡಾಗಿನಿಂದ 392.6k ವೀಕ್ಷಣೆಗಳು, ಸುಮಾರು 2,000 ಲೈಕ್ಸ್‌ ಅನ್ನು ಪಡೆದಿದೆ ಮತ್ತು ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಲಾಗಿದೆ.

"ಎರಡು ಉಡಾಗಳು ಜಗಳವಾಡುತ್ತಿವೆ. ಸಂತಾನೋತ್ಪತ್ತಿಗಾಗಿ ಗಂಡು ಮತ್ತು ಹೆಣ್ಣು ಉಡಾಗಳು ಈ ರೀತಿ ಜಗಳವಾಡುವುದಿಲ್ಲ. ಅವು ನೆಲದ ಮೇಲೆ ಇರುತ್ತವೆ"ಒಬ್ಬ ಬಳಕೆದಾರರೊಬ್ಬರು ಬರೆದಿದ್ದಾರೆ.. "OMG...ಆಕರ್ಷಕವಾಗಿದೆ. ಪ್ರಕೃತಿ ಅದ್ಭುತವಾಗಿದೆ " ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಮಂಗನಿಂದ ನಾಯಿ ಕಿಡ್ನ್ಯಾಪ್

ಅಂಗಡಿಯೊಂದರ ಛಾವಣಿಯ ಮೇಲೆ ಕುಳಿತಿರುವ ಮಂಗ ಚಿಕ್ಕ ನಾಯಿಮರಿಯನ್ನು ಹಿಡಿದಿರುವ ವಿಡಿಯೋ ವೈರಲ್ ಆಗಿತ್ತು. ಅಂಗಡಿಯ ಮುಂದೆ ಜನರು ನಿಂತಿರುವ ಶಬ್ದ ಕೇಳಿದ ತಕ್ಷಣ, ಈ ಕೋತಿ ಅಲ್ಲಿಂದ ಎದ್ದು ನಾಯಿಮರಿಯನ್ನು ಹಿಡಿದುಕೊಂಡು ಕಟ್ಟಡ ಮೇಲಕ್ಕೆ ಹಾರಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+